ಸನಾತನ ಸಂಸ್ಥೆಯ ಪೂ. ಭಗವಂತ ಮೆನರಾಯ್‌ (ವಯಸ್ಸು ೮೫ ವರ್ಷ) ಇವರಿಂದ ದೇಹತ್ಯಾಗ !

ಪೂ. ಭಗವಂತ ಮೆನರಾಯ್‌

ರಾಮನಾಥಿ (ಗೋವಾ) – ಮೂಲತ ಫರಿದಾಬಾದ್‌ (ಹರಿಯಾಣಾ) ನವರಾದ ಹಾಗೂ ಪ್ರಸ್ತುತ ರಾಮನಾಥಿಯಲ್ಲಿರುವ ಸನಾತನ ಸಂಸ್ಥೆಯ ಆಶ್ರಮದಲ್ಲಿ ನೆಲೆಸಿದ್ದ ಸನಾತನದ ೪೬ ನೇ ಸಂತರಾದ ಪೂ. ಭಗವಂತ ಕುಮಾರ್‌ ಮೆನರಾಯ್‌ ಅವರು ೪ ಜೂನ್‌ ೨೦೨೪ ರಂದು ಸಂಜೆ ೭.೧೫ ಗಂಟೆಗೆ ದೇಹತ್ಯಾಗ ಮಾಡಿದರು. ೩ ಪುತ್ರಿಯರು, ೨ ಅಳಿಯಂದಿರು ಮತ್ತು ಮೊಮ್ಮಕ್ಕಳು ಹೀಗೆ ಅವರ ಪರಿವಾರವಿದೆ. ಪೂ. (ದಿ.) ಸೌ. ಸೂರಜಕಾಂತಾ ಮೆನರಾಯ್‌ (ಸನಾತನದ ೪೫ ನೇ ಸಂತರು) ಅವರ ಪತ್ನಿಯಾಗಿದ್ದರು. ಪೂ. ಭಗವಂತ ಮೆನರಾಯ್‌ ಅವರ ಪುತ್ರಿ ಸುಶ್ರೀ (ಕು.) ಸಂಗೀತಾ ಮೆನರಾಯ್‌ ಇವರು ರಾಮನಾಥಿಯಲ್ಲಿರುವ ಸನಾತನ ಸಂಸ್ಥೆಯ ಆಶ್ರಮದಲ್ಲಿ ಪೂರ್ಣ ವೇಳೆ ಸಾಧನೆ ಮಾಡುತ್ತಿದ್ದಾರೆ.