ಈ ವರ್ಷ ೨೦೨೪ ರ ಲೋಕಸಭಾ ಚುನಾವಣೆಯ ಆರಂಭದಲ್ಲಿಯೇ ‘ಅಬ್ ಕೀ ಬಾರ್ ಚಾರ್‌ಸೌ ಪಾರ್’ ಕೇಳಿಬರುತ್ತಿತ್ತು; ಆದರೆ ಎಲ್ಲ ಸಂಖ್ಯಾತ್ಮಕ ಆಟ ಆಡುತ್ತಾ ಹೋದಂತೆ ಭಾಜಪ ಉಗ್ರವಾದ ಸಂಘರ್ಷ ಮಾಡ ಬೇಕಾಗಬಹುದು, ಎಂಬುದು ಯಾರಿಗೂ ಅನಿಸಿರಲಿಲ್ಲ. ಭಾಜಪಕ್ಕೆ ಲೋಕಭೆಯಲ್ಲಿ ೨೪೨ ಸ್ಥಾನ ಸಿಕ್ಕಿದ್ದು ಸಹ ‘ದೇವರ ಕೃಪೆ ಎಂದೇ ಹೇಳಬೇಕಾಗುತ್ತದೆ.’ ಪ್ರತಿಯೊಂದು ರಾಜ್ಯಕ್ಕನುಸಾರ ಭಾಜಪದ ಜನಮತ ಏಕೆ ಕುಸಿಯಿತು ? ಎಂಬುದನ್ನು ಭಾಜಪ ಚಿಂತನೆ ಮಾಡಿಯೇ ಮಾಡುವುದು; ಆದರೆ ರಾಷ್ಟ್ರ, ಧರ್ಮ ಹಾಗೂ ಹಿಂದುತ್ವ ಈ ದೃಷ್ಟಿಯಿಂದ ಕೇವಲ ‘ಚಿಂತನೆ’ಗಿಂತ ಕಠೋರ ಆತ್ಮ ಪರೀಕ್ಷಣೆ ಮಾಡಿ ಭವಿಷ್ಯದಲ್ಲಿ ಅಂತಹ ತಪ್ಪುಗಳನ್ನು ಸುಧಾರಿಸಲು ತತ್ಪರತೆಯಿಂದ ನಿವಾರಣೋಪಾಯಗಳನ್ನು ಹುಡುಕುವುದು ಆವಶ್ಯಕವಾಗಿದೆ. ಗ್ಯಾಸ್, ರಸ್ತೆ, ನೀರು, ಭಾರತದ ಆರ್ಥಿಕ ಸ್ಥಿತಿ ಸುಧಾರಣೆ, ಶ್ರೀರಾಮ ಮಂದಿರ ಇತ್ಯಾದಿಗಳನ್ನು ಪದೇ ಪದೇ ಹೇಳಿದರೂ ಮಂತ್ರದಂಡ ಏಕೆ ಸ್ಪಂದಿಸಲಿಲ್ಲ ? ಎಂಬುದನ್ನು ಭಾಜಪ ಅಂತರ್ಮುಖವಾಗಿ ಚಿಂತನೆ ಮಾಡಬೇಕಾಗಿದೆ.
ಗುರಿ ಮುಟ್ಟದಿರುವುದರ ಕೆಲವು ಕಾರಣಗಳು !
ಒಟ್ಟಾರೆ ದೇಶದಲ್ಲಿ ಭಾಜಪಕ್ಕೆ ಅಪೇಕ್ಷಿತ ಸ್ಥಾನಗಳಲ್ಲಿಯೂ ವಿಜಯ ಸಿಗದಿರಲು ಕೆಲವು ಪ್ರಮುಖ ಕಾರಣಗಳು ಈ ಮುಂದಿನಂತಿವೆ. ಒಂದು ಮಹತ್ವದ ಕಾರಣವೆಂದರೆ, ಇಡೀ ಭಾರತದಾದ್ಯಂತ ಮುಸಲ್ಮಾನರು ಶಿಸ್ತುಬದ್ಧವಾಗಿ ಒಟ್ಟಾಗಿ, ವಿದೇಶದಿಂದಲೂ ಬಂದು ಮತದಾನ ಮಾಡಿದರು. ಅದರ ತುಲನೆಯಲ್ಲಿ ಹಿಂದೂಗಳು ಮಾಡಿದ ಮತದಾನದ ಪ್ರಮಾಣ ಕುಸಿಯಿತು. ದೇಶಾದ್ಯಂತ ಒಟ್ಟು ಶೇ. ೫೦ ರಿಂದ ೬೦ ರಷ್ಟು ಮತದಾನದಲ್ಲಿ ಮುಸಲ್ಮಾನರು ಶೇ. ೧೦೦ ರಷ್ಟು ಮತದಾನ ಮಾಡಿದರು. ಈ ಬಾರಿ ಸಾವಿರಾರು ಸಂಖ್ಯೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿರುವುದು, ಅನೇಕ ಜನರ ಹೆಸರಿನಲ್ಲಿ ಮೊದಲೇ ಯಾರೋ ಮತದಾನ ಮಾಡಿರುವುದು, ಕೆಲವರಿಂದ ಮತದಾನಕ್ಕಾದ ಬಹಿಷ್ಕಾರ, ಮುಂಬಯಿಯಂತಹ ಸ್ಥಳದಲ್ಲಿ ಮತದಾನಪ್ರಕ್ರಿಯೆ ನಿಧಾನವಾದ ಕಾರಣ ಅನೇಕ ಜನರು ಮತದಾನ ಮಾಡದೆ ಹೋಗಿರುವುದು, ಇಂತಹ ಅನೇಕ ಗೊಂದಲಗಳಿಂದ ಹಿಂದೂಗಳ ಮತದಾನದ ಪ್ರಮಾಣ ಕುಸಿಯಿತು ಹಾಗೂ ಅದರಿಂದ ಫಲಿತಾಂಶದ ಮೇಲೆ ನೇರ ಪರಿಣಾಮವಾಯಿತು. ಅಂತಾರಾಷ್ಟ್ರೀಯ ಸ್ತರದಲ್ಲಿ ಒಳ್ಳೆಯ ಕಾರ್ಯ, ದೇಶವನ್ನು ಆರ್ಥಿಕವಾಗಿ ಬಲಶಾಲಿಯನ್ನಾಗಿ ಮಾಡುವುದು, ಒಬ್ಬ ವ್ಯಕ್ತಿ ತನ್ನ ಸಾಮರ್ಥ್ಯದಿಂದ ಸಂಪೂರ್ಣ ಪಕ್ಷವನ್ನು ನಡೆಸುವುದು ಇವೆಲ್ಲವೂ ‘ಚೆನ್ನಾಗಿ’ ನಡೆಯುತ್ತಿದೆ ಎನ್ನುವ ಸ್ಥಿತಿಯಲ್ಲಿ ಭಾಜಪ ಉಳಿಯಿತು, ಹಾಗೂ ಹಿಂದೂ ಮತದಾರರು ಮಾತ್ರ ಅನೇಕ ಕಾರಣಗಳಿಂದ ಮತದಾನ ಮಾಡಲೇ ಇಲ್ಲ; ತದ್ವಿರುದ್ಧ ಮುಸಲ್ಮಾನರು ಬಹಿರಂಗವಾಗಿ ಅತ್ಯಂತ ಉತ್ಸುಕತೆಯಿಂದ ಮತದಾನ ಮಾಡಿದರು, ಅದರ ನೇರ ಪರಿಣಾಮ ಭಾಜಪ ವಿರೋಧಿಪಕ್ಷಗಳಿಗಾಯಿತು. ಮೋದಿ ಯವರು ನೀಡಿದ ಮನೆ, ನೀರು ಇತ್ಯಾದಿ ಸೌಲಭ್ಯಗಳ ಲಾಭವನ್ನು ಮುಸಲ್ಮಾನರು ದೊಡ್ಡ ಸಂಖ್ಯೆಯಲ್ಲಿ ಪಡೆದುಕೊಂಡರು; ಆದರೆ ಮತದಾನ ಮಾತ್ರ ಸಮಾಜವಾದಿ ಅಥವಾ ಇತರ ಪಕ್ಷಗಳಿಗೆ ನೀಡಿದರು, ಎಂಬುದು ಉತ್ತರಪ್ರದೇಶ ಸಹಿತ ಅನೇಕ ಸ್ಥಳಗಳಲ್ಲಿ ಅರಿವಾಯಿತು. ಮೋದಿಯವರು ಹಗಲಿರುಳು ೧೮ ಗಂಟೆ ಶ್ರಮಿಸಿದರು; ಆದರೆ ಅವರ ಇನ್ನಿತರ ನಾಯಕರು ಅದರ ಅರ್ಧದಷ್ಟಾದರೂ ಮಾಡಿದರೆ ? ಎಂಬುದನ್ನು ವಿಚಾರ ಮಾಡ ಬೇಕಾಗಿದೆ. ಚುನಾವಣೆಯ ಕೊನೆಯ ಹಂತದಲ್ಲಿ ರಾಜ್ಯಗಳಲ್ಲಿ ‘ಇಂಡಿ ಮುಂದಾಳತ್ವ’ದ ಸ್ಥಳೀಯ ಪಕ್ಷಗಳ ಸಹಿತ ಕಾಂಗ್ರೆಸ್ ಪ್ರಚಾರವನ್ನು ಹೆಚ್ಚಿಸಿತು, ಆಗ ಭಾಜಪವೂ ವೈಚಾರಿಕ ಪ್ರತಿವಾದ ಮಾಡಿ ಅವರ ಕುಟಿಲ ಸಾಮ್ಯವಾದಿ ಉದ್ದೇಶದ ‘ಮುಖವಾಡವನ್ನು’ ಕಳಚಿತು ನಿಜ; ಆದರೆ ಅದಕ್ಕೂ ಮೊದಲು ‘ಅವರಿಂದ ಇಂತಹ ಕುಟಿಲ ಪ್ರಚಾರ ಆಗದಂತೆ ಭಾಜಪವು ಕಮಲಕ್ಕೆ ಹೆಚ್ಚು ಪೋಷಣೆ ನೀಡಬೇಕಿತ್ತು’, ಎಂದು ಈಗ ಅನಿಸುತ್ತದೆ. ಭಾಜಪದ ಭರವಸೆಯುಕ್ತ ಮತದಾರರು ಮುಖ್ಯವಾಗಿ ನಗರದವರಾಗಿದ್ದು ಅವರು ರಜೆಯ ಸಮಯವಾಗಿದ್ದ ಕಾರಣ ಅನೇಕ ಜನರು ಊರಿಗೆ ಹೋಗಿರುವುದೂ ಮತದಾನದ ಮೇಲೆ ಪರಿಣಾಮವಾಯಿತು. ಹೆಚ್ಚುತ್ತಿರುವ ತಾಪಮಾನದಲ್ಲಿನ ಈ ಚುನಾವಣೆಯು ಈಗ ಭಾಜಪದ ತಲೆಯ ಒಳಗಿನ ತಾಪಮಾನವನ್ನೂ ಹೆಚ್ಚಿಸಿದೆ.
‘ಈ ಚುನಾವಣೆಯ ಮೊದಲು ಶ್ರೀರಾಮಮಂದಿರ ನಿರ್ಮಾಣ ವಾಯಿತು. ಅದು ಶ್ರದ್ಧೆಯ ವಿಷಯವಾಗಿತ್ತು; ಆದರೆ ಅದಕ್ಕಿಂತಲೂ ಹೆಚ್ಚು ಯಾವುದಾದರೂ ದೊಡ್ಡ ‘ಆಘಾತ’ವನ್ನು ನೀಡುತ್ತಿದ್ದರೆ, ಅದರಿಂದ ಭಾಜಪಕ್ಕೆ ನಿಶ್ಚಿತವಾಗಿ ಲಾಭವಾಗುತ್ತಿತ್ತು ಹಾಗೂ ಅದು ನಿಶ್ಚಿಂತೆಯಾಗುತ್ತಿತ್ತು’, ಎಂದು ಈಗ ಹೇಳಬೇಕಾಗುತ್ತದೆ. ಸಿ.ಎ.ಎ. (ಪೌರತ್ವ ತಿದ್ದುಪಡಿ ಕಾನೂನು), ಎನ್.ಆರ್.ಸಿ. (ರಾಷ್ಟ್ರೀಯ ಪೌರತ್ವ ನೋಂದಣಿ ಕಾನೂನು), ಜನಸಂಖ್ಯಾ ನಿಯಂತ್ರಣ ಕಾನೂನು, ಸಮಾನ ನಾಗರಿಕ ಕಾನೂನು, ಲವ್ ಜಿಹಾದ್ ವಿರೋಧಿ ವ್ಯಾಪಕ ಕೇಂದ್ರ ಸ್ತರದ ಕಾನೂನು ಇತ್ಯಾದಿ ಮಾಡುವುದು ಹಾಗೂ ಪ್ರಾರ್ಥನಾಸ್ಥಳ ಕಾನೂನು, ವಕ್ಫ್ ಬೋರ್ಡ್ ಕಾನೂನು ರದ್ದುಪಡಿಸುವುದು ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಸಮಸ್ಯೆ, ಇವೆಲ್ಲವೂ ನೆನೆಗುದಿಯಲ್ಲಿವೆ. ಈ ವಿಷಯಗಳು ಚರ್ಚೆಯಲ್ಲಿದ್ದವು; ಆದರೆ ಇದರಲ್ಲಿನ ಒಂದೆರಡನ್ನಾದರೂ ಕಾರ್ಯರೂಪಕ್ಕೆ ತರುತ್ತಿದ್ದರೆ, ಇಂದಿನ ಒತ್ತಡ ಸ್ವಲ್ಪಮಟ್ಟಿಗಾದರೂ ಕಡಿಮೆಯಾಗುತ್ತಿತ್ತು.
ಕಾಂಗ್ರೆಸ್ಸಿಗೆ ಲಾಭ !
ಕಾಂಗ್ರೆಸ್ ಕೇವಲ ೩೨೭ ರಷ್ಟೇ ಸ್ಥಾನಗಳಲ್ಲಿ ಚುನಾವಣೆಯ ಕಣಕ್ಕಿಳಿದಿತ್ತು, ಅದರ ತುಲನೆಯಲ್ಲಿ ರಣರಂಗದಲ್ಲಿ ಮುಂದೆ ಕಾಣಿಸಿತು. ಅನೇಕ ಸ್ಥಳಗಳಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ನಿಲ್ಲಿಸದೆ ಸ್ಥಳೀಯ ಅಭ್ಯರ್ಥಿಗಳ ಮತಗಳ ವಿಭಜನೆಯನ್ನು ತಪ್ಪಿಸಿರುವುದರಿಂದ ಭಾಜಪಕ್ಕೆ ಹಾನಿಯನ್ನುಂಟು ಮಾಡುವ ಅದರ ಉದ್ದೇಶ ಸಫಲವಾಯಿತು. ಉತ್ತರಪ್ರದೇಶ ರಾಜ್ಯದಲ್ಲಿ ಸಮಾಜವಾದಿ ಪಕ್ಷದ ಜೊತೆಗೆ ಮಾಡಿದ ಮೈತ್ರಿ ಅಥವಾ ಇತರ ರಾಜ್ಯದಲ್ಲಿನ ಮೈತ್ರಿಯ ಲಾಭ ಕಾಂಗ್ರೆಸ್ಸಿಗೆ ಸಿಕ್ಕಿತು. ‘ಸರಕಾರ ಸ್ಥಾಪನೆಯಾದ ತಕ್ಷಣ ನಾವು ‘ಖಟಾಖಟ್’ ೮ ಸಾವಿರದ ೫೦೦ ರೂಪಾಯಿಗಳನ್ನು ಬಡ ಮಹಿಳೆಯರ ಖಾತೆಗೆ ಹಾಕುವೆವು’, ಎಂದು ರಾಹುಲ ಗಾಂಧಿ ಆಶ್ವಾಸನೆ ನೀಡಿದ್ದರು.
ಮುಂಬರುವ ಕಾಲದ ಸವಾಲುಗಳು !
ಎಷ್ಟೇ ನೀಡಿದರೂ, ಭಾಜಪವಿರೋಧಿ ಮತದಾನ ಮಾಡುವ ಮುಸಲ್ಮಾನರ ಮಾನಸಿಕತೆ ಈಗ ಭಾಜಪಕ್ಕೆ ಚೆನ್ನಾಗಿ ಅರಿವಾಗಿರಬಹುದು. ಕಳೆದ ೧೦ ವರ್ಷಗಳಲ್ಲಿ ಹಿಂದೂ ಹಿತಕಾರಿ ಕಾನೂನುಗಳಿಗೆ ಕೈ ಹಾಕುತ್ತಿದ್ದರೆ, ಮಾರ್ಗ ಸುಲಭವಾಗುತ್ತಿತ್ತು. ಇನ್ನೂ ಕಾಲ ಮಿಂಚಿಲ್ಲ. ಕಳೆದ ೧೦ ವರ್ಷಗಳಲ್ಲಿ ಭಾಜಪ ಹೇಗೆ ಬಾಂಬ್ ಸ್ಫೋಟದ ಭಯವನ್ನು ದೂರ ಮಾಡಿತೋ, ಈಗ ಗಲಭೆಗಳ ಭಯವನ್ನೂ ದೂರ ಮಾಡಬೇಕು. ಕರ್ನಾಟಕ, ಕೇರಳ, ಬಂಗಾಲ, ತಮಿಳುನಾಡು, ತೆಲಂಗಾಣ ಮುಂತಾದ ರಾಜ್ಯಗಳಲ್ಲಿ ಇಂದು ಹಿಂದೂಗಳ ಮೇಲೆ ಅತ್ಯಾಚಾರವಾಗುತ್ತಿದೆ ಹಾಗೂ ಹಿಂದೂಗಳ ಮಂದಿರಗಳನ್ನು ಒಡೆಯುವ ಮಾತು ಕೇಳಿ ಬರುತ್ತಿದೆಯೋ, ಅದನ್ನು ತಡೆಗಟ್ಟುವುದು; ಗೋಹತ್ಯೆಯನ್ನು ಸಂಪೂರ್ಣ ನಿಲ್ಲಿಸುವುದು, ಭವಿಷ್ಯದಲ್ಲಿ ಉಲ್ಲೇಖಿಸಿದ ಎಲ್ಲ ರಾಷ್ಟ್ರಹಿತಕಾರಿ ಕಾನೂನು ಗಳನ್ನು ಮಾಡಿ ಅವುಗಳನ್ನು ಅನುಷ್ಠಾನ ಮಾಡುವುದು, ‘ಧರ್ಮ ನಿರಪೇಕ್ಷತೆ’ ಮತ್ತು ‘ಸಮಾಜವಾದ’ ಈ ಶಬ್ದಗಳನ್ನು ಸಂವಿಧಾನ ದಿಂದ ತೆಗೆಯುವುದು ಮತ್ತು ಕೊನೆಯದಾಗಿ ಹಿಂದೂ ರಾಷ್ಟ್ರವನ್ನು ಘೋಷಣೆ ಮಾಡುವುದು, ಇಷ್ಟು ಮಾಡಿದರೆ ಮುಂದಿನ ಸಲ ೪೦೦ ಪಾರ್ ಅಲ್ಲ ೪೫೦ ನ್ನೂ ಪಾರ್ ಮಾಡಬಹುದು, ಈಗ ಮುಂದಿನ ೫ ವರ್ಷಗಳಲ್ಲಿ ಎಲ್ಲ ಬಾಕಿ ಇರುವ ರಾಷ್ಟ್ರಹಿತಕಾರಿ ವಿಷಯಗಳು ವೇಗವಾಗಿ ಪೂರ್ಣಗೊಳ್ಳುವವು ಎಂಬುದೇ ರಾಷ್ಟ್ರಪ್ರೇಮಿ ಜನರ ಅಪೇಕ್ಷೆಯಾಗಿದೆ !