|
ಪಾಟಲಿಪುತ್ರ (ಬಿಹಾರ) – ಖ್ಯಾತ ಹಿರಿಯ ನಟ ಮತ್ತು ಬಂಗಾಳದ ಅಸಾನ್ ಸೋಲ್ ಮತ ಕ್ಷೇತ್ರದ ತೃಣಮೂಲ ಕಾಂಗ್ರೆಸ್ ಸಂಸದ ಶತ್ರುಘ್ನ ಸಿನ್ಹಾ ಅವರ ಪುತ್ರಿ ಸೋನಾಕ್ಷಿ ಅವರು ನಟ ಝಹೀರ ಇಕ್ಬಾಲನೊಂದಿಗೆ ಜೂನ್ 23 ರಂದು ನೋಂದಾಯಿತ ಪದ್ಧತಿಯಲ್ಲಿ ವಿವಾಹವಾದರು. ಈ ವಿವಾಹಕ್ಕೆ ಸಾಮಾಜಿಕ ಮಾಧ್ಯಮಗಳಿಂದ ವಿರೋಧ ವ್ಯಕ್ತವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ, ಪಾಟಲಿಪುತ್ರದಲ್ಲಿ ರಸ್ತೆಬದಿಯಲ್ಲಿ ದೊಡ್ಡ ದೊಡ್ಡ ಫಲಕಗಳನ್ನು ಹಾಕುವ ಮೂಲಕ ಈ ಮದುವೆಯನ್ನು ವಿರೋಧಿಸಲಾಗುತ್ತಿದೆ. ಈ ಮದುವೆಯನ್ನು ‘ಲವ್ ಜಿಹಾದ್’ ಎನ್ನಲಾಗಿದೆ. ಬಿಹಾರದ ಹಿಂದೂ ಶಿವ ಭವಾನಿ ಸೇನೆಯು ಫಲಕವನ್ನು ಹಾಕಿ ಈ ಮದುವೆಯನ್ನು ನಿಷೇಧಿಸಿದೆ. `ಶತ್ರುಘ್ನ ಸಿನ್ಹಾ ಅವರ ಮಗಳನ್ನು ಬಿಹಾರದಲ್ಲಿ ಬರಲು ಬಿಡುವುದಿಲ್ಲ’ ಎನ್ನುವ ಎಚ್ಚರಿಕೆಯನ್ನು ಈ ಫಲಕದ ಮೂಲಕ ನೀಡಲಾಗಿದೆ.
ಪಾಟಲಿಪುತ್ರದಲ್ಲಿ ಹಾಕಲಾಗಿರುವ ಈ ಫಲಕಗಳ ಮೇಲೆ ಶತ್ರುಘ್ನ ಸಿನ್ಹಾ, ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಅವರ ಛಾಯಾಚಿತ್ರಗಳಿವೆ. ಅದರ ಕೆಳಗೆ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಅವರ ವಿವಾಹವು ಲವ್ ಜಿಹಾದ್ ಅನ್ನು ಪ್ರೋತ್ಸಾಹಿಸುತ್ತದೆ. ಸಂಪೂರ್ಣ ದೇಶವನ್ನು ಇಸ್ಲಾಮೀಕರಣಗೊಳಿಸುವ ಪ್ರಯತ್ನ ಇದಾಗಿದೆ. ಶತ್ರುಘ್ನ ಸಿನ್ಹಾ ಅವರು ಮದುವೆಗೆ ಸಂಬಂಧಿಸಿದಂತೆ ತಮ್ಮ ನಿರ್ಧಾರವನ್ನು ಮರುಪರಿಶೀಲಿಸಬೇಕು, ಇಲ್ಲದಿದ್ದರೆ ಅವರ ಮಕ್ಕಳಿಗೆ ‘ಲವ ಮತ್ತು ಕುಶ’ ಎಂದು ಹೆಸರಿಟ್ಟು ಮನೆಯ ಹೆಸರನ್ನು ‘ರಾಮಾಯಣ’ ಹೆಸರನ್ನು ಬದಲಾಯಿಸಬೇಕು. ಈ ಮದುವೆ ಹಿಂದೂ ಧರ್ಮಕ್ಕೆ ಮಾಡಿದ ಅವಮಾನವಾಗಿದೆ ಎಂದು ಫಲಕದಲ್ಲಿ ಬರೆಯಲಾಗಿದೆ.
The marriage of Sonakshi Sinha and Zaheer Iqbal promotes Love Ji#ad!
Hindu Shiv Bhavani Sena put up posters in Patliputra (Bihar) threatening not to let Sonakshi Sinha enter Bihar!
सोनाक्षी सिन्हा #Bollywood pic.twitter.com/RN97WOHa0t
— Sanatan Prabhat (@SanatanPrabhat) June 24, 2024