Indian Labourer Dies In Italy : ಇಟಲಿಯಲ್ಲಿ ಯಂತ್ರದಲ್ಲಿ ಕೈಸಿಲುಕಿ ಭಾರತೀಯ ಕಾರ್ಮಿಕನ ಸಾವು

ಮಾಲೀಕನು ಚಿಕಿತ್ಸೆ ನೀಡುವ ಬದಲು ರಸ್ತೆ ಬದಿಗೆ ಬಿಟ್ಟ !

ರೋಮ (ಇಟಲಿ) – ಇಟಲಿಯಲ್ಲಿ ಕೆಲಸ ಮಾಡುತ್ತಿದ್ದ ಸತನಾಮ ಸಿಂಗ (30 ವರ್ಷ) ಹೆಸರಿನ ಭಾರತೀಯನು ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಯಂತ್ರದಿಂದ ಕೈ ತುಂಡಾಗಿದ್ದರಿಂದ ಸಾವನ್ನಪ್ಪಿದ. ಕೈ ತುಂಡಾದನಂತರ ಹೊಲದ ಮಾಲೀಕನು ಸತನಾಮ ಸಿಂಹನನ್ನು ಮನೆಯಹತ್ತಿರದ ರಸ್ತೆಯ ಮೇಲೆ ಬಿಟ್ಟಿದ್ದರಿಂದ ಅವನಿಗೆ ಬಹಳಷ್ಟು ಸಮಯ ಚಿಕಿತ್ಸೆ ಸಿಗಲಿಲ್ಲ. ಸತನಾಮನ ಪತ್ನಿ ಮತ್ತು ಮಿತ್ರರು ಪೊಲೀಸರಿಗೆ ಈ ಮಾಹಿತಿಯನ್ನು ನೀಡಿದರು. ತದನಂತರ ಸತನಾಮನನ್ನು ವಿಮಾನದಿಂದ ರೋಮ ಇಲ್ಲಿಗೆ ಒಯ್ಯಲಾಯಿತು; ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆದಿರುವಾಗ ಅವನು ಮರಣ ಹೊಂದಿನು. ಭಾರತೀಯ ರಾಯಭಾರಿ ಕಚೇರಿಯು ಸತನಾಮನ ಕುಟುಂಬದವರಿಗೆ ಎಲ್ಲ ರೀತಿಯ ಸಹಾಯ ಮಾಡಿದೆ.

ತಪ್ಪಿತಸ್ಥರನ್ನು ಶಿಕ್ಷಿಸಲಾಗುವುದು ! – ಇಟಲಿ ಸರಕಾರ

ಇಟಲಿಯ ಕಾರ್ಮಿಕ ಸಚಿವೆ ಮರಿನಾ ಕಾಲಡೆರೊನ ಇವರು ಈ ಘಟನೆಯನ್ನು ಖಂಡಿಸಿದ್ದಾರೆ. ಈ ಸಂದರ್ಭದಲ್ಲಿ ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಅವರು, ಈ ಘಟನೆ ಕ್ರೌರ್ಯದ ಉದಾಹರಣೆಯಾಗಿದೆ. ಅಧಿಕಾರಿಗಳು ಈ ಸಂಪೂರ್ಣ ಪ್ರಕರಣದ ವಿಚಾರಣೆ ಮಾಡುತ್ತಿದ್ದು ಶೀಘ್ರವೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.