Hinduja Family : ನೌಕರರ ಶೋಷಣೆ ಮಾಡಿದ ಪ್ರಕರಣ; ಸ್ವಿಟ್ಜರ್ಲೆಂಡ್ ಉಚ್ಚ ನ್ಯಾಯಾಲಯದಿಂದ ಹಿಂದೂಜಾ ಕುಟುಂಬಕ್ಕೆ ಖುಲಾಸೆ

ಒಂದು ದಿನ ಹಿಂದಷ್ಟೇ ಕೆಳ ನ್ಯಾಯಾಲಯವು ಶಿಕ್ಷೆ ವಿಧಿಸಿತ್ತು

ಲಂಡನ್ (ಬ್ರಿಟನ್) – ಸ್ವಿಟ್ಜರ್ಲೆಂಡ್‌ನ ಹೈಕೋರ್ಟ್ ಬ್ರಿಟನ್‌ನಲ್ಲಿರುವ ಭಾರತೀಯ ಮೂಲದ ಉದ್ಯಮಿ ಹಿಂದೂಜಾ ಕುಟುಂಬದ ನಾಲ್ವರು ಸದಸ್ಯರನ್ನು ಜೂನ್ 22 ರಂದು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿದೆ. ಜೂನ್ 21 ರಂದು, ಕೆಳ ನ್ಯಾಯಾಲಯವು ಈ 4 ಜನರಿಗೆ ನೌಕರರ ಶೋಷಣೆ ಮಾಡಿದ ಪ್ರಕರಣದಲ್ಲಿ ಕಾರಾಗೃಹ ವಾಸದ ಶಿಕ್ಷೆ ವಿಧಿಸಿತ್ತು. ದೂರುದಾರರು ದೂರನ್ನು ಹಿಂಪಡೆದ ನಂತರ ಈ ಶಿಕ್ಷೆಯನ್ನು ರದ್ದುಪಡಿಸಲಾಯಿತು ಉದ್ಯಮಿ ಪ್ರಕಾಶ್ ಹಿಂದೂಜಾ ಮತ್ತು ಅವರ ಪತ್ನಿ ಕಮಲ್ ಹಿಂದುಜಾ ಅವರಿಗೆ ನಾಲ್ಕೂವರೆ ವರ್ಷ ಶಿಕ್ಷೆ ಹಾಗೂ ಅವರ ಪುತ್ರ ಅಜಯ್ ಮತ್ತು ಸೊಸೆ ನಮ್ರತಾ ಅವರಿಗೆ ನಾಲ್ಕು ವರ್ಷ ಜೈಲು ಶಿಕ್ಷೆಯಾಗಿತ್ತು.

ಹಿಂದೂಜಾ ಕುಟುಂಬದವರ ಸ್ವಿಟ್ಜರ್ಲೆಂಡ್ ನಲ್ಲಿರುವ ವಿಲ್ಲಾದಲ್ಲಿ ಕೆಲಸ ಮಾಡುವ ಮನೆಗೆಲಸದವರಿಗೆ ಹಿಂದೂಜಾ ಕುಟುಂಬದ ಸದಸ್ಯರು ಶೋಷಣೆ ಮಾಡಿದ ಆರೋಪವಿತ್ತು. ಮನೆಗೆಲಸ ಮಾಡುವವರಲ್ಲಿ ಹೆಚ್ಚಿನವರು ಭಾರತದ ಅನಕ್ಷರಸ್ಥರಾಗಿದ್ದಾರೆ.