Retired Pakistan Brigadier Killed: ಅಪರಿಚಿತರಿಂದ ಪಾಕಿಸ್ತಾನದ ಮಾಜಿ ಬ್ರಿಗೇಡಿಯರ್ ಅಮೀರ್ ಹಮ್ಜಾ ನ ಕೊಲೆ 

ಕಾಶ್ಮೀರದ ಸುಂಜ್ವಾನ್‌ನಲ್ಲಿ ಸೇನಾ ನೆಲೆಯ ಮೇಲೆ ಭಯೋತ್ಪಾದಕ ದಾಳಿಯ ಮಾಸ್ಟರ್‌ಮೈಂಡ್ ಆಗಿದ್ದ !

ಪಾಕಿಸ್ತಾನ ಸೇನೆಯ ನಿವೃತ್ತ ಬ್ರಿಗೇಡಿಯರ್ ಅಮೀರ್ ಹಮ್ಜಾ

ನವ ದೆಹಲಿ – ಪಾಕಿಸ್ತಾನದಲ್ಲಿ ಕಳೆದ 2 ವರ್ಷಗಳಿಂದ ಭಾರತದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರು ಮತ್ತು ಅವರ ಮಾಸ್ಟರ್‌ಮೈಂಡ್‌ಗಳನ್ನು ಅಪರಿಚಿತರು ಕೊಲ್ಲುತ್ತಿದ್ದಾರೆ. ಇದೀಗ ಪಾಕಿಸ್ತಾನ ಸೇನೆಯ ನಿವೃತ್ತ ಬ್ರಿಗೇಡಿಯರ್ ಅಮೀರ್ ಹಮ್ಜಾ ಅವರನ್ನು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಝೀಲಂನಲ್ಲಿ ಈ ಘಟನೆ ನಡೆದಿದೆ. ಹಮ್ಜಾ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ ವಿಶೇಷ ಅಧಿಕಾರಿಯಾಗಿದ್ದರು. ಈತನನ್ನು 2012ರಲ್ಲಿ ಅಮೆರಿಕ ‘ಜಾಗತಿಕ ಭಯೋತ್ಪಾದಕ’ ಎಂದು ಘೋಷಿಸಿತ್ತು. 26 ನವೆಂಬರ್ 2008 ರ ಮುಂಬಯಿ ಮೇಲಿನ ಭಯೋತ್ಪಾದಕ ದಾಳಿಯಲ್ಲೂ ಆತ ಭಾಗಿಯಾಗಿದ್ದ.

1. ಹಮ್ಜಾ ತನ್ನ ಮಗಳು ಮತ್ತು ಪತ್ನಿಯೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ 2 ಬೈಕ್‌ಗಳಲ್ಲಿ ಬಂದ 4 ಅಪರಿಚಿತ ದುಷ್ಕರ್ಮಿಗಳು ಅವರ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ಹಮ್ಜಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪತ್ನಿ ಹಾಗೂ ಪುತ್ರಿ ಗಾಯಗೊಂಡಿದ್ದಾರೆ.

2. ಫೆಬ್ರವರಿ 10, 2018 ರಂದು, ಜಮ್ಮು ಮತ್ತು ಕಾಶ್ಮೀರದ ಸುಂಜ್ವಾನ್‌ನಲ್ಲಿರುವ ಭಾರತೀಯ ಸೇನಾ ನೆಲೆಯ ಮೇಲಿನ ಭಯೋತ್ಪಾದಕ ದಾಳಿಯ ಮಾಸ್ಟರ್‌ಮೈಂಡ್ ಹಮ್ಜಾ ಆಗಿದ್ದ. ಈ ದಾಳಿಯಲ್ಲಿ 1 ನಾಗರಿಕ ಮತ್ತು 3 ಭಯೋತ್ಪಾದಕರು ಸಾವನ್ನಪ್ಪಿದ್ದರೆ, 6 ಭಾರತೀಯ ಯೋಧರು ಹುತಾತ್ಮರಾಗಿದ್ದರು. 3 ದಿನಗಳ ಕಾಲ ಸೇನೆಯಿಂದ ಇಲ್ಲಿ ಕ್ರಮ ಕೈಗೊಳ್ಳಲಾಗಿತ್ತು. ಈ ದಾಳಿಯನ್ನು ಜೈಷ್-ಎ-ಮೊಹಮ್ಮದ್ ಉಗ್ರರು ನಡೆಸಿದ್ದರು. ಇದರ ಹಿಂದೆ ಐಎಸ್‌ಐ ಕೈವಾಡವಿದ್ದು, ಅಮೀರ್ ದಾಳಿಗೆ ಯೋಜನೆ ರೂಪಿಸಿದ್ದ.

ಸಂಪಾದಕೀಯ ನಿಲುವು

ಪಾಕಿಸ್ತಾನದಲ್ಲಿ ಅಪರಿಚಿತರಿಂದ ಭಯೋತ್ಪಾದಕರ ಮತ್ತು ಬಂಟರ ಹತ್ಯೆಗಳ ಹಿಂದೆ ಕರ್ಮದ ಫಲವಾಗಿದೆ !