ರಾಮನಾಥಿ (ಗೋವಾ), ೨೪ ಜೂನ್ (ವಾರ್ತೆ.) – ಹಿಂದು ಆಕ್ರಮಣಕಾರರು ಮತ್ತು ವಿಸ್ತಾರವಾದಿಗಳಿರಲಿಲ್ಲ ಇದು ಅಸತ್ಯವಾಗಿದೆ. ದಸರಾದಂದು ನಮ್ಮ ಪೂರ್ವಜರು ಕೇವಲ ಊರಿನ ಸೀಮೋಲ್ಲಂಘನ ಮಾಡುತ್ತಿರಲಿಲ್ಲ, ಬದಲಾಗಿ ದೇಶದ ಗಡಿಯನ್ನೂ ದಾಟುತ್ತಿದ್ದರು. ಮಾತೃಭೂಮಿಯ ಬಗ್ಗೆ ಸಂಕುಚಿತ ಭಾವನೆ ನಮ್ಮನ್ನು ವಿಸ್ತಾರವಾದಿಯಾಗಲು ತಡೆಯುತ್ತಿದೆ. ಅದಕ್ಕಾಗಿ ಹಿಂದೂಗಳಿಗೆ ವಿಸ್ತಾರವಾದಿಯಾಗಬೇಕಾಗಿದೆ. ಹಿಂದೂಗಳು ಜಾಗರೂಕರಿಲ್ಲ. ‘ಅಕ್ಕಪಕ್ಕದಲ್ಲಿ ಏನು ನಡೆಯುತ್ತಿದೆ ?’, ಈ ಬಗ್ಗೆ ಹಿಂದೂಗಳು ಜಾಗರೂಕರಾಗಿರಬೇಕು. ಇರುವೆಗಳಿಂದ ನಾವು ಇದನ್ನು ಕಲಿಯಬೇಕು. ಇರುವೆಗಳು ಯಾವುದೇ ಇತರ ಪ್ರಾಣಿಯನ್ನು ತಮ್ಮ ಮನೆಯಲ್ಲಿ ನುಸುಳಲು ಬಿಡುವುದಿಲ್ಲ. ಯಾರಾದರೂ ಅವರ ಬಿಲದಲ್ಲಿ ಪ್ರವೇಶಿಸಲು ಪ್ರಯತ್ನಿಸಿದರೆ, ಅವು ಆಕ್ರಮಣ ಮಾಡುತ್ತವೆ ಮತ್ತು ಬಿಲದ ಹೊರಗೇ ಅವರನ್ನು ನಾಶ ಮಾಡುತ್ತವೆ. ಈ ಜಾಗರೂಕತೆ ಮತ್ತು ಆಕ್ರಮಕತೆ ಹಿಂದೂಗಳು ತಮ್ಮಲ್ಲಿ ತರಬೇಕು. ಕುಟುಂಬ, ಭೂಮಿ, ರಾಷ್ಟ್ರ ಮತ್ತು ಧರ್ಮ ಇವುಗಳ ರಕ್ಷಣೆಗಾಗಿ ಹಿಂದೂಗಳು ಜಾಗರೂಕರಾಗಿರಬೇಕು. ನಮ್ಮ ಧರ್ಮದ ಮೇಲೆಯೂ ಯಾರಾದರೂ ಆಕ್ರಮಣ ಮಾಡಲು ಪ್ರಯತ್ನಿಸಿದರೆ, ನಾವು ಆಕ್ರಮಣಕಾರಿಯಾಗಬೇಕು, ಎಂದು ಮಧ್ಯಪ್ರದೇಶದ ಇಂದೂರಿನ ಶ್ರೀ ಸ್ವಾಮಿ ಅಖಂಡಾನಂದ, ಗುರುಕುಲ ಆಶ್ರಮದ ಸಂಸ್ಥಾಪಕ ಮಹಾಮಂಡಲೇಶ್ವರ ಆಚಾರ್ಯ ಸ್ವಾಮಿ ಪ್ರಣವಾನಂದ ಸರಸ್ವತಿಯವರು ಮಾರ್ಗದರ್ಶನ ಮಾಡಿದರು. ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವದ ಮೊದಲ ದಿನದ ಸತ್ರದಲ್ಲಿ ‘ಮತಾಂತರವನ್ನು ತಡೆಗಟ್ಟಲು ಆದಿವಾಸಿ ಕ್ಷೇತ್ರಗಳಲ್ಲಿ ಮಾಡಿದ ಕಾರ್ಯ’ ಈ ವಿಷಯದ ಮೇಲೆ ಮಾತನಾಡುವಾಗ ಹೇಳಿದರು.
We need to sow the seed of Bhagwan Shri Ram in the minds of every Hindu. It is essential to make every home, village and town a Hindu Rashtra – Mahamandaleshwar Swami Acharya Pranavanand Saraswatiji Maharaj
🛑The root cause of conversion is not poverty but lack of Dharmacharan.… pic.twitter.com/XH4wuf4Exw
— Sanatan Prabhat (@SanatanPrabhat) June 24, 2024
ಮಹಾಮಂಡಲೇಶ್ವರ ಆಚಾರ್ಯ ಸ್ವಾಮಿ ಪ್ರಣವಾನಂದ ಸರಸ್ವತಿಯವರ ಮಾರ್ಗದರ್ಶನದಲ್ಲಿನ ಗಮನಾರ್ಹ ಅಂಶಗಳು
ಹಿಂದು ರಾಷ್ಟ್ರಕ್ಕಾಗಿ ಹಿಂದು ಏಕತೆ ಆವಶ್ಯಕ !
ಅವರು ಮಾತು ಮುಂದುವರೆಸುತ್ತಾ ಹಿಂದು ಐಕ್ಯತೆ ಇಲ್ಲದೇ ಹಿಂದು ರಾಷ್ಟ್ರದ ಕನಸನ್ನು ನಾವು ನನಸಾಗಿಸಲು ಸಾಧ್ಯವಿಲ್ಲ. ಹಿಂದೂಗಳು ಒಂದಾಗುವುದು ಎಲ್ಲಕ್ಕಿಂತ ಮಹತ್ವದ ವಿಷಯವಾಗಿದೆ. ಎಲ್ಲ ಹಿಂದೂಗಳಲ್ಲಿ ಐಕ್ಯತೆಯ ಭಾವನೆ ಇರಬೇಕು. ನಾವು ವಿವಿಧ ಜಾತಿಯ, ಸಂಪ್ರದಾಯದವರಾಗಿದ್ದರೂ, ನಮ್ಮಲ್ಲಿ ಐಕ್ಯತೆಯ ಭಾವನೆ ಇರಬೇಕು. ನಾವು ಹಿಂದುಐಕ್ಯತೆಯ ಮನೋಭಾವವನ್ನು ಬಲಪಡಿಸಬೇಕು. ಎಂದು ಹೇಳಿದರು.
ಸನಾತನ ಸಂಸ್ಥೆಯ ಕಾರ್ಯ ದೈವಿಕವಾಗಿದೆ !
ಸನಾತನ ಸಂಸ್ಥೆಯ ಹಿಂದೆ ದೈವಿಕ ಶಕ್ತಿಯಿದೆ. ಸನಾತನ ಸಂಸ್ಥೆಯ ಕಾರ್ಯ ಕೇವಲ ದೈವಿಕ ಶಕ್ತಿಯಿಂದ ಆಗುತ್ತಿದೆ. ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಮಹಾ ತಪಸ್ವಿಯಾಗಿದ್ದಾರೆ. ಅವರ ಕಾರ್ಯದ ಹಿಂದೆ ಶ್ರೀರಾಮ ಮತ್ತು ಶ್ರೀಕೃಷ್ಣನ ಶಕ್ತಿಯಿದೆ.
– ಮಹಾಮಂಡಲೇಶ್ವರ ಆಚಾರ್ಯ ಸ್ವಾಮಿ ಪ್ರಣವಾನಂದ ಸರಸ್ವತಿ
ಹಿಂದೂ ಧರ್ಮದಂತೆ ಆಚರಣೆ ಮಾಡುವುದು ಅಗತ್ಯ !
ಹಿಂದೂಗಳಲ್ಲಿ ನಾಸ್ತಿಕತೆ, ಬಂಡಾಯ ಹೆಚ್ಚುತ್ತಿದೆ. ಇದು ಅತ್ಯಂತ ಕಳವಳಕಾರಿ ವಿಷಯವಾಗಿದೆ. ಹೆಚ್ಚಿನ ಹಿಂದೂಗಳಿಗೆ ಧರ್ಮಶಿಕ್ಷಣವಿಲ್ಲ. ಹಿಂದೂಗಳು ಮತಾಂತರವಾಗುತ್ತಿರುವುದು ಕೂಡ ಕಳವಳಕಾರಿ ವಿಷಯವಾಗಿದೆ. ಮತಾಂತರಕ್ಕೆ ಬಡತನ ಕಾರಣವಲ್ಲ, ಬದಲಾಗಿ ಧರ್ಮಹೀನತೆಯು ಹಿಂದೂಗಳ ಮತಾಂತರಕ್ಕೆ ಕಾರಣವಾಗುತ್ತಿದೆ. ಹಿಂದೂ ಧರ್ಮವನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದರಂತೆ ನಡೆದುಕೊಳ್ಳುವುದು ಮುಖ್ಯವಾಗಿದೆ, ಆಗ ಮಾತ್ರ ಹಿಂದೂ ರಾಷ್ಟ್ರದ ಸ್ಥಾಪನೆ ಸಾಧ್ಯ. ಜೀವನದಲ್ಲಿ ನೈತಿಕತೆಯನ್ನು ತರದೆ ನಾವು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಾಧ್ಯವಿಲ್ಲ. ನಮ್ಮ ಜೀವನ ಮತ್ತು ನಡವಳಿಕೆಯು ಚಾರಿತ್ರ್ಯಪೂರ್ಣವಾಗಿದ್ದರೆ ಮಾತ್ರ ನಾವು ಹಿಂದೂ ಧರ್ಮದ ಪ್ರಸಾರವನ್ನು ಪರಿಣಾಮಕಾರಿಯಾಗಿ ಮಾಡಬಹುದು. ಎಷ್ಟೋ ವ್ಯಕ್ತಿಗಳ ತನಕ ಸನಾತನ ಧರ್ಮ ಮತ್ತು ನಮ್ಮ ಧರ್ಮದ ಜ್ಞಾನವನ್ನು ತಲುಪಿಸಬೇಕಾಗಿದೆ ಎಂದು ಹೇಳಿದರು.