Anti-Sanatan DMK : ವಿದ್ಯಾರ್ಥಿಗಳು ಹಣೆ ಮೇಲೆ ಗಂಧ ಮತ್ತು ಉಂಗುರಗಳ ಮೇಲೆ ನಿಷೇಧ !

  • ತಮಿಳುನಾಡು ತುಘಲಕಿ ವರದಿ ಡಿಎಂಕೆ ಸರ್ಕಾರಕ್ಕೆ ಹಸ್ತಾಂತರ !

  • ಬಿಜೆಪಿ ಹಾಗೂ ಕಲ್ಲರ್ ಜಾತಿ ಹಿಂದೂಗಳಿಂದ ತೀವ್ರ ವಿರೋಧ !

ಡಿಎಂಕೆ(ದ್ರಾವಿಡ್ ಮುನ್ನೇತ್ರ ಕಳಘಂ) ಎಂದರೆ ದ್ರಾವಿಡ ಪ್ರಗತಿ ಸಂಘ.

ಮದ್ರಾಸ್ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಕೆ. ಚಂದು ಅಧ್ಯಕ್ಷತೆಯಲ್ಲಿ ಸಮಿತಿಯು ತನ್ನ ವರದಿಯನ್ನು ಮುಖ್ಯಮಂತ್ರಿ ಸ್ಟಾಲಿನ್ ಅವರಿಗೆ ಸಲ್ಲಿಸಿತು

ಚೆನ್ನೈ (ತಮಿಳುನಾಡು) – ಶಾಲೆಗಳಿಂದ ಕಥಾಕಥಿತ ಜಾತೀಯತೆಯನ್ನು ತೊಡೆದುಹಾಕಲು ತಮಿಳುನಾಡಿನ ಡಿಎಂಕೆ ಸರ್ಕಾರಕ್ಕೆ ತುಘಲಕಿ ವರದಿಯನ್ನು ಸಲ್ಲಿಸಲಾಗಿದೆ. ಇದರ ಅಡಿಯಲ್ಲಿ, ಶಾಲೆಯ ಆವರಣದಲ್ಲಿ ಮಣಿಕಟ್ಟಿನಲ್ಲಿ ಬ್ಯಾಂಡ್, ಉಂಗುರಗಳು ಅಥವಾ ಹಣೆಯ ಮೇಲೆ ಗಂಧ ಹಚ್ಚುವುದನ್ನು ನಿಷೇಧಿಸಲು ಶಿಫಾರಸು ಮಾಡಲಾಗಿತ್ತು. 2023 ರಲ್ಲಿ, ರಾಜ್ಯದ ತಿರುನಲ್ವೇಲಿಯಲ್ಲಿ ಇಬ್ಬರು ದಲಿತ ಸಹೋದರರು ಮತ್ತು ಸಹೋದರಿಯರನ್ನು ಕೆಲವು ಮೇಲ್ಜಾತಿ ವಿದ್ಯಾರ್ಥಿಗಳು ಥಳಿಸಿದ್ದರು ಎಂದು ಆರೋಪಿಸಲಾಗಿದೆ. ಸರಕಾರ ಈ ಕಾರಣ ನೀಡುತ್ತಾ ಮದ್ರಾಸ್ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಕೆ. ಚಂದು ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿಯು ಇತ್ತೀಚೆಗೆ ತನ್ನ ವರದಿಯನ್ನು ಮುಖ್ಯಮಂತ್ರಿ ಸ್ಟಾಲಿನ್ ಅವರಿಗೆ ಸಲ್ಲಿಸಿದೆ.

ಸಂಪಾದಕೀಯ ನಿಲುವು

  • ‘ಸನಾತನ’ವನ್ನು ನಾಶಪಡಿಸುವ ಬಗ್ಗೆ ಮಾತನಾಡುವ ಡಿಎಂಕೆ ಸರ್ಕಾರದ ತಮಿಳುನಾಡಿನಲ್ಲಿ ವಿಭಿನ್ನವಾಗಿ ಏನು ನಿರೀಕ್ಷಿಸಬಹುದು ? ಹಿಂದೂಗಳ ಅಸ್ತಿತ್ವಕ್ಕೆ ಕಂಠಕವಾಗಿರುವ ರಜಾಕಾರಿ ಆಢಳಿತಾಧಿಕಾರಿಗಳಿಗೆ ಮುಂದಿನ ಚುನಾವಣೆಯಲ್ಲಿ ಹಿಂದೂ ಸಂಘಟನೆ ಮಾಡಿ ಶಾಶ್ವತವಾಗಿ ಮನೆಗೆ ಕೂಡಿಸಬೇಕು !
  • ಕರ್ನಾಟಕದಲ್ಲಿ ಮುಸ್ಲಿಂ ಹುಡುಗಿಯರ ಹಿಜಾಬ್ ಅನ್ನು ನಿಷೇಧಿಸುವ ಶಾಲಾ ನಿಯಮಗಳನ್ನು ಕಟುವಾಗಿ ವಿರೋಧಿಸಿದ ಪ್ರಗತಿ(ಅಧೀಗತಿ)ಪರರು ಮತ್ತು ಜಾತ್ಯತೀತವಾದಿಗಳು ಚ ಕಾರವನ್ನೂ ಎತ್ತುವುದಿಲ್ಲ. ಈ ಸ್ಥಿತಿಯು ಅಸಹಿಷ್ಣು ಹಿಂದೂಗಳಿಗೆ ಲಜ್ಜಾಸ್ಪದ !