ಪ್ರಧಾನಿ ಮೋದಿ ಕಾರಿನ ಮೇಲೆ ಚಪ್ಪಲಿ ಎಸೆದ ಅಪರಿಚಿತ ವ್ಯಕ್ತಿ !

ವಾರಣಾಸಿ (ಉತ್ತರ ಪ್ರದೇಶ) – ಪ್ರಧಾನಿ ನರೇಂದ್ರ ಮೋದಿ ವಾರಣಾಸಿ ಪ್ರವಾಸದಲ್ಲಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬರು ಅವರ ಕಾರಿನ ಮೇಲೆ ಚಪ್ಪಲಿ ಎಸೆದಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರಲ್ಲಿ ಸೆಕ್ಯುರಿಟಿ ಗಾರ್ಡ್ ಕಾರಿನ ‘ಬಾನೆಟ್’ನಿಂದ ಚಪ್ಪಲಿಯನ್ನು ಎತ್ತಿಕೊಂಡು ಪಕ್ಕಕ್ಕೆ ಎಸೆಯುತ್ತಿರುವುದು ಕಂಡುಬರುತ್ತದೆ. ‘ಎಸೆದ ವಸ್ತು ಚಪ್ಪಲಿಯೇ ಅಥವಾ ಇತರೇ’ ಎಂಬ ಗೊಂದಲ ಉಂಟಾಗಿದೆ ಎನ್ನಲಾಗಿದೆ.

ಕಾಂಗ್ರೆಸ್ ಸೇವಾದಳದಿಂದ ಪ್ರತಿಭಟನೆ!

‘ಮೋದಿ ಕಾರಿನ ಮೇಲೆ ಯಾರೋ ಚಪ್ಪಲಿ ಎಸೆದಿದ್ದು ನಿಜವೇ? ಈ ಘಟನೆಯನ್ನು ತೀವ್ರವಾಗಿ ಖಂಡಿಸಬೇಕು’ ಎಂದು ಗಾಂಧಿನಗರ ಕಾಂಗ್ರೆಸ್ ಸೇವಾದಳದ ‘ಎಕ್ಸ್’ ಖಾತೆಯಿಂದ ಪೋಸ್ಟ್ ಮಾಡಲಾಗಿದೆ.