Hindu Youth Protectors : ಹಿಂದೂ ರಕ್ಷಕ ಸಂಘಟನೆಯ ಕಾರ್ಯಕರ್ತರು ರಾಷ್ಟ್ರ, ಧರ್ಮ ಮತ್ತು ಸಂಸ್ಕೃತಿಯ ರಕ್ಷಕರಾಗಿದ್ದಾರೆ !- ಏಕಲವ್ಯ ಸಿಂಹ ಗೌಡ, ಸಂಯೋಜಕರು, ಹಿಂದ್ ರಕ್ಷಕ ಸಂಘಟನೆ, ಇಂದೂರ, ಮಧ್ಯಪ್ರದೇಶ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ ವಿಶೇಷ : ಹಿಂದು ಸಂಸ್ಕೃತಿ ಮತ್ತು ಹಿಂದೂ ಪ್ರತೀಕಗಳನ್ನು ರಕ್ಷಿಸುವ ಕಾರ್ಯ

ಹಿಂದ್ ರಕ್ಷಕ ಸಂಘಟನೆಯ ಕಾರ್ಯಕರ್ತರು ರಾಷ್ಟ್ರ, ಧರ್ಮ ಮತ್ತು ಸಂಸ್ಕೃತಿಯ ರಕ್ಷಕರಾಗಿದ್ದಾರೆ. ಸಂಘಟನೆಯ ವತಿಯಿಂದ ವರ್ಷದಾದ್ಯಂತ ಮುಖ್ಯವಾಗಿ ೩ ಉಪಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಹೋಳಿಯಲ್ಲಿನ ಅಯೋಗ್ಯ ಆಚರಣೆಗಳನ್ನು ತಡೆಗಟ್ಟಲು ಕುಟುಂಬದೊಂದಿಗೆ ಆ ದಿನ ರಾಧಾ-ಕೃಷ್ಣ ಫಾಗ್ (ಸಾಂಪ್ರದಾಯಿಕ ನೃತ್ಯ) ಮೆರವಣಿಗೆ ನಡೆಸುವುದು, ಮಹಾಪುರುಷರ ಮಾಹಿತಿ ಇರುವ ೩ ಲಕ್ಷ ಪಠ್ಯಪುಸ್ತಕಗಳನ್ನು ೬೦ ಸಾವಿರ ವಿದ್ಯಾಥಿಗಳಿಗೆ ವಿತರಣೆ ಮಾಡುವುದು ಮತ್ತು ಅಯೋಗ್ಯ ಆಚರಣೆಗಳನ್ನು ತಡೆಗಟ್ಟಲು ಸಾಂಪ್ರದಾಯಿಕ ಉಡುಪುಗಳಲ್ಲಿ ಧಾರ್ಮಿಕ ಗೀತೆಗಳಿಗನುಸಾರ ಆಡಲಾಗುವ ಗರಬಾವನ್ನು(ಗರಬಾ ನೃತ್ಯ) ಆಯೋಜಿಸುವುದು. ಈಗ ಮಾಲವಾಂಚಲ(ರಾಜಸ್ಥಾನ) ದಲ್ಲಿ ೫೦೦ ಕ್ಕಿಂತ ಹೆಚ್ಚು ರಾಧಾ-ಕೃಷ್ಣ ಫಾಗ (ಸಾಂಪ್ರದಾಯಿಕ ನೃತ್ಯ) ಮೆರವಣಿಗೆಗಳಲ್ಲಿ(ಯಾತ್ರೆಗಳಲ್ಲಿ) ೨೫ ಸಾವಿರಕ್ಕಿಂತ ಹೆಚ್ಚು ಹಿಂದೂಗಳು ಭಾಗವಹಿಸುತ್ತಾರೆ; ಆದರೆ ಈ ಯಾತ್ರೆಯನ್ನು ಆರಂಭಿಸಲು ಆಗಿನ ಕಾಂಗ್ರೇಸ್ ಸರಕಾರದ ವಿರುದ್ಧ ಬಹಳ ಹೋರಾಡಬೇಕಾಯಿತು. ಮಾಲವಾಂಚಲನಲ್ಲಿನ ಒಂದು ವನವಾಸಿ ಭಾಗದಲ್ಲಿ ಬಡತನ ಮತ್ತು ನೀರಿನ ಅಭಾವದಿಂದಾಗಿ ದೊಡ್ಡ ಪ್ರಮಾಣದಲ್ಲಿ ಮತಾಂತರ ನಡೆದಿತ್ತು. ಅಲ್ಲಿನ ೧ ಸಾವಿರದ ೨೩೨ ಊರುಗಳಲ್ಲಿ ಶಿವಾಲಯಗಳ ಸ್ಥಾಪನೆ ಮಾಡಿ, ಹಾಗೆಯೇ ನೀರಿನ ದೊಡ್ಡ ಕುಂಡಗಳನ್ನು ಕಟ್ಟಿ ಸಂಘಟನೆ ಮತಾಂತರವನ್ನು ತಡೆಗಟ್ಟುವಲ್ಲಿ ಯಶಸ್ವಿಯಾಯಿತು. ದೇವತೆಗಳನ್ನು ಅವಮಾನಿಸುವ ಹಿಂದೂದ್ವೇಷಿ ಹಾಸ್ಯಕಲಾವಿದ ಮುನ್ನವರ ಫಾರುಕಿ ವಿರುದ್ಧವೂ ನಾವು ನಿಲುವು ತಳೆದಿದ್ದೇವೆ.