Tajikistan Hijab Ban : ಮುಸ್ಲಿಂ ರಾಷ್ಟ್ರ ತಜಕಿಸ್ತಾನ್ ನಲ್ಲಿ ಹಿಜಾಬ್ ಮೇಲೆ ನಿಷೇಧ !

(ಹಿಜಾಬ್ ಎಂದರೆ ಮುಸ್ಲಿಂ ಮಹಿಳೆಯರ ತಲೆ ಮತ್ತು ಕುತ್ತಿಗೆಯನ್ನು ಮುಚ್ಚುವ ವಸ್ತ್ರ )

ದುಶಾನ್ಬೆ (ತಜಿಕಿಸ್ತಾನ್) – ಸೋವಿಯತ್ ರಷ್ಯಾದಿಂದ ಸ್ವತಂತ್ರಗೊಂಡಿರುವ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಾದ ತಜಕಿಸ್ತಾನ್ ಔಪಚಾರಿಕವಾಗಿ ಹಿಜಾಬ್ ಅನ್ನು ನಿಷೇಧಿಸಿದೆ. ಈ ಬಗ್ಗೆ ಸಂಸತ್ತಿನ ಮೇಲ್ಮನೆಯು ಜೂನ್ 19 ರಂದು ಒಂದು ಮಸೂದೆಯನ್ನು ಅಂಗೀಕರಿಸಿತು. ಈ ನಿಷೇಧವನ್ನು ಉಲ್ಲಂಘಿಸುವವರಿಗೆ ದಂಡ ವಸೂಲಿ ಮಾಡಲಾಗುವುದು ಎಂದು ಆದೇಶಿಸಿದೆ.

ಕಳೆದ ಅನೇಕ ವರ್ಷಗಳಿಂದ ತಜಕಿಸ್ತಾನದಲ್ಲಿ ಹಿಜಾಬ್ ಮೇಲೆ ಅಘೋಷಿತ ನಿಷೇಧವಿದೆ. ಈಗ ಸಂಸತ್ತಿನಲ್ಲಿ ಈ ವಿಧೇಯಕ ಅಂಗೀಕಾರ ಆಗಿರುವುದರಿಂದ ಅದಕ್ಕೆ ಸರ್ಕಾರದ ಮಾನ್ಯತೆ ಸಿಕ್ಕಿದೆ. ಈ ದೇಶದಲ್ಲಿ ಉದ್ದ ಗಡ್ಡವನ್ನು ಬೆಳೆಸುವುದರ ಮೇಲೆಯೂ ಅಘೋಷಿತ ನಿಷೇಧವಿದೆ. 2007 ರಲ್ಲಿ, ಅಲ್ಲಿನ ಶಿಕ್ಷಣ ಸಚಿವಾಲಯವು ವಿದ್ಯಾರ್ಥಿಗಳಿಗೆ ಇಸ್ಲಾಮಿಕ್ ಉಡುಗೆ ಮತ್ತು ಪಾಶ್ಚಿಮಾತ್ಯ ಶೈಲಿಯ ಮಿನಿ ಸ್ಕರ್ಟ್‌ ಈ ಎರಡರ ಮೇಲೆ ನಿಷೇಧ ಹಾಕಿತ್ತು, ಆ ನಂತರ ಎಲ್ಲಾ ಸಾರ್ವಜನಿಕ ಸಂಸ್ಥೆಗಳಲ್ಲಿ ಈ ನಿಷೇಧ ಹೇರಲಾಯಿತು.

ಸಂಪಾದಕೀಯ ನಿಲುವು

ಇಸ್ಲಾಮಿಕ್ ದೇಶಗಳಲ್ಲಿ ಹಿಜಾಬ್ ಅನ್ನು ನಿಷೇಧಿಸಬಹುದು, ಆದರೆ ಧರ್ಮ ನಿರಪೇಕ್ಷ ಭಾರತದಲ್ಲಿ ಏಕೆ ನಿಷೇಧವಿಲ್ಲ ?