Prevent Land Jihad : ಲ್ಯಾಂಡ್ ಜಿಹಾದ್ ತಡೆಯಲು ‘ವಕ್ಫ್ ಬೋರ್ಡ್’ ವಿಸರ್ಜಿಸಿ ! – ಪ್ರಶಾಂತ್ ಕೊತ್ವಾಲ್, ರಾಷ್ಟ್ರೀಯ ಸಂಘಟಕ ಸಚಿವ, ಭಾರತ ರಕ್ಷಾ ಮಂಚ್

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಎರಡನೇ ದಿನ (ಜೂನ್ 25) – 2ನೇ ಸತ್ರ : ರಾಷ್ಟ್ರೀಯ ರಕ್ಷಣೆ ಮತ್ತು ಹಿಂದೂ ರಾಷ್ಟ್ರಕ್ಕಾಗಿ ಹಿಂದೂ ಸಂಘಟನೆ

ಪ್ರಶಾಂತ್ ಕೊತ್ವಾಲ್

ರಾಮನಾಥಿ ದೇವಸ್ಥಾನ – ಅಸ್ಸಾಂನಲ್ಲಿ ಮುಸ್ಲಿಂ ನುಸುಳುಕೋರ ಸಮಸ್ಯೆ ಬಂಗಾಳದ ವಿಭಜನೆಯ ನಂತರ ಆಗಿದೆ. ಆ ಸಮಯದಲ್ಲಿ ಬ್ರಿಟಿಷರು ಧರ್ಮದ ಆಧಾರದ ಮೇಲೆ ಬಂಗಾಳವನ್ನು ವಿಭಜಿಸಿದರು. ಅಂದಿನಿಂದ, ಮುಸ್ಲಿಂ ಬಹುಸಂಖ್ಯಾತವಿರುವ ಪೂರ್ವ ಬಂಗಾಳದಿಂದ ಅಸ್ಸಾಂಗೆ ಮುಸ್ಲಿಮರ ಒಳನುಸುಳುವಿಕೆ ಪ್ರಾರಂಭವಾಯಿತು. ನಂತರ 1971 ರಲ್ಲಿ ಬಾಂಗ್ಲಾದೇಶ ನಿರ್ಮಾಣವಾಯಿತು. ಅಂದಿನಿಂದ, ಬಾಂಗ್ಲಾದೇಶಿ ಮುಸ್ಲಿಮರು ಅಸ್ಸಾಂಗೆ ನುಸುಳಲು ಪ್ರಾರಂಭಿಸಿದರು. ಪ್ರಸ್ತುತ 8 ರಿಂದ 10 ಕೋಟಿ ಬಾಂಗ್ಲಾದೇಶಿ ಮುಸ್ಲಿಮರು ಭಾರತದ ವಿವಿಧ ರಾಜ್ಯಗಳಲ್ಲಿ ವಾಸಿಸುತ್ತಿದ್ದಾರೆ. ಯಾವುದೇ ಯುದ್ಧವಿಲ್ಲದೆ ದೇಶದ ಬಹುಭಾಗವನ್ನು ಮುಸ್ಲಿಮರು ವಶಪಡಿಸಿಕೊಂಡಿದ್ದಾರೆ. ಈ ಭೂಮಿ ‘ವಕ್ಫ್ ಬೋರ್ಡ್’ ಅಧೀನದಲ್ಲಿದೆ. ಇದು ‘ಲ್ಯಾಂಡ್ ಜಿಹಾದ್’ನ ಒಂದು ರೂಪವಾಗಿದೆ.

‘ಲ್ಯಾಂಡ್ ಜಿಹಾದ್’ ತಡೆಯಲು ‘ವಕ್ಫ್ ಬೋರ್ಡ್’ ವಿಸರ್ಜಿಸುವುದು ಅನಿವಾರ್ಯವಾಗಿದೆ ಎಂದು ಭಾರತ ರಕ್ಷಾ ಮಂಚ್‌ನ ರಾಷ್ಟ್ರೀಯ ಸಂಘಟನ ಸಚಿವ ಶ್ರೀ. ಪ್ರಶಾಂತ್ ಕೊತ್ವಾಲ್ ಇವರು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ‘ಬಾಂಗ್ಲಾದೇಶಿಗಳ ನುಸುಳುವಿಕೆ ತಡೆಗೆ ಭಾರತ ರಕ್ಷಾ ಮಂಚ್ ಮಾಡುತ್ತಿರುವ ಕಾರ್ಯ’ ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು.