ಎಲ್ಲದರ ತ್ಯಾಗವೇ ಹಿಂದೂ ರಾಷ್ಟ್ರದ ಸ್ಥಾಪನೆಯ ಬುನಾದಿ ! – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕ ಸಂಪಾದಕರು, ‘ಸನಾತನ ಪ್ರಭಾತ’ ನಿಯತಕಾಲಿಕೆಗಳು


ಎಲ್ಲದರ ತ್ಯಾಗವೇ ಹಿಂದೂ ರಾಷ್ಟ್ರದ ಸ್ಥಾಪನೆಯ ಬುನಾದಿ ! – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

ಹನ್ನೆರಡನೆಯ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ ಅಂದರೆ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ಉಪಸ್ಥಿತರಿರುವ ಎಲ್ಲಾ ಹಿಂದೂ ರಾಷ್ಟ್ರವೀರರಿಗೆ ನನ್ನ ನಮನಗಳು. ಈ ವರ್ಷ ಹಿಂದೂ ರಾಷ್ಟ್ರ ಅಧಿವೇಶನ (12 ವರ್ಷಗಳು) ಪೂರ್ಣಗೊಂಡಿದೆ. ಈ ಅಧಿವೇಶನಗಳ ಮೂಲಕ ರೂಪುಗೊಂಡ ಧರ್ಮನಿಷ್ಠ ಮತ್ತು ದೇಶಭಕ್ತರ ಸಂಗಟನೆಯಿಂದಾಗಿ ಇಂದು ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರ ನಿರ್ಮಾಣದ ಸಂಕಲ್ಪಶಕ್ತಿಯ ಸ್ಪಂದನಗಳು ವೈಶ್ವಿಕ ಮಟ್ಟದಲ್ಲಿಯೂ ಅರಿವಾಗುತ್ತಿವೆ. ಹಿಂದೂ ರಾಷ್ಟ್ರ ಈಶ್ವರನ ಇಚ್ಛೆಯಂತೆ ಸರಿಯಾದ ಸಮಯದಲ್ಲಿ ಸ್ಥಾಪನೆಯಾಗುತ್ತದೆ. ವಾಸ್ತವವಾಗಿ, ರಾಮರಾಜ್ಯ, ಅಂದರೆ ಹಿಂದೂ ರಾಷ್ಟ್ರವು ಅಯೋಧ್ಯೆಯಲ್ಲಿ ಶ್ರೀರಾಮನ ಜನ್ಮಸ್ಥಳದಲ್ಲಿ ಶ್ರೀರಾಮನ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ನಂತರ ಸೂಕ್ಷ್ಮರೂಪದಿಂದ ಪ್ರಾರಂಭವಾಯಿತು. ಈಗ ರಾಮರಾಜ್ಯದ ರೂಪದಲ್ಲಿ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರವನ್ನು ಸಾಕಾರಗೊಳಿಸಲು ಕೈಲಾದಷ್ಟು ತನು, ಮನ ಧನ ಮತ್ತು ಕೆಲವೊಮ್ಮೆ ಎಲ್ಲವನ್ನೂ ತ್ಯಾಗ ಮಾಡುವ ಅವಶ್ಯಕತೆಯಿದೆ, ಅಂದರೆ ಅತ್ಯುನ್ನತ ಕೊಡುಗೆಯನ್ನು ನೀಡುವುದಾಗಿದೆ. ಎಲ್ಲದರ ತ್ಯಾಗವೇ ಹಿಂದೂ ರಾಷ್ಟ್ರ ಸ್ಥಾಪನೆಯ ಬುನಾದಿಯಾಗಿದೆ ಎಂಬುದನ್ನು ಮನದಲ್ಲಿಟ್ಟುಕೊಂಡು ಧರ್ಮ ಸಂಸ್ಥಾಪನೆಯ ಮಹತ್ಕಾರ್ಯವನ್ನು ಮಾಡಿರಿ !

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕ ಸಂಪಾದಕರು, ‘ಸನಾತನ ಪ್ರಭಾತ’ ನಿಯತಕಾಲಿಕೆಗಳು