Delhi Metro : ಇನ್ನು ಮುಂದೆ ದೆಹಲಿಯಲ್ಲಿ ಸ್ವಯಂಚಾಲಿತ ಮೆಟ್ರೋ !

ದೆಹಲಿ – ನಗರದಲ್ಲಿ ಮೆಟ್ರೋ ಚಾಲಕ ರಹಿತ, ಅಂದರೆ ಸ್ವಯಂಚಾಲಿತ ಮಾಡುವುದಕ್ಕಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಜೂನ್ ತಿಂಗಳ ಕೊನೆಯಲ್ಲಿ ದೆಹಲಿಯ ಮೆಟ್ರೋ ಸಂಪೂರ್ಣ ಸ್ವಯಂಚಾಲಿತವಾಗಲಿದೆ ಎಂದು “ದಿಲ್ಲಿ ಮೆಟ್ರೋ ರೇಲ್ ಕಾರ್ಪೊರೇಷನ್” ಹೇಳಿದೆ. ನಗರದಲ್ಲಿ ೧೬ ಮೆಟ್ರೋಗಳಲ್ಲಿ ಚಾಲಕರ ’ಕ್ಯಾಬಿನ್’ತೆಗೆಯಲಾಗುವುದು. ಇದರಿಂದ ಮೆಟ್ರೋದಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಸ್ಥಳಾವಕಾಶ ದೊರೆಯುವುದು. ಮಾನವ ಹಸ್ಥಕ್ಷೇಪ ಇಲ್ಲದಿರುವುದರಿಂದ ಮಾನವ ತಪ್ಪುಗಳನ್ನು ತಪ್ಪಿಸಬಹುದು. ರೈಲಿನ ಕಾರ್ಯನಿರ್ವಹಿಸಲು ಸುಲಭವಾಗುವುದು. ದೆಹಲಿಯ ಮೆಟ್ರೋ ನಂತರ ಈ ವ್ಯವಸ್ಥೆಯನ್ನು ಮುಂಬಯಿ ಮತ್ತು ಪುಣೆಯಲ್ಲಿನ ಮೆಟ್ರೋಗಳಲ್ಲಿಯೂ ಬಳಸಲಾಗುವುದು. ದೆಹಲಿಯ ಮೆಟ್ರೋಗಳಲ್ಲಿ ಸಮನ್ವಯಕ್ಕಾಗಿ ನಿಯೋಜಿಸಲಾದ ’ಅಟೆಂಡೆಂಟ್’ಗಳನ್ನು ಹಂತಹಂತವಾಗಿ ಕಡಿಮೆಗೊಳಿಸಲಾಗುವುದು. ಇನ್ನು ಮುಂದೆ ೩-೪ ರೈಲುಗಳು ಸೇರಿ ಒಬ್ಬ ಅಟೆಂಡೆಂಟ್ ಇಡಲಾಗುವುದು.