ಭಾರತೀಯರನ್ನು ಸೈನ್ಯದಿಂದ ಬಿಡುಗಡೆಗೊಳಿಸುವಂತೆ ಭಾರತ ಸರಕಾರದಿಂದ ರಷ್ಯಾಗೆ ಆಗ್ರಹ !
ನವ ದೆಹಲಿ – ರಷ್ಯಾ ಮತ್ತು ಉಕ್ರೇನ್ ಇವರಲ್ಲಿನ ಯುದ್ಧದಲ್ಲಿ ರಷ್ಯಾದ ಸೈನ್ಯದಲ್ಲಿ ಸುಮಾರು ೨೦೦ ಭಾರತೀಯ ನಾಗರೀಕರನ್ನು ಭರ್ತಿ ಮಾಡಿಕೊಂಡಿದ್ದು ಅದರಲ್ಲಿನ ಇಬ್ಬರು ಸಾವನ್ನಪ್ಪಿದ್ದಾರೆ. ಈ ಹಿಂದೆ ಇಬ್ಬರೂ ಸಾವನ್ನಪ್ಪಿದ್ದರು. ಈ ಬಗ್ಗೆ ಭಾರತದ ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರರಾದ ರಣಧೀರ ಜೈಸವಾಲ್ ಇವರು, ‘ಭಾರತವು ರಷ್ಯಾದ ಸೈನ್ಯದಲ್ಲಿ ಭಾರತೀಯ ನಾಗರೀಕರನ್ನು ಭರ್ತಿ ಮಾಡಬಾರದು. ನಾವು ನೇಮಿಸುವುದನ್ನೂ ನಿಷೇಧಿಸಬೇಕೆಂದು ಕೂಡ ಹೇಳಿದ್ದೇವೆ, ಹಾಗೂ ರಷ್ಯಾದ ಸೈನ್ಯದಲ್ಲಿ ಭರ್ತಿ ಆಗಿರುವ ಭಾರತೀಯರನ್ನು ಆದಷ್ಟು ಬೇಗನೆ ಬಿಡುಗಡೆಗೊಳಿಸಬೇಕು ಮತ್ತು ಅವರಿಗೆ ಸ್ವದೇಶಕ್ಕೆ ಹಿಂತಿರುಗಲು ಅನುಮತಿ ನೀಡಬೇಕೆಂದು ಆಗ್ರಹಿಸಿದ್ದೇವೆ. ಈ ಅಂಶಗಳು ರಷ್ಯಾದ ಸರಕಾರದ ಎದುರು ಮಂಡಿಸಲಾಗಿದೆ’, ಎಂದು ಮಾಹಿತಿ ನೀಡಿದರು.
ರಣಧೀರ ಜೈಸ್ವಾಲ್ ಇವರು ಮಾತು ಮುಂದುವರಿಸಿ, ಇತ್ತೀಚಿಗೆ ಸಾವನ್ನಪ್ಪಿರುವ ೨ ಭಾರತೀಯರ ಶವವನ್ನು ಶೀಘ್ರವಾಗಿ ಹಿಂತರುವುದಕ್ಕಾಗಿ ಭಾರತ ಕೆಲಸ ಮಾಡುತ್ತಿದೆ. ನಾವು ಅವರ ಕುಟುಂಬದವರ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದರು.
ಸಂಪಾದಕೀಯ ನಿಲುವುರಷ್ಯಾದಲ್ಲಿ ಈ ಹಿಂದೆ ಇಬ್ಬರೂ ಭಾರತೀಯರು ಸಾವನ್ನಪ್ಪಿದ್ದರು ಮತ್ತು ಆ ಸಮಯದಲ್ಲಿ ಕೂಡ ಭಾರತ ರಷ್ಯಾದ ಬಳಿ ಇದೆ ಬೇಡಿಕೆ ಸಲ್ಲಿಸಿತ್ತು; ಆದರೆ ರಷ್ಯಾ ಭಾರತದ ಬೇಡಿಕೆಯನ್ನು ನಿರ್ಲಕ್ಷಿಸುತ್ತಿದೆ ಎಂದು ಗಮನಕ್ಕೆ ಬರುತ್ತಿದೆ. ಆದ್ದರಿಂದ ‘ರಷ್ಯಾ ನಮ್ಮ ನಿಜವಾದ ಮಿತ್ರನೆ ಅಥವಾ ನಮ್ಮನ್ನು ಉಪಯೋಗಿಸುತ್ತಿದ್ದೆಯೇ ?’, ಇದನ್ನು ಯೋಚಿಸಬೇಕು ! |