ಪಡಘಾ (ಭಿವಂಡಿ) ಇಲ್ಲಿನ ಸಭೆ !
ಠಾಣೆ, ಜೂನ 16 (ವಾರ್ತೆ) – ಹಿಂದೂಗಳು ಒಂದುಗೂಡಿದರೆ, ಹಿಂದೂರಾಷ್ಟ್ರವಾಗುವುದು; ಆದರೆ ಈಗ ಅದು ಆಗಬಹುದು ಎಂದೆನಿಸುವುದಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಒಂದು ವೇಳೆ ಭಾಜಪ 400ಕ್ಕಿಂತ ಅಧಿಕ ಸ್ಥಾನವನ್ನು ಗಳಿಸಿದ್ದರೆ, ಭಾರತ ಹಿಂದೂ ರಾಷ್ಟ್ರವೆಂದು ಘೋಷಿಸಲ್ಪಡುತ್ತಿತ್ತು. ನಾನು ಎಲ್ಲಿಯವರೆಗೆ ಬದುಕಿದ್ದೇನೋ, ಅಲ್ಲಿಯವರೆಗೆ ಹಿಂದೂ ರಾಷ್ಟ್ರಕ್ಕಾಗಿ ಪ್ರಯತ್ನಿಸುತ್ತಿರುವೆ, ಎಂದು ತೇಲಂಗಾಣ (ಭಾಗ್ಯನಗರ)ದ ಪ್ರಖರ ಹಿಂದುತ್ವನಿಷ್ಠ ಹಾಗೂ ಭಾಜಪ ಶಾಸಕ ಶ್ರೀ ಟಿ. ರಾಜಾಸಿಂಗ ಇವರು ಭಿವಂಡಿಯ ಪಡಘಾ ಪ್ರದೇಶದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಉದ್ಗರಿಸಿದರು. ಜೂನ 15 ರಂದು ಇಲ್ಲಿ `ಸಕಲ ಹಿಂದೂ ಸಮಾಜ’ ದ ವತಿಯಿಂದ ಸಂತ ಸಮ್ಮೇಳನ ಮತ್ತು ಹಿಂದೂ ಧರ್ಮಸಭೆಯನ್ನು ಆಯೋಜಿಸಲಾಗಿತ್ತು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು. ಧರ್ಮಸಭೆಯ ವ್ಯಾಸಪೀಠದ ಮೇಲೆ ಬಾಲಯೋಗಿ ಸದಾನಂದ ಮಹಾರಾಜ, ಮಹಂತ ಶ್ರೀ ಚಿದಾನಂದ ಸರಸ್ವತಿ ಮಹಾರಾಜ, ಮಹಂತ ಶ್ರೀ ಫುಲನಾಥ ಬಾಬಾ, ಶ್ರೀಶಿವರೂಪಾನಂದ ಸ್ವಾಮಿ ಮತ್ತು ಇತರೆ ಸಂತರ ಉಪಸ್ಥಿತಿ ಲಭಿಸಿತು. `ದೇಶದ ಪ್ರತಿಯೊಬ್ಬ ಹಿಂದೂ ಧರ್ಮಾಚರಣೆ ಮಾಡಿ ರಾಷ್ಟ್ರಸೇವೆಗಾಗಿ ಕೊಡುಗೆ ನೀಡುವುದರೊಂದಿಗೆ ಹಿಂದೂ ರಾಷ್ಟ್ರ ಸ್ಥಾಪನೆಯ ಸಂಕಲ್ಪನೆಯನ್ನು ಮಾಡಬೇಕು’, ಎಂದೂ ಟಿ. ರಾಜಾಸಿಂಗ ಹೇಳಿದರು.
ಶಾಸಕ ಟಿ. ರಾಜಾಸಿಂಗ ಅವರ ಭಾಷಣದ ಮಹತ್ವದ ಅಂಶಗಳು
ಲವ್ ಜಿಹಾದ ತಡೆಯಲು ಹಿಂದೂಗಳ ಪರಿಣಾಮಕಾರಿ ಸಂಘಟನೆಯ ಆವಶ್ಯಕತೆ !
‘ಹಿಂದೂ ಯುವತಿ ಮತ್ತು ಮಹಿಳೆಯರ ಮೇಲೆ ಬಲಾತ್ಕಾರ ಮಾಡಿ ಅವರನ್ನು ವಾಮಮಾರ್ಗಕ್ಕೆ ದೂಡುವ ಷಡ್ಯಂತ್ರ ದೇಶದಲ್ಲಿ ನಡೆಯುತ್ತಿದೆ. ಇದರ ವಿರುದ್ಧ ಸಮಾಜವು ಜಾತಿ, ಪಂಥ, ಪಕ್ಷ, ಪ್ರದೇಶ ವಿವಾದ ಇವುಗಳಲ್ಲಿ ಸಿಲುಕದೇ ಹಿಂದೂ ಎಂದು ಕೇಸರಿ ಧ್ವಜದ ಕೆಳಗೆ ಸಂಘಟಿತರಾಗಬೇಕು. ಹೀಗೆ ಮಾಡದಿದ್ದರೆ `ಲವ ಜಿಹಾದ’ಗೆ ಅನೇಕ ಯುವತಿಯರು ಬಲಿ ಬೀಳುತ್ತಾರೆ. `ಲವ ಜಿಹಾದ’ ತಡೆಯಲು ಹಿಂದೂ ಯುವತಿಯರನ್ನು ಜಾಗೃತಗೊಳಿಸುವುದು ಮತ್ತು ಹಿಂದೂಗಳ ಪ್ರಭಾವಯುತವಾಗಿ ಸಂಘಟನೆ ನಿರ್ಮಾಣ ಮಾಡುವುದು ಅನಿವಾರ್ಯವಾಗಿದೆ. `ಲವ್ ಜಿಹಾದ’ ವಿರೋಧಿ ಕಾನೂನು ನಿರ್ಮಿಸಲು ಸರಕಾರವನ್ನು ಬೆಂಬೆತ್ತುವಿಕೆ ಮಾಡಬೇಕು.
ಕಾಂಗ್ರೆಸ 1948ರಿಂದ ಬಹುಸಂಖ್ಯಾತ ಹಿಂದೂ ಧರ್ಮವಾಗಿರುವ ಭಾರತವನ್ನು ಇಸ್ಲಾಮೀಕರಣ ಮಾಡುವ ಸಂಚು ರೂಪಿಸಿತ್ತು. ಕೇವಲ ಮಹಾರಾಷ್ಟ್ರದಲ್ಲಿಯೇ ಅನೇಕ ವರ್ಷಗಳಿಂದ `ಲವ್ ಜಿಹಾದ’ನ ಸಾವಿರಾರು ಪ್ರಕರಣಗಳನ್ನು ನಡೆದಿವೆ. ದೇಶಾದ್ಯಂತ ಈ ಪಿಡುಗು ಹರಡುತ್ತಿದೆ. `ಹಿಂದೂಗಳಿಗೆ ಪ್ರತ್ಯೇಕ ಕಾನೂನು ಮತ್ತು ಮುಸಲ್ಮಾನರಿಗೆ ಅವರ ಧರ್ಮಾನುಸಾರ ಮುಕ್ತತೆ’ ಈ ತತ್ವವನ್ನು ಕಿತ್ತೊಗೆದರೆ ಭಯೋತ್ಪಾದಕತೆ `ಲವ್ ಜಿಹಾದ’ ಹಿಡಿತಕ್ಕೆ ಬರುತ್ತದೆ.
ಪ್ರಧಾನಿಯವರು ವಕ್ಫ ಕಾನೂನು ರದ್ದುಗೊಳಿಸಬೇಕು !
ಜನಸಂಖ್ಯೆ ಜಿಹಾದ, ಲವ್ ಜಿಹಾದ ಮತ್ತು ವಕ್ಫ ಕಾನೂನಿನ ಆಧಾರದಲ್ಲಿ ಲ್ಯಾಂಡ ಜಿಹಾದ ಮಾಡಿ ಭಾರತದ ಭೂಮಿ ಕಬಳಿಸಿ `ಗಜವಾ-ಎ-ಹಿಂದ’ (ಭಾರತದ ಇಸ್ಲಾಮೀಕರಣ) ಈ ಯುದ್ಧದ ಮೂಲಕ ಭಾರತದ ಇಸ್ಲಾಮೀಕರಣ ಮಾಡುವ ಷಡ್ಯಂತ್ರ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ವಕ್ಫ ಕಾನೂನಿನ ಆಧಾರಿತ ವಕ್ಫ ಬೋರ್ಡ ಮೂಲಕ ಭಾರತದಲ್ಲಿ 10 ಲಕ್ಷ ಎಕರೆಗಿಂತ ಅಧಿಕ ಭೂಮಿ ಹಾಗೆಯೇ ಮಹಾರಾಷ್ಟ್ರದ 1 ಲಕ್ಷ 26 ಸಾವಿರ ಎಕರೆ ಭೂಮಿ ಮುಸಲ್ಮಾನರು ಕಬಳಿಸಿದ್ದಾರೆ. ಪ್ರಧಾನಿ ಮತ್ತು ಮುಖ್ಯಮಂತ್ರಿಯವರು ವಕ್ಫ ಮಂಡಳಿಯ ಕಾನೂನನ್ನು ತೆಗೆದುಹಾಕಬೇಕು. ವಕ್ಫ ಬೋರ್ಡ್ ನ ಭೂಮಿಯಲ್ಲಿ ಹಿಂದೂಗಳಿಗಾಗಿ ಆಸ್ಪತ್ರೆ, ಕ್ರೀಡಾಂಗಣ, ವಿಶ್ವವಿದ್ಯಾಲಯಗಳನ್ನು, ಮನೆಗಳನ್ನು ನಿರ್ಮಿಸಬೇಕು.