TN Hindus : ತಮಿಳುನಾಡಿನ ಕನ್ಯಾಕುಮಾರಿ ಮತ್ತು ಇತರ ಕೆಲವು ಜಿಲ್ಲೆಗಳಲ್ಲಿ ಚರ್ಚ್ ಗಳಿಂದ ಆಡಳಿತ ! – ಅರ್ಜುನ್ ಸಂಪತ್, ಸಂಸ್ಥಾಪಕ ಅಧ್ಯಕ್ಷ, ಹಿಂದೂ ಮಕ್ಕಲ್ ಕತ್ಛಿ, ತಮಿಳುನಾಡು

ವೈಶ್ವಿಕ ಹಿಂದೂ ರಾಷ್ಟ್ರ ಅಧಿವೇಶನದ ಎರಡನೇ ದಿನದ ಮೊದಲ ಸತ್ರ : ‘ವಿವಿಧ ರಾಜ್ಯಗಳಲ್ಲಿ ಹಿಂದೂಗಳ ದುಸ್ಥಿತಿ’

ಅರ್ಜುನ್ ಸಂಪತ್, ಸಂಸ್ಥಾಪಕ ಅಧ್ಯಕ್ಷ, ಹಿಂದೂ ಮಕ್ಕಲ್ ಕತ್ಛಿ, ತಮಿಳುನಾಡು

ರಾಮನಾಥಿ ದೇವಸ್ಥಾನ – ತಮಿಳುನಾಡಿನಲ್ಲಿ ‘ಜಾತ್ಯತೀತತೆ’ ಉಳಿದಿಲ್ಲ. ಇಲ್ಲಿನ ಹಿಂದೂಗಳಿಗೆ ‘ತಾವು ಹಿಂದೂಗಳೆಂದು’ ಗೊತ್ತಿಲ್ಲ. ಅವರಿಗೆ ಅದು ತಮಿಳು ಎಂದು ಮಾತ್ರ ಗೊತ್ತು. ತಮಿಳುನಾಡಿನ ಪ್ರಸ್ತುತ ಆಡಳಿತಗಾರರು ಭಾರತೀಯ ವಿರೋಧಿ, ಸನಾತನ ವಿರೋಧಿ ಮತ್ತು ಬ್ರಾಹ್ಮಣ ವಿರೋಧಿಗಳಿದ್ದಾರೆ. ತಮಿಳು ಜನರು ಸಿನಿಮಾ ಅಭಿಮಾನಿಗಳಾಗಿದ್ದಾರೆ. ಅವರು ತಮ್ಮ ನಾಯಕರನ್ನು ಚಲನಚಿತ್ರಗಳಿಂದ ಆಯ್ಕೆ ಮಾಡುತ್ತಾರೆ. ತಮಿಳುನಾಡಿನ ಸರ್ಕಾರವು ‘ಹಿಂದೂ ಧರ್ಮಾದಾಯ ಮಂಡಳಿ’ಯಲ್ಲಿ ತನ್ನದೇ ಆದ ಜನರನ್ನು ನೇಮಿಸುತ್ತದೆ. ಆಡಳಿತಾರೂಢ ಡಿಎಂಕೆಯಂತಹ ದ್ರಾವಿಡ ಪಕ್ಷಗಳ ನಾಯಕರು ಸನಾತನ ಧರ್ಮವನ್ನು ನಾಶಪಡಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ತಮಿಳುನಾಡಿನ ಜನರು ಹಿಂದೂ ಧರ್ಮವನ್ನು ಪಾಲಿಸುತ್ತಾರೆ; ಆದರೆ ಅವರು ಚುನಾವಣೆಯಲ್ಲಿ ಡಿಎಂಕೆಯನ್ನು ಆಯ್ಕೆ ಮಾಡುತ್ತಾರೆ. ಹಿಂದೂಗಳಲ್ಲಿ ಜಾಗೃತಿ ಆಗುತ್ತಿದೆ. ಇದರಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಶೇ.12ರಷ್ಟು ಮತಗಳನ್ನು ಪಡೆದಿದೆ. ತಮಿಳುನಾಡು ಭವಿಷ್ಯದಲ್ಲಿ ಸನಾತನ ಭೂಮಿಯಾಗಲಿದೆ. ಹಿಂದೂ ರಾಷ್ಟ್ರ ನಮ್ಮ ಜನ್ಮಸಿದ್ಧ ಹಕ್ಕು. ಮೊದಲು ಭಾರತದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾಗುವುದು ಮತ್ತು ನಂತರ ಪ್ರಪಂಚದಾದ್ಯಂತ ಹಿಂದೂ ರಾಷ್ಟ್ರ ಸ್ಥಾಪಿಸಲಾಗುವುದು. ಭಾರತ ಬಲಿಷ್ಠವಾದರೆ ಇಡೀ ವಿಶ್ವವೇ ಬಲಿಷ್ಠವಾಗುತ್ತದೆ ಎಂದು ಶ್ರೀ. ಅರ್ಜುನ ಸಂಪತ್ ಇವರು ಹೇಳಿದರು. ‘ತಮಿಳುನಾಡು ಸರ್ಕಾರದ ಹಿಂದೂ ವಿರೋಧಿ ಮನಸ್ಥಿತಿ, ಅದರ ಪರಿಣಾಮಗಳು’ ಮತ್ತು ಪರಿಹಾರಗಳು ಎಂಬ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು.

ಇನ್ನು ಅರ್ಜುನ್ ಸಂಪತ್ ಮಾತು ಮುಂದುವರೆಸುತ್ತಾ,

1. ತಮಿಳುನಾಡಿನಲ್ಲಿ ಹಿಂದೂ ಜನಸಂಖ್ಯೆ ಕಡಿಮೆಯಾಗುತ್ತಿದೆ ಮತ್ತು ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಿದೆ. ಇದು ವಾಸ್ತವವಾಗಿದೆ. ಈಗ ಅವರು ‘ವೋಟ್ ಜಿಹಾದ್’ (ಹಿಂದೂ ವಿರೋಧಿ ಮತ್ತು ರಾಷ್ಟ್ರವಿರೋಧಿ ಪಕ್ಷಗಳಿಗೆ ಒಗ್ಗಟ್ಟಾಗಿ ಮತ ಹಾಕುವುದು) ಅವಲಂಬಿಸುತ್ತಿದ್ದಾರೆ.

2. ತಮಿಳು ಕ್ರೈಸ್ತರಲ್ಲಿ ಬಿಷಪ್ (ಚರ್ಚ್‌ನಲ್ಲಿ ಹಿರಿಯ ಪಾದ್ರಿ) ಮಾತ್ರ ಅಧಿಕಾರ ನಡೆಯುತ್ತದೆ. ತಮಿಳುನಾಡಿನ ಕನ್ಯಾಕುಮಾರಿ ಮತ್ತು ಇತರ ಕೆಲವು ಜಿಲ್ಲೆಗಳಲ್ಲಿ ಚರ್ಚ್ ಆಳುತ್ತಿದೆ; ಏಕೆಂದರೆ ಅಲ್ಲಿ ಕ್ರೈಸ್ತರು ಬಹುಸಂಖ್ಯಾತರಾಗಿದ್ದಾರೆ.

3. ಡಿಎಂಕೆ ಸರ್ಕಾರವು ಕ್ರಿಪ್ಟೋ-ಕ್ರಿಶ್ಚಿಯನ್(ಕ್ರೈಸ್ತರ ಹಿತಾಸಕ್ತಿ ಮುಂದಿಟ್ಟು ನಡೆಯುವುದು) ಸರ್ಕಾರವಾಗಿದೆ. ಹಿಂದೂ ಮತ ವಿಂಗಡಿಸಲಾಗಿದೆ. ರಾಜ್ಯದಲ್ಲಿ 200 ಕ್ಕೂ ಹೆಚ್ಚು ದೇವಾಲಯಗಳನ್ನು ಡಿಎಂಕೆ ಸರ್ಕಾರ ಧ್ವಂಸಗೊಳಿಸಿದೆ.

4. ಡಿಎಂಕೆ ಸರ್ಕಾರ ನಗರ ನಕ್ಸಲೀಯರ ಮೇಲಿನ ಎಲ್ಲಾ ಪ್ರಕರಣಗಳನ್ನು ಹಿಂಪಡೆದಿದೆ. ತಮಿಳುನಾಡಿನಲ್ಲಿ 160 ಹಿಂದೂ ಕಾರ್ಯಕರ್ತರನ್ನು ಜಿಹಾದಿಗಳು ಕೊಂದಿದ್ದಾರೆ ಎಂದು ಹೇಳಿದರು.