ಶ್ರೀ ದುರ್ಗಾಡಿ ದೇವಿಯ ದೇವಸ್ಥಾನದಲ್ಲಿ ಪ್ರವೇಶ ನಿಷೇಧಿಸಿದ್ದರಿಂದ ಶಿನಸೇನೆಯಿಂದ ಘಂಟಾನಾದ ಆಂದೋಲನ
ಠಾಣೆ, ಜೂನ್ 17 (ಸುದ್ದಿ.) – ಕಲ್ಯಾಣ್‌ನ ದುರ್ಗಾಡಿ ಕೋಟೆ ಪ್ರದೇಶದಲ್ಲಿರುವ ಮಸೀದಿಯಲ್ಲಿ ನಮಾಜ್ ಮಾಡಲಾಗುತ್ತದೆ; ಆದರೆ ಬಕ್ರಿದ್ ದಿನದಂದು ಇಲ್ಲಿನ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ದರ್ಶನವನ್ನು ನಿಷೇಧಿಸಲಾಗಿದೆ. ಈ ನಿಷೇಧದ ವಿರುದ್ಧ ಜೂನ್ 17 ರಂದು ದುರ್ಗಾಡಿ ಕೋಟೆಯ ಹೊರಗೆ ಶಿವಸೇನೆ ಮತ್ತು ಠಾಕ್ರೆ ಗುಂಪಿನ ಕಾರ್ಯಕರ್ತರು ಘಂಟಾನಾದ (ಗಂಟೆ ಬಾರಿಸುವ) ಪ್ರತಿಭಟನೆ ನಡೆಸಿದರು. ‘ನಮಗೆ ದೇಗುಲ ಪ್ರವೇಶಿಸಲು ಬಿಡುವವರೆಗೂ ಧರಣಿ ಮುಂದುವರಿಯಲಿದೆ’ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
1. ಬಕ್ರಿದ್ ದಿನದಂದು ಕಲ್ಯಾಣದ ದುರ್ಗಾಡಿ ಕೋಟೆಯಲ್ಲಿ ದೇವಿಯ ದರ್ಶನಕ್ಕೆ ನಿಷೇಧಿಸಲಾಗುತ್ತದೆ. 90 ರ ದಶಕದಲ್ಲಿ, ಧರಂವೀರ್ ಆನಂದ್ ದಿಘೆ ಇದನ್ನು ವಿರೋಧಿಸಿ ಘಂಟಾನಾದ ಪ್ರತಿಭಟನೆಯನ್ನು ಪ್ರಾರಂಭಿಸಿದ್ದರು. ಈ ವರ್ಷವೂ ಇಲ್ಲಿ ಘಂಟಾನಾದ ಪ್ರತಿಭಟನೆ ನಡೆಸಲಾಯಿತು.
2. ಇಬ್ಬರು ಕಾರ್ಯಕರ್ತರು ಪರಸ್ಪರ ಬೆರೆಯದಂತೆ ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಎರಡು ಗುಂಪುಗಳನ್ನು ಪ್ರತ್ಯೇಕವಾಗಿ ಇರಿಸಲು ಯತ್ನಿಸಿದರು. ಕಾರ್ಯಕರ್ತರು ಕೋಟೆಯಲ್ಲಿ ಕೆಲಕಾಲ ಘೋಷಣೆಗಳನ್ನು ಕೂಗಿದರು. ಪ್ರತಿಭಟನಾಕಾರರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ಸಂಪಾದಕೀಯ ನಿಲುವುವಾಸ್ತವದಲ್ಲಿ ದುರ್ಗಾಡಿ ಕೋಟೆಯ ಮೇಲೆ ಅತಿಕ್ರಮಣ ಮಾಡಿ ಅಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ. ಅಲ್ಲಿ ಮುಸಲ್ಮಾನರಿಗೆ ಅವಕಾಶ ಕೊಡುವುದು ಮತ್ತು ಆ ಸಮಯದಲ್ಲಿ ಹಿಂದೂಗಳಿಗೆ ದೇವಸ್ಥಾನದಲ್ಲಿ ಪ್ರವೇಶ ನಿರಾಕರಿಸುವುದು ಸರ್ಕಾರಿ ಸಂಸ್ಥೆಗಳ ದಬ್ಬಾಳಿಕೆಯಾಗಿದೆ ! ಛತ್ರಪತಿ ಶಿವಾಜಿ ಮಹಾರಾಜರ ಮಹಾರಾಷ್ಟ್ರದಲ್ಲಿ ಈ ರೀತಿ ನಡೆಯುತ್ತಿರುವುದು ಹಿಂದೂಗಳಿಗೆ ನಾಚಿಕೆಗೇಡು! |