Elon Musk On EVM : ವಿದ್ಯುನ್ಮಾನ ಮತಯಂತ್ರಗಳನ್ನು ಕೃತಕ ಬುದ್ಧಿಮತ್ತೆ (‘AI’) ಮೂಲಕ ‘ಹ್ಯಾಕ್’ ಮಾಡಬಹುದು!

ಎಲಾನ್ ಮಸ್ಕ ಅವರ ಹೇಳಿಕೆ !

ನವ ದೆಹಲಿ – ಅಮೇರಿಕೆಯ `ಟೆಸ್ಲಾ’ ಸಂಸ್ಥೆಯ ಮಾಲೀಕರಾದ ಎಲಾನ್ ಮಸ್ಕ ಅವರು ಅಮೇರಿಕೆಯ ಅಧ್ಯಕ್ಷರ ಚುನಾವಣೆಯನ್ನು ಇಲೆಕ್ಟ್ರಾನಿಕ್ ಮತಯಂತ್ರಗಳ ಮೂಲಕ ನಡೆಸಬಾರದು ಎಂದು ಕರೆ ನೀಡಿದ್ದಾರೆ. ಅವರು `ಎಕ್ಸ್’ ಮೇಲೆ ಪೋಸ್ಟ ಮಾಡಿ, ‘ವಿದ್ಯುನ್ಮಾನ ಮತಯಂತ್ರಗಳು ರದ್ದುಗೊಳಿಸಬೇಕು’ ಮಾನವ ಅಥವಾ ಕೃತ್ರಿಮ ಬುದ್ಧಿಮತ್ತೆ(ಎಐ) ಮೂಲಕ ಈ ಯಂತ್ರಗಳು ‘ಹ್ಯಾಕ್’ ಆಗುವ ಅಪಾಯವಿದೆ. ಇದರ ಸಾಧ್ಯತೆ ಕಡಿಮೆ ಎಂದು ತೋರಿದರೂ ಸಹ ಅದು ಬಹಳ ದೊಡ್ಡದಾಗಿದೆ ಎಂದು ಹೇಳಿದ್ದಾರೆ.

ಅಮೇರಿಕೆಯಲ್ಲಿ ನವೆಂಬರ್‌ನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಇದರಲ್ಲಿ ಡೆಮಾಕ್ರಟಿಕ್ ಪಕ್ಷದಿಂದ ಅಧ್ಯಕ್ಷ ಜೋ ಬೈಡೆನ್, ರಿಪಬ್ಲಿಕನ್ ಪಕ್ಷದಿಂದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.

ಭಾರತದಲ್ಲಿನ ವಿದ್ಯುನ್ಮಾನ ಮತಯಂತ್ರಗಳು ವಿಮಾನದ ‘ಕಪ್ಪು ಪೆಟ್ಟಿಗೆ’ ಇದ್ದಂತೆ! – ರಾಹುಲ್ ಗಾಂಧಿ

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಎಲಾನ್ ಮಸ್ಕ್ ಅವರ ಪೋಸ್ಟ್ ಅನ್ನು ಮರು ಪೋಸ್ಟ್ ಮಾಡಿ, ಭಾರತದ ಇಲೆಕ್ಟ್ರಾನಿಕ್ ಮತಯಂತ್ರಗಳು ವಿಮಾನದ ‘ಕಪ್ಪು ಪೆಟ್ಟಿಗೆ'(ಬ್ಲಾಕ್ ಬಾಕ್ಸ್)ಗಳಂತಿವೆ (ಇದರಲ್ಲಿ ವಿಮಾನದ ಪೈಲಟ್‌ಗಳ ಸಂಭಾಷಣೆಗಳು ಮುದ್ರಿತಗೊಳ್ಳುತ್ತವೆ). ಅದರ ತನಿಖೆ ಮಾಡಲು ಯಾರಿಗೂ ಅನುಮತಿಯಿರುವುದಿಲ್ಲ. ನಮ್ಮ ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಯ ಬಗ್ಗೆ ಗಂಭೀರ ಚಿಂತೆ ವ್ಯಕ್ತಪಡಿಸಲಾಗುತ್ತಿದೆ. ಸಂಸ್ಥೆಗಳಲ್ಲಿ ಉತ್ತರದಾಯಿತ್ವದ ಕೊರತೆ ಇದ್ದಾಗ ಪ್ರಜಾಪ್ರಭುತ್ವವೇ ಒಂದು ವಂಚನೆಯಾಗುವ ಸಾಧ್ಯತೆಯಿದೆ. (ಭಾರತದ ವಿದ್ಯುನ್ಮಾನ ಮತಯಂತ್ರಗಳು ಸುರಕ್ಷಿತವಾಗಿವೆ ಎಂದು ಚುನಾವಣಾ ಆಯೋಗ ಪದೇ-ಪದೇ ಸ್ಪಷ್ಟಪಡಿಸುತ್ತಿದೆ. ಭಾರತೀಯ ನ್ಯಾಯಾಂಗ ವ್ಯವಸ್ಥೆಯೂ ಇದಕ್ಕೆ ಪುಷ್ಟಿ ನೀಡಿದೆ. ಹೀಗಿರುವಾಗ ಓರ್ವ ವಿದೇಶಿ ವ್ಯಕ್ತಿಯ ಮೇಲೆ ಏಕಾಏಕಿ ವಿಶ್ವಾಸ ತೋರಿಸುವ ರಾಹುಲ್ ಗಾಂಧಿ, ಭಾರತೀಯ ಆಡಳಿತವನ್ನು ಅವಮಾನಿಸುತ್ತಿದ್ದಾರೆ; ಅದರೊಂದಿಗೆ ಭಾರತೀಯ ಪ್ರಜಾಪ್ರಭುತ್ವದ ಮೇಲೆ ಅಪನಂಬಿಕೆ ತೋರಿಸುತ್ತಿದ್ದಾರೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.- ಸಂಪಾದಕರು)