ತೆಲ್ ಅವಿವ (ಇಸ್ರೇಲ್) – ಗಾಝಾ ಪಟ್ಟಿಯಲ್ಲಿ ಕಳೆದ ೮ ತಿಂಗಳಿಗಿಂತಲೂ ಹೆಚ್ಚಿನ ಸಮಯದಿಂದ ಯುದ್ಧ ಮುಂದುವರೆದಿದ್ದರೂ ಕೂಡ ಇಸ್ರೇಲ್ ಗೆ ಅಪೇಕ್ಷಿತ ಯಶಸ್ಸು ದೊರೆತಿಲ್ಲ. ಅದರ ನಕಾರಾತ್ಮಕ ಪರಿಣಾಮ ದೇಶದ ಸೈನ್ಯದಲ್ಲಿನ ಉನ್ನತ ಅಧಿಕಾರಿಗಳು ಮತ್ತು ಪ್ರಧಾನಮಂತ್ರಿ ಬೆಂಜಮೀನ್ ನೇತನ್ಯಾಹೂ ಇವರಲ್ಲಿನ ಸಂಬಂಧಪಟ್ಟವರ ಮೇಲೆ ಕಂಡು ಬರುತ್ತಿದೆ. ಇಸ್ರೇಲಿನ ಸೈನ್ಯದ ವಕ್ತಾರರು ಹಮಾಸ್ ಗೆ ಸಂಪೂರ್ಣವಾಗಿ ಮುಗಿಸಲು ಸಾಧ್ಯವಿಲ್ಲ, ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯಿಂದ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹೂ ಇವರ ‘ಹಮಾಸ್ ದ ಸಂಪೂರ್ಣ ನಾಶ ಮಾಡುವುದು, ಇದು ಸರಕಾರದ ಎಲ್ಲಕ್ಕಿಂತ ದೊಡ್ಡ ಉದ್ದೇಶವಾಗಿದೆ’, ಈ ವಿಷಯದ ದಾವೆಯ ಬಗ್ಗೆ ಪ್ರಶ್ನೆ ಕೇಳಲಾಗುತ್ತಿದೆ. ಈ ಹೇಳಿಕೆಯಿಂದ ಇಸ್ರೇಲ್ ನಲ್ಲಿ ಚರ್ಚೆ ಆರಂಭವಾಗಿದ್ದು ಸೈನ್ಯದ ಸ್ಪಷ್ಟೀಕರಣ ನಂತರ ಕೂಡ ಇದರ ಬಗ್ಗೆ ‘ಸರಕಾರದ ಜೊತೆಗೆ ಸಂಘರ್ಷ’ವೆಂದೇ ನೋಡಲಾಗುತ್ತಿದೆ.