Illegal Mosque Demolished: ದೆಹಲಿ: ಮಹಾನಗರ ಪಾಲಿಕೆಯಿಂದ ಮಸೀದಿಯ ಅಕ್ರಮ ಭಾಗ ಧ್ವಂಸ!

ಕಾರ್ಯಾಚರಣೆಯ ವೇಳೆ ಮುಸಲ್ಮಾನರಿಂದ ಪ್ರತಿಭಟನೆ, ಕಲ್ಲು ತೂರಾಟ

ಮಂಗೋಲ್ಪುರಿ ಮಸೀದಿ

ನವದೆಹಲಿ – ದೆಹಲಿಯ ಮಂಗೋಲ್ಪುರಿಯಲ್ಲಿ ಮಸೀದಿಯೊಂದರ ಅಕ್ರಮ ನಿರ್ಮಾಣದ ವಿರುದ್ಧ ದೆಹಲಿ ಮಹಾನಗರ ಪಾಲಿಕೆಯು ಕ್ರಮ ಕೈಗೊಂಡಿತು. ಮಸೀದಿಯ ಅಕ್ರಮ ನಿರ್ಮಾಣವನ್ನು ತೆಗೆಯುವಾಗ ಸಾಕಷ್ಟು ಗಲಾಟೆಯಾಯಿತು. ಈ ಗಲಾಟೆಯ ನಡುವೆಯೇ ಮಸೀದಿಯ ಅಕ್ರಮ ಭಾಗ ಹಾಗೂ ಇತರ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲಾಯಿತು. ಈ ಕಾರ್ಯಾಚರಣೆ ವೇಳೆ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪಾಲಿಕೆಯ ಈ ಕ್ರಮವನ್ನು ಮುಸಲ್ಮಾನರು ತೀವ್ರ ವಿರೋಧಿಸಿದರು. ಈ ಅಕ್ರಮ ಮಸೀದಿಯ ವಿರುದ್ಧ ದೂರುಗಳು ಬಂದ ನಂತರ ಈ ಕ್ರಮ ಕೈಗೊಳ್ಳಲಾಯಿತು.

ಪೊಲೀಸರು ಮತ್ತು ಪಾಲಿಕೆಯ ಅಧಿಕಾರಿಗಳು ಕಾರ್ಯಾಚರಣೆಗಾಗಿ ಸ್ಥಳಕ್ಕೆ ತಲುಪಿದಾಗ, ಮುಸ್ಲಿಂ ಪುರುಷರು ಮತ್ತು ಮಹಿಳೆಯರು ಮಸೀದಿಯ ಮೇಲೆ ಹತ್ತಿದರು, ಪ್ರತಿಭಟನೆ ನಡೆಸಿ ಕಲ್ಲು ತೂರಾಟ ಮಾಡಿದರು. ಈ ವಿರೋಧದ ನಡುವೆಯೂ ಮಸೀದಿಯ ಅಕ್ರಮ ಭಾಗವನ್ನು ಕೆಡವಲಾಯಿತು.

ಸಂಪಾದಕೀಯ ನಿಲುವು

* ಮೊದಲು ಅಕ್ರಮ ನಿರ್ಮಾಣ ಮಾಡಿ ನಂತರ ಸರ್ಕಾರ ಕ್ರಮ ಕೈಗೊಂಡರೆ ಕಾನೂನನ್ನು ಕೈಗೆತ್ತಿಕೊಳ್ಳುವ ಮನೋಭಾವನೆಯ ಮತಾಂಧ ಮುಸ್ಲಿಮರು!

* ‘ಭಾರತದಲ್ಲಿ ಮುಸ್ಲಿಮರು ಅಸುರಕ್ಷಿತರಾಗಿದ್ದಾರೆ’ ಎಂದು ಹೇಳುವವರು ಇಂತಹ ಘಟನೆಗಳ ಬಗ್ಗೆ ಮಾತನಾಡುವುದಿಲ್ಲ ಏಕೆ ?

* ಅಕ್ರಮ ನಿರ್ಮಾಣ ಆಗುವವರೆಗೂ ಸರ್ಕಾರ ನಿದ್ದೆ ಮಾಡುತ್ತಿತ್ತೇ? ಸರ್ಕಾರಿ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು!