ನಾಸಿಕ್ – ನಗರದ ಭದ್ರಕಾಳಿ ಪ್ರದೇಶದಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿರುವಾಗ ಅದನ್ನು ತಡೆದ ಶ್ರೀಕಾಂತ್ ಕ್ಷತ್ರಿಯ (38 ವರ್ಷ) ಮತ್ತು ನೀಲೇಶ್ ಗಾಂಗುರ್ಡೆ (23 ವರ್ಷ) ಎಂಬುವರ ಮೇಲೆ ದಾಳಿ ನಡೆದಿದೆ. ಈ ವೇಳೆ ಅವರು ಗಾಯಗೊಂಡಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಘಟನೆಯ ನಂತರ, ಬಜರಂಗದಳ ಕಾರ್ಯಕರ್ತರು ಗಾಯಾಳುಗಳನ್ನು ಭೇಟಿ ಮಾಡಲು ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರಿದ್ದರು.
ಸಂಪಾದಕೀಯ ನಿಲುವುಗೋಹತ್ಯೆ ನಿಷೇಧ ಕಾಯಿದೆ ಪರಿಣಾಮಕಾರಿಯಾಗಿ ಜಾರಿಯಾಗುವುದಿಲ್ಲ ಹಾಗೂ ಗೋಹತ್ಯೆ ತಡೆಯುವವರ ಮೇಲೆ ಹಲ್ಲೆಗಳು ನಡೆಯುತ್ತಿವೆ, ಇದು ಖೇದಕರ ! ದಾಳಿ ಮಾಡುವ ಮತಾಂಧರ ವಿರುದ್ಧ ಪೊಲೀಸರು ಯಾವಾಗ ಕಠಿಣ ಕ್ರಮ ಕೈಗೊಳ್ಳುವರು ? |