Statement by PM Modi: ಮತ್ತೊಮ್ಮೆ ತುರ್ತುಪರಿಸ್ಥಿತಿಯನ್ನು ಹೇರಲು ಯಾರೂ ಧೈರ್ಯ ಮಾಡುವುದಿಲ್ಲ ಎಂಬ ಪ್ರತಿಜ್ಞೆ ಮಾಡಿ! – ಪ್ರಧಾನಿ ಮೋದಿ

ಸಂಸತ್ತಿನ ಮುಂಗಾರು ಅಧಿವೇಶನ ಆರಂಭ!

ಪ್ರಧಾನ ಮಂತ್ರಿ ನರೇಂದ್ರ ಮೋದಿ

ನವದೆಹಲಿ: ಜೂನ್ 25 ರಂದು ಭಾರತದ ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ ತಗುಲಿತ್ತು, 50 ವರ್ಷಗಳ ಹಿಂದೆ ತುರ್ತು ಪರಿಸ್ಥಿತಿ ಹೇರಲಾಗಿತ್ತು. ಭಾರತದ ಹೊಸ ಪೀಳಿಗೆಯು ಈ ವಿಷಯವನ್ನು ಎಂದಿಗೂ ಮರೆಯುವುದಿಲ್ಲ, ಭಾರತದ ಸಂವಿಧಾನವನ್ನು ಆಗ ಸಂಪೂರ್ಣವಾಗಿ ನಿರಾಕರಿಸಲಾಗಿತ್ತು. ಸಂಪೂರ್ಣ ದೇಶವನ್ನು ಆಗ ಕಾರಾಗೃಹವನ್ನಾಗಿ ಮಾಡಲಾಗಿತ್ತು. ಪ್ರಜಾಪ್ರಭುತ್ವವನ್ನು ಮೂಲೆಗೆ ತಳ್ಳಲಾಗಿತ್ತು. 50 ವರ್ಷಗಳ ಹಿಂದೆ ನಡೆದ ಆ ಕೃತ್ಯವನ್ನು ಯಾರೂ ಪುನರಾವರ್ತಿಸಲು ಧೈರ್ಯ ಮಾಡುವುದಿಲ್ಲ ಎಂದು ದೇಶದ ನಾಗರಿಕರು ಪ್ರತಿಜ್ಞೆ ಮಾಡುತ್ತಾರೆ. ನಾವು ಸಜೀವ ಪ್ರಜಾಪ್ರಭುತ್ವದ ಪ್ರತಿಜ್ಞೆ ಮಾಡೋಣ ಎಂದು ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನದಂದು ಕರೆ ನೀಡಿದರು. ಈ ಅಧಿವೇಶನವು ಜುಲೈ 4ರವರೆಗೆ ನಡೆಯಲಿದೆ. ಆ ಬಳಿಕ ಅಧಿವೇಶನ ಸ್ಥಗಿತಗೊಂಡು ಎರಡನೇ ಅವಧಿಯ ಅಧಿವೇಶನ ಪುನಃ ಜುಲೈ 22ರಿಂದ ಪುನರಾರಂಭಗೊಳ್ಳಲಿದೆ. ಎರಡನೇ ಅಧಿವೇಶನದಲ್ಲಿ ದೇಶದ ಬಜೆಟ್ ಅನ್ನು ಮಂಡಿಸಲಾಗುವುದು. ಅದಕ್ಕಿಂತ ಮೊದಲು ಸಂಸದರ ಪ್ರತಿಜ್ಞಾವಿಧಿ, ರಾಷ್ಟ್ರಪತಿಗಳ ಭಾಷಣ ಮತ್ತು ಅದಕ್ಕೆ ಪ್ರಧಾನಿಗಳ ಉತ್ತರ, ಹಾಗೂ ಸಂಸದರ ಭಾಷಣಗಳು ಇರುತ್ತವೆ.

ಪ್ರಧಾನಿ ಮೋದಿಯವರು ತಮ್ಮ ಮಾತನ್ನು ಮುಂದುವರಿಸುತ್ತಾ, ದೇಶದ ಜನತೆಯು ವಿರೋಧ ಪಕ್ಷಗಳು ಯೋಗ್ಯ ದಿಶೆಯಲ್ಲಿ ಮುಂದುವರಿಯುತ್ತಾರೆಂದು ಅಪೇಕ್ಷಿಸುತ್ತಾರೆ. ಇಲ್ಲಿಯವರೆಗೆ ನಮಗೆ ಬಹಳಷ್ಟು ನಿರಾಶೆಯಾಗಿದೆ. ಆದರೆ ಬಹುಶಃ ಈ 18ನೇ ಲೋಕಸಭೆಯಲ್ಲಿ ವಿರೋಧಿ ಪಕ್ಷಗಳು ದೇಶದ ಸಾಮಾನ್ಯ ನಾಗರಿಕರ ನಿಲುವನ್ನು ಯೋಗ್ಯವಾಗಿ ಗೌರವಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆಯೆಂದು ಹೇಳಿದರು.