Girls Honored for Savings Cows: ಭಾಗ್ಯನಗರದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಟ್ರಕ್ ತಡೆದ ಹಿಂದೂ ಗೋರಕ್ಷಕ ಮಹಿಳೆಯರ ಸನ್ಮಾನ !

ಮಹಿಳೆಯರೂ ಮುಸ್ಲಿಂ ಗುಂಪನ್ನು ಎದುರಿಸಿದರು!

ಭಾಗ್ಯನಗರ (ತೆಲಂಗಾಣ) – ಬಕ್ರಿ ಈದ್‌ಗೂ ಮುನ್ನ ಅಕ್ರಮ ಗೋವುಗಳನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ತಡೆದ ಇಬ್ಬರು ಮಹಿಳಾ ಹಿಂದೂ ಗೋರಕ್ಷಕರನ್ನು ಬಿಜೆಪಿ ನಾಯಕಿ ಮಾಧವಿ ಲತಾ ಸನ್ಮಾನಿಸಿದರು. ಈ ಸಮಯದಲ್ಲಿ ಗೋ ರಕ್ಷಕ ಮಹಿಳೆಯರಿಬ್ಬರೂ ಮುಸ್ಲಿಂ ಗುಂಪನ್ನು ಎದುರಿಸಬೇಕಾಯಿತು. ಈ ಮಹಿಳಾ ಗೋರಕ್ಷಕರ ಹೆಸರುಗಳು ಶ್ರೀವನಿತಾ ಮೈಥಿಲಿ ಮತ್ತು ಸುನೀತಾ ಎಂದಾಗಿದೆ.

ಈ ಬಗ್ಗೆ ಸಿಕ್ಕಿದ ಮಾಹಿತಿಯ ಪ್ರಕಾರ, ಜೂನ್ 16, 2024 ರಂದು, ಹಸುಗಳನ್ನು ವಾಹನದಲ್ಲಿ ಕೂಡಿ ಹಾಕಿ ಮಲ್ಕಾಪೇಟೆಗೆ ಕರೆದೊಯ್ಯಲಾಗುತ್ತಿತ್ತು. ಈ ಮಾಹಿತಿ ಸಿಗುತ್ತಲೇ ಈ ಹಿಂದೂ ಗೋರಕ್ಷಕ ಮಹಿಳೆಯರು ಟ್ರಕ್ ತಡೆದು ಗೋವುಗಳನ್ನು ತೆಗೆದುಕೊಂಡು ಹೋಗುವುದನ್ನು ವಿರೋಧಿಸಿದರು. ಈ ವೇಳೆ ಮುಸ್ಲಿಮರ ದೊಡ್ಡ ಗುಂಪು ಈ ಮಹಿಳೆಯರನ್ನು ಸುತ್ತುವರೆದು ಅವರೊಂದಿಗೆ ಅನುಚಿತವಾಗಿ ವರ್ತಿಸಿದರು.

ಈ ಘಟನೆಯನ್ನು ಗಮನಿಸಿದ ಬಿಜೆಪಿ ನಾಯಕಿ ಮಾಧವಿ ಲತಾ ಇವರು ಈ ಇಬ್ಬರು ಗೋರಕ್ಷಕ ಮಹಿಳೆಯರ ಸನ್ಮಾನ ಮಾಡಿದ್ದಾರೆ. ಈ ಮಹಿಳೆಯರು ತಮ್ಮ ಜೀವನದುದ್ದಕ್ಕೂ ಗೋವುಗಳನ್ನು ರಕ್ಷಿಸುವ ಪ್ರತಿಜ್ಞೆ ಮಾಡಿದ್ದಾರೆ ಎಂದು ಮಾಧವಿ ಲತಾ ಹೇಳಿದರು.

ಸಂಪಾದಕೀಯ ನಿಲುವು

ಗೋವುಗಳ ಅಕ್ರಮ ಸಾಗಾಟ ತಡೆಯಲು ಮಹಿಳೆಯರು ರಸ್ತೆಗೆ ಇಳಿಯಬೇಕಾಗಿರುವುದು ಪೊಲೀಸರಿಗೆ ನಾಚಿಕೆಗೇಡಿನ ಸಂಗತಿ !