ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ವಿಶೇಷ: ಹಿಂದೂ ಸಂಸ್ಕೃತಿ ಮತ್ತು ಹಿಂದೂ ಸಂಕೇತಗಳನ್ನು ರಕ್ಷಿಸುವ ಕಾರ್ಯ
ಕೇವಲ ದೇಶದಲ್ಲಿ ಮಾತ್ರವಲ್ಲ, ಸಂಪೂರ್ಣ ವಿಶ್ವದಲ್ಲಿ ಹಿಂದೂರಾಷ್ಟ್ರ ಸ್ಥಾಪನೆಯಾಗಬೇಕು. ಈ ದೃಷ್ಟಿಯಿಂದ ಜಗತ್ತಿನಾದ್ಯಂತ ಹಿಂದೂ ಧರ್ಮದ ಕಾರ್ಯ ನಡೆಯುತ್ತಿದೆ; ಆದರೆ ನಮ್ಮ ಭಾರತದಲ್ಲಿಯೇ ಹಿಂದೂ ರಾಷ್ಟ್ರವಾಗುವುದಿಲ್ಲ. ಹಿಂದೂಗಳು ಚದುರಿ ಹೋಗಿರುವುದರಿಂದ ಇದು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಎಲ್ಲಿಯವರೆಗೆ ಹಿಂದೂಗಳು ಒಂದಾಗುವುದಿಲ್ಲವೋ, ಅಲ್ಲಿಯವರೆಗೆ ಭಾರತ ಹಿಂದೂ ರಾಷ್ಟ್ರವಾಗುವುದಿಲ್ಲ.
ವಿಶ್ವದ ಜನಸಂಖ್ಯೆಯಲ್ಲಿ ಕ್ರಿಶ್ಚಿಯನ್ನರು ಮೊದಲ ಸ್ಥಾನದಲ್ಲಿದ್ದಾರೆ ಮತ್ತು ಎರಡನೇ ಸ್ಥಾನದಲ್ಲಿ ಮುಸಲ್ಮಾನರಿದ್ದಾರೆ. ಅದರ ನಂತರ ಹಿಂದೂ ಸ್ಥಾನವಿದೆ. ಹಿಂದೂ ಧರ್ಮವನ್ನು ಹೆಚ್ಚಿಸಲು ಯಾರ ಮೇಲೆಯೂ ಶಕ್ತಿಯನ್ನು ಉಪಯೋಗಿಸುವ ಆವಶ್ಯಕತೆಯಿಲ್ಲ. ನಮ್ಮ ನಿಮ್ಮ ಜ್ಞಾನದೆಡೆಗೆ ವಿದೇಶಿಯರು ಆಕರ್ಷಿತರಾಗುತ್ತಾರೆ. ಹಿಂದೂ ಧರ್ಮವನ್ನು ಹೆಚ್ಚಿಸುವುದಕ್ಕಾಗಿ ಮತ್ತು ಭಾರತ ದೇಶವನ್ನು ರಕ್ಷಿಸಲು ನಮ್ಮ ಮಕ್ಕಳ ಮೇಲೆ ಒಳ್ಳೆಯ ಸಂಸ್ಕಾರ ಮಾಡುವುದು ಆವಶ್ಯಕವಾಗಿದೆ. ಅದಕ್ಕಾಗಿ ಅವರಿಗೆ ರಾಮಾಯಣ ಮತ್ತು ಮಹಾಭಾರತಗಳನ್ನು ಕಲಿಸಬೇಕು.
Dignitaries deliberate on the protection and preservation of the ethos of Hindu Dharma at Vaishvik Hindu Rashtra Mahotsav 2024.
Join the live session with @PtSureshMMishra (Founder and International President, Sarv Bramhan Mahasabha) as he talks about the ‘Bharat Gaurav’ award,… pic.twitter.com/mwki6HIxc3
— HinduJagrutiOrg (@HinduJagrutiOrg) June 24, 2024
ವಿದೇಶದಲ್ಲಿರುವ ಹಿಂದೂಗಳನ್ನು ಸಂಪರ್ಕಿಸಲು ಮತ್ತು ಭಾರತೀಯರು ವಿದೇಶದಲ್ಲಿ ವಾಸ್ತವ್ಯ ಮಾಡಲು ನಾವು ‘ಭಾರತ ಗೌರವ’ ಪ್ರಶಸ್ತಿಯನ್ನು ಪ್ರಾರಂಭಿಸಿದ್ದೇವೆ. ಈ ಮಾಧ್ಯಮದ ಮೂಲಕ ಸಾವಿರಾರು ಭಾರತೀಯರನ್ನು ವಿದೇಶಗಳಲ್ಲಿ ವಾಸಿಸುವಂತೆ ಮಾಡುವಲ್ಲಿ ಯಶಸ್ಸು ಸಿಕ್ಕಿದೆ. ಈ ಪ್ರಶಸ್ತಿಯನ್ನು ನೀಡಲು ಕೆಲವು ಸಮಯ ಭಾರತದ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳು ನೀಡುವಂತೆ ಸೂಚಿಸಿದ್ದಾರೆ. ಇಂಗ್ಲೆಂಡ್ ಸಂಸತ್ತಿನಲ್ಲಿ 8 ಬಾರಿ ಬಹುಮಾನವನ್ನು ವಿತರಿಸಲಾಗಿದೆ. ಈ ವರ್ಷ ಫ್ರಾನ್ಸನ ಸಂಸತ್ತಿನಲ್ಲಿ ನಡೆದಿದೆ ಮತ್ತು ನಂತರ ನ್ಯೂಯಾರ್ಕನಲ್ಲಿ ಮಾಡಲು ಯೋಜಿಸಲಾಗಿದೆ.
ಸಚ್ಚಿದಾನಂದ ಪರಬ್ರಹ್ಮ ಡಾ.ಜಯಂತ ಆಠವಲೆಯವರಿಗೆ ‘ಭಾರತ ಗೌರವ’ ಪ್ರಶಸ್ತಿ ನೀಡಿ ನಾವೇ ಗೌರವಾನ್ವಿತರಾದೆವು! – ಪಂಡಿತ ಸುರೇಶ ಮಿಶ್ರಾ
ಈ ವರ್ಷ ` ಭಾರತ ಗೌರವ’ ಪ್ರಶಸ್ತಿಯನ್ನು ಫ್ರಾನ್ಸ ಸಂಸತ್ತಿನಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ.ಜಯಂತ ಆಠವಲೆ ಅವರಿಗೆ ನೀಡಲಾಯಿತು. ಅದನ್ನು ಅವರ ಉತ್ತರಾಧಿಕಾರಿಗಳು (ಸನಾತನದ ಶ್ರೀಸತ್ ಶಕ್ತಿ(ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಸತ್ ಶಕ್ತಿ (ಸೌ.) ಅಂಜಲಿ ಗಾಡಗೀಳ ) ಇವರು ಸ್ವೀಕರಿಸಿದರು. ಇದರಿಂದ ನಾವೇ ಗೌರವಾನ್ವಿತರಾದೆವು. ಈ ಅಧಿವೇಶನಕ್ಕೆ ಆಹ್ವಾನಿಸಲು ಸಮಿತಿಯ ಪದಾಧಿಕಾರಿಗಳು ನನ್ನ ಬಳಿಗೆ ಬಂದಿದ್ದರು. ಅವರು ನನಗೆ ಸಮಿತಿಯ ಮಾಹಿತಿ ಪುಸ್ತಕವನ್ನು ತೋರಿಸಿದರು. ಅದರ ಮೇಲಿನ ಪ.ಪೂ. ಡಾ.ಆಠವಲೆಯವರ ಛಾಯಾಚಿತ್ರವನ್ನು ನೋಡಿದೆನು ಮತ್ತು ಅವರ ಛಾಯಾಚಿತ್ರವನ್ನು ನೋಡಿ ಅವರ ದಿವ್ಯತೆಯೆಡೆಗೆ ಆಕರ್ಷಿತನಾದೆನು. ನನಗೆ ಇವರು `ಭಾರತದ ಗೌರವ’ ಆಗಿದ್ದಾರೆ’ ಎಂದು ಅನಿಸಿತು. ಅದೇ ಸಮಯಕ್ಕೆ ನಾನು ಅವರಿಗೆ ಈ ಪ್ರಶಸ್ತಿಯನ್ನು ನೀಡಲು ನಿರ್ಧರಿಸಿದೆನು.