Rare Flesh Eating Bacterial Disease: ಜಪಾನ್‌ನಲ್ಲಿ ರೋಗಿಗಳ ಮಾಂಸ ತಿನ್ನುವ ಬ್ಯಾಕ್ಟೀರಿಯಾ ಹರಡಿತು : 977 ರೋಗಿಗಳು ಪತ್ತೆ! 

ಟೋಕಿಯೊ (ಜಪಾನ್) – ಜಪಾನ್‌ನಲ್ಲಿ ಹೊಸ ಅಪಾಯಕಾರಿ ಕಾಯಿಲೆ ಬೆಳಕಿಗೆ ಬಂದಿದೆ. ಇದರಲ್ಲಿ ‘ಬ್ಯಾಕ್ಟೀರಿಯಾ’ ರೋಗಿಯ ದೇಹದ ಮಾಂಸವನ್ನು ತಿನ್ನುತ್ತದೆ. ಈ ರೋಗದ ಹೆಸರು ‘ಸ್ಟ್ರೆಪ್ಟೋಕೊಕಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್’ (STSS). ಈ ಕಾಯಿಲೆಗೆ ತುತ್ತಾದ ನಂತರ, ರೋಗಿಯು 48 ಗಂಟೆಗಳ ಒಳಗೆ ಸಾಯುತ್ತಾನೆ. ಜಪಾನ್ ನಲ್ಲಿ ಈ ಕಾಯಿಲೆಯ 977 ಪ್ರಕರಣಗಳು ವರದಿಯಾಗಿವೆ.

ಈ ರೋಗವು ‘ಗ್ರೂಪ್ ಎ ಸ್ಟ್ರೆಪ್ಟೋಕೊಕಸ್ (ಜಿ.ಎ.ಎಸ್.) ಬ್ಯಾಟ್ಕೇರಿಯಾನಿಂದ ಉಂಟಾಗುತ್ತದೆ. ಈ ರೋಗವು ಮಕ್ಕಳು ಮತ್ತು ವೃದ್ಧರಿಗೆ ಹೆಚ್ಚು ಅಪಾಯಕಾರಿಯಾಗಿದೆ. ಸೋಂಕಿತ ರೋಗಿಗಳು ಮೊದಲು ಕಾಲುಗಳಿಗೆ ಬಾವು ಬರುತ್ತದೆ ಮತ್ತು ಗಂಟಲಿನಲ್ಲಿ ತೊಂದರೆಯಾಗುತ್ತದೆ. ಇದರೊಂದಿಗೆ ದೇಹದಲ್ಲಿ ನೋವು, ಜ್ವರ, ಕಡಿಮೆ ರಕ್ತದೊತ್ತಡ, ‘ನೆಕ್ರೋಸಿಸ್’ (ದೇಹದ ಅಂಗಾಂಶಗಳ ಸಾವು), ಉಸಿರಾಟದ ತೊಂದರೆ, ಅಂಗಾಂಗ ವೈಫಲ್ಯದಂತಹ ಸಮಸ್ಯೆಗಳೂ ಉಂಟಾಗುತ್ತವೆ, ಎಂದು ಟೋಕಿಯೊದ ಮಹಿಳಾ ವೈದ್ಯೆ ಕೆನ್ ಕಿಕುಚಿ ಹೇಳಿದ್ದಾರೆ. ಜನರು ತಮ್ಮ ಕೈಗಳನ್ನು ಆಗಾಗ್ಗೆ ತೊಳೆಯಬೇಕು ಮತ್ತು ತೆರೆದ ಗಾಯಗಳಿಗೆ ಚಿಕಿತ್ಸೆ ಕೊಡಬೇಕೆಂದು ಕಿಕುಚಿ ಒತ್ತಾಯಿಸಿದರು.

ಈ ರೋಗವು ಈಗ ಯುರೋಪಿನ 5 ದೇಶಗಳಿಗೆ ಹರಡಿದೆ. ಇವುಗಳಲ್ಲಿ ಬ್ರಿಟನ್, ಫ್ರಾನ್ಸ್, ಐರ್ಲೆಂಡ್, ನೆದರ್ಲ್ಯಾಂಡ್ಸ್ ಮತ್ತು ಸ್ವೀಡನ್ ಸೇರಿವೆ. ರೋಗದ ವಿರುದ್ಧ ಹೋರಾಡಲು ಆರೋಗ್ಯ ಅಧಿಕಾರಿಗಳು ನಿರಂತರವಾಗಿ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ ಎಂದು ಜಪಾನಿನ ವೈದ್ಯ ಹಿರ್ಮುತ್ ಹೇಳಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸಲು ಅಭಿಯಾನಗಳನ್ನು ನಡೆಸಲಾಗುತ್ತಿದೆ. ಈ ರೋಗದ ಗಂಭೀರತೆ ಮತ್ತು ಅಪಾಯಗಳನ್ನು ವಿವರಿಸಲಾಗಿದೆ.