ಹಿಂದೂಗಳು ಸಾಧನೆ ಮತ್ತು ಕ್ಷಾತ್ರತೇಜವನ್ನು ತ್ಯಜಿಸಿದುದರಿಂದ ಲವ್ ಜಿಹಾದ್ನಂತಹ ಘಟನೆಗಳಲ್ಲಿ ಹೆಚ್ಚಳ ! – ಯತಿ ಮಾ ಚೇತನಾನಂದ ಸರಸ್ವತಿ, ಮಹಂತ, ಡಾಸನಾ ಪೀಠ, ಗಾಜಿಯಾಬಾದ್, ಉತ್ತರಪ್ರದೇಶ

ವೈಶ್ವಿಕ ಹಿಂದೂ ರಾಷ್ಟ್ರ ಅಧಿವೇಶನದ ಎರಡನೇ ದಿನದ ಮೊದಲ ಸತ್ರ (೨೫ ಜೂನ್) : ವಿವಿಧ ರಾಜ್ಯಗಳಲ್ಲಿನ ಹಿಂದೂಗಳ ದುಃಸ್ಥಿತಿ

ರಾಮನಾಥಿ ದೇವಸ್ಥಾನ – ಸ್ವಾತಂತ್ರ್ಯಪ್ರಾಪ್ತಿಯ ನಂತರ ಭಾರತದಲ್ಲಿನ ಕೆಲವು ಹಿಂದೂ ಮಹಿಳೆಯರು ಸ್ವೇಚ್ಛೆಯಿಂದ ಇತರ ಧರ್ಮಿಯರ ಜೊತೆಗೆ ಹೋಗುತ್ತಿದ್ದಾರೆ. ಚಲನಚಿತ್ರೋದ್ಯಮಗಳಿಗೆ ಸಿಗುವ ಇಸ್ಲಾಮಿ ಆರ್ಥಿಕ ಪೂರೈಕೆಯ ಮೂಲಕ ‘ಲವ್ ಜಿಹಾದ್’ನ ಬೀಜವನ್ನು ಬಿತ್ತಲಾಗುತ್ತದೆ. ಚಲನಚಿತ್ರೋದ್ಯಮದ ಮೂಲಕ ‘ಲವ್ ಜಹಾದ್’ನ ಕಥಾನಕ(ನರ‍್ಹೆಟಿವ್) ಯನ್ನು ತಯಾರಿಸಿ\ ಹಿಂದೂ ಧರ್ಮದಲ್ಲಿ ಮಹಿಳೆಯರನ್ನು ಗೌಣವಾಗಿ ಪರಿಗಣಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಹಿಂದೂ ಧರ್ಮವು ಹಿಂದುಳಿದ ಧರ್ಮವೆಂದು ತೋರಿಸುವ ಪ್ರಯತ್ನ ನಡೆದಿದೆ. ಭಾರತೀಯ ಮಹಿಳೆಯರ ಇತಿಹಾಸ ನೋಡಿದರೆ ಇತಿಹಾಸದಲ್ಲಿ ಅನೇಕ ವೀರಾಂಗನೆಯರು ಮತ್ತು ವಿದುಷಿಗಳಾಗಿ ಹೋಗಿರುವುದು ನಮಗೆ ಕಂಡು ಬರುತ್ತದೆ. ಹಿಂದೂ ಯುವತಿಯರಿಗೆ ಹಿಂದೂ ಧರ್ಮದ ಶಿಕ್ಷಣವನ್ನು ನೀಡಿದ್ದರೆ, ‘ಲವ್ ಜಿಹಾದ್’ನ ಸಂಕಟ ಬರುತ್ತಿರಲಿಲ್ಲ. ಸದ್ಯದ ಸ್ಥಿತಿಯಲ್ಲಿ ಕೇವಲ ಹಿಂದೂ ಯುವತಿಯರಷ್ಟೇ ಅಲ್ಲ, ಆದರೆ ವಿವಾಹಿತ ಮಹಿಳೆಯರೂ ಲವ್ ಜಿಹಾದ್’ಗೆ ಬಲಿಬೀಳುತ್ತಿದ್ದಾರೆ. ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಇವರ ಸರಕಾರ ಬಂದ ನಂತರ ಹಿಂದೂ ಯುವತಿಯರನ್ನು ಪೀಡಿಸುವ ಘಟನೆಗಳು ನಿಯಂತ್ರಣಕ್ಕೆ ಬಂದಿವೆ; ಆದರೆ ಸಂಪೂರ್ಣವಾಗಿ ನಿಂತಿಲ್ಲ. ಹಿಂದೂಗಳು ಶತ್ರುವಿನಿಂದ ಪಾಠ ಕಲಿಯದಿರುವುದೇ ನಮ್ಮ ಬಹು ದೊಡ್ಡ ತಪ್ಪಾಗಿದೆ. ಹಿಂದೂಗಳು ತಮ್ಮ ಸ್ವಂತ ಕುಟುಂಬದವರಿಗಾದರೂ ಶತ್ರುಗಳ ಒಳಸಂಚಿನ ಅರಿವು ಮಾಡಿಕೊಡಬೇಕು. ಹಿಂದೂಗಳು ಸಾಧನೆ ಮತ್ತು ಕ್ಷಾತ್ರತೇಜವನ್ನು ತ್ಯಜಿಸಿದುದರಿಂದ ಲವ್ ಜಿಹಾದ್ ನಂತಹ ಘಟನೆಗಳು ಹೆಚ್ಚಾಗಿವೆ. ಪ್ರಸ್ತುತ ಲೋಕಸಭೆಯ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ೩೭ ಸಂಸದರು ಚುನಾಯಿತರಾಗಿ ಬಂದರು. ಆದುದರಿಂದ ಮುಂದಿನ ವರ್ಷ ಹೋರಾಟದ ಕಾಲವಾಗಿದೆ. ಹಿಂದೂಗಳು ಈ ಹೋರಾಟವನ್ನು ನಡೆಸಲು ಸಿದ್ಧರಾಗಬೇಕು, ಎಂದು ಯತಿ ಮಾ ಚೇತನಾನಂದ ಸರಸ್ವತಿ ಇವರು ಕರೆ ನೀಡಿದರು. ‘ಉತ್ತರಪ್ರದೇಶದಲ್ಲಿನ ಲವ್ ಜಿಹಾದ್ನ ಸತ್ಯ ಮತ್ತು ಅದರ ಮೇಲಿನ ಪರಿಹಾರಗಳು’ ಈ ಕುರಿತು ಅವರು ಮಾತನಾಡುತ್ತಿದ್ದರು.


ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಿಂದ ಧರ್ಮಕಾರ್ಯಕ್ಕೆ ಊರ್ಜೆ(ಶಕ್ತಿ) ಸಿಗುತ್ತದೆ !

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಿಂದ ಧರ್ಮಕಾರ್ಯಕ್ಕೆ ಊರ್ಜೆ(ಶಕ್ತಿ) ಸಿಗುತ್ತದೆ. ಈ ಮಹೋತ್ಸವದಲ್ಲಿ ದೊರಕುವ ಧರ್ಮಬೋಧಗಳಿಂದಾಗಿ, ಇಲ್ಲಿಂದ ನಮ್ಮ ಪ್ರದೇಶಕ್ಕೆ ಹೋದಾಗ ನಮಗೆ ಸಮರ್ಥರಾಗಿ ಧರ್ಮಕಾರ್ಯವನ್ನು ಮಾಡಲು ಸಾಧ್ಯವಾಗುತ್ತದೆ. ಈ ಮಹೋತ್ಸವವು ಸಂಸ್ಕಾರಗಳನ್ನು ಪುನರ್ಜೀವನಗೊಳಿಸುತ್ತಿದೆ. ಹಿಂದೂಗಳು ಈ ಮಹೋತ್ಸವದಿಂದ ಧರ್ಮಕಾರ್ಯಕ್ಕಾಗಿ ಶಕ್ತಿಯನ್ನು ಪಡೆದುಕೊಳ್ಳಬೇಕು. ಈ ಮಹೋತ್ಸವ, ಧರ್ಮಕಾರ್ಯಕ್ಕಾಗಿ ಸಮರ್ಪಿಸಿಕೊಂಡು ಕಾರ್ಯವನ್ನು ಹೇಗೆ ಮಾಡಬೇಕು ?’, ಎಂಬ ಪಾಠವನ್ನು ಕಲಿಸಿದೆ. ಸಮರ್ಪಿತರಾಗಿ ನಾವು ಧರ್ಮಕಾರ್ಯವನ್ನು ಮಾಡಿದರೆ, ಭಾರತದಲ್ಲಷ್ಟೇ ಅಲ್ಲ ಆದರೆ ವಿಶ್ವದಲ್ಲಿಯೇ ಹಿಂದು ಧರ್ಮದ ಸ್ಥಾಪನೆಯನ್ನು ಮಾಡಲು ಸಾಧ್ಯವಾಗುವುದು ಎಂದು ಯತಿ ಮಾ ಚೇತನಾನಂದ ಸರಸ್ವತಿಯವರು ಉದ್ಗರಿಸಿದರು.


ಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯರ ಪರಿಚಯವನ್ನು ಪ್ರಸಾರ ಮಾಡಬೇಡಿ !

ಅನೇಕ ಸ್ಥಳಗಳಲ್ಲಿ ಹಿಂದೂ ಸ್ತ್ರೀಯರು ತಮ್ಮ ಮಾಹಿತಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡುತ್ತಾರೆ. ಹಾಗೆಯೇ ‘ಲವ್ ಜಿಹಾದ್’ಗೆ ಬಲಿಯಾದ ಹಿಂದೂ ಯುವತಿಯರ ಮಾಹಿತಿಯನ್ನೂ ಪ್ರಸಾರಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಇದರಿಂದ ಜಿಹಾದಿ ಭಯೋತ್ಪಾದಕರಿಂದ ಲವ್ ಜಿಹಾದ್ಗೆ ಬಲಿಯಾದ ಹಿಂದೂ ಯುವತಿಯ ಜೀವಕ್ಕೆ ಅಪಾಯ ಉಂಟಾಗುತ್ತದೆ. ಆದುದರಿಂದ ಯಾವುದೇ ಪರಿಸ್ಥಿತಿಯಲ್ಲಿ ಹಿಂದೂ ಮಹಿಳೆಯರು, ಹಾಗೆಯೇ ಇತರ ಯಾವುದೇ ಮಹಿಳೆಯರ ಪರಿಚಯವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಬಾರದು, ಎಂದೂ ಯತಿ ಮಾ ಚೇತನಾನಂದ ಸರಸ್ವತಿಯವರು ಕರೆ ನೀಡಿದರು.

*