|
ಬಾಲೇಶ್ವರ (ಒಡಿಶಾ) – ಸುನಾಹಾಟ ಪ್ರದೇಶದಲ್ಲಿ ಪ್ರಾಣಿಗಳ ಹತ್ಯೆಯಿಂದಾಗಿ, ಬಕರೀದ್ ದಿನದಂದು ಒಂದು ನಾಲೆಯ ನೀರು ಕೆಂಪಗಾಗಿದ್ದರಿಂದ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದಕ್ಕೆ ಸಿಟ್ಟಿಗೆದ್ದ ಮುಸಲ್ಮಾನರು ಹಿಂದೂಗಳ ಮೇಲೆ ಪೋಲೀಸರ ಎದುರಲ್ಲೇ ದಾಳಿ ಮಾಡಿದರು. ಇದರಿಂದ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು. ಭಾರೀ ಪ್ರಮಾಣದಲ್ಲಿ ಕಲ್ಲು ತೂರಾಟ ನಡೆದಿದ್ದರಿಂದ ಪೊಲೀಸರು ಮತ್ತು ಪತ್ರಕರ್ತರು ಗಾಯಗೊಂಡರು. ಸದ್ಯ ಸ್ಥಳದಲ್ಲಿ ನಿಷೇಧಾಜ್ಞೆ ಹೇರಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಜೂನ್ 17, ಬಕರೀದ್ ದಿನದಂದು ಮಧ್ಯಾಹ್ನ ಕೆಲವು ಸ್ಥಳೀಯರಿಗೆ ಜನವಸತಿ ಪ್ರದೇಶದಿಂದ ಹರಿಯುವ ನಾಲೆಯಲ್ಲಿ ಕೆಂಪು ನೀರು ಕಂಡು ಬಂದಿತು. ಈ ವಿಷಯವನ್ನು ಅಲ್ಲಿಯ ಜನರು ಕೂಡಲೇ ಪೊಲೀಸರಿಗೆ ತಿಳಿಸಿದರು. ಪೊಲೀಸರು ಕೆಂಪು ನೀರಿನ ಮಾದರಿಯನ್ನು ತೆಗೆದುಕೊಂಡು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದರು. ಈ ಕೆಂಪು ನೀರು, ಮುಸ್ಲಿಮರು ಹತ್ಯೆ ಮಾಡಿದ ಪ್ರಾಣಿಗಳದ್ದಾಗಿದೆಯಂದು ಹೇಳುತ್ತಾ, ಹಿಂದೂ ಸಂಘಟನೆಯ ಕಾರ್ಯಕರ್ತರು ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ಆರಂಭಿಸಿದರು. ಆ ನಂತರ ಮುಸ್ಲಿಮರೂ ಕೂಡ ಅಲ್ಲಿಗೆ ತಲುಪಿದರು. ಮುಸ್ಲಿಮರು ಹಿಂದೂ ಪ್ರತಿಭಟನಾಕಾರರ ಜೊತೆ ವಾದ ಮಾಡತೊಡಗಿದರು. ಪೊಲೀಸರ ಉಪಸ್ಥಿತಿಯಲ್ಲಿಯೇ ಮುಸಲ್ಮಾನರು ಹಿಂದೂಗಳ ಮೇಲೆ ಕಲ್ಲು ತೂರಲು ಪ್ರಾರಂಭಿಸಿದರು.
(ಪೊಲೀಸರ ಉಪಸ್ಥಿತಿಯಲ್ಲೇ ಮುಸಲ್ಮಾನರು ಕಲ್ಲು ತೂರಾಟ ಮಾಡುತ್ತಾರೆಂದರೆ ಅವರ ಮೇಲೆ ಪೊಲೀಸರಿಗೆ ನಿಯಂತ್ರಣವಿಲ್ಲ ಎಂದರ್ಥ. ಇಂತಹ ಸ್ಥಿತಿಯಲ್ಲಿ `ಹಿಂದೂಗಳು ಎಂದಾದರೂ ಸುರಕ್ಷಿತವಾಗಿರಬಹುದೇ?’ ಎಂಬುದನ್ನು ಹಿಂದೂಗಳ ವಿಚಾರ ಮಾಡಬೇಕು- ಸಂಪಾದಕರು) ಈ ಘಟನೆಯಲ್ಲಿ ಕೆಲವರು ಗಾಯಗೊಂಡರು. ಹಾಗೆಯೇ ಕೆಲವು ವಾಹನಗಳು ಮತ್ತು ಸುದ್ದಿವಾಹಿನಿಗಳ ಕ್ಯಾಮೆರಾಕ್ಕೆ ಹಾನಿಯಾಯಿತು. ಪೊಲೀಸರು ಕೊನೆಗೂ ಮುಸಲ್ಮಾನರನ್ನು ಹಿಂದಕ್ಕೆ ತಳ್ಳುತ್ತಾ, ಪರಿಸ್ಥಿತಿಯ ಮೇಲೆ ನಿಯಂತ್ರಣ ಸಾಧಿಸಿದರು. ಈ ಪ್ರಕರಣದಲ್ಲಿ ಇದುವರೆಗೂ ಯಾರನ್ನೂ ಬಂಧಿಸಲಾಗಿಲ್ಲವೆಂದು ಹೇಳಲಾಗುತ್ತಿದೆ.
ಸಂಪಾದಕೀಯ ನಿಲುವುಒಡಿಶಾದಲ್ಲಿ ಬಿಜೆಪಿ ಸರಕಾರ ಬಂದಿದ್ದು, ರಾಜ್ಯದಲ್ಲಿ ಮತ್ತೆ ಇಂತಹ ಘಟನೆ ಮರುಕಳಿಸದಂತೆ ಹಾಗೂ ಇಂತಹ ಗಲಭೆಕೋರರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಹಿಂದೂಗಳ ಅಪೇಕ್ಷೆಯಾಗಿದೆ. |