FIR On Arundhati Roy: ವಿವಾದಿತ ಲೇಖಕಿ ಅರುಂಧತಿ ರಾಯ್ ವಿರುದ್ಧ ದೂರು ದಾಖಲು ಸಾಧ್ಯ !

  • 14 ವರ್ಷಗಳ ಹಿಂದೆ ಪ್ರಚೋದನಕಾರಿ ಭಾಷಣ ಮಾಡಿದ ಆರೋಪ 

  • ಪ್ರತ್ಯೇಕವಾದಿಗಳ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದರು

ವಿವಾದಿತ ಲೇಖಕಿ ಅರುಂಧತಿ ರಾಯ್

ನವದೆಹಲಿ – 14 ವರ್ಷಗಳ ಹಿಂದೆ ಪ್ರತ್ಯೇಕವಾದಿಗಳ ಸಭೆಯಲ್ಲಿ ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಲ್ಲ ಎಂದು ಪ್ರಚೋದನಕಾರಿ ಭಾಷಣ ಮಾಡಿದ್ದ ವಿವಾದಿತ ಲೇಖಕಿ ಅರುಂಧತಿ ರಾಯ್ ವಿರುದ್ಧ ದೂರು ದಾಖಲಿಸಲು ದೆಹಲಿ ರಾಜ್ಯಪಾಲ ವಿಕೆ ಸಕ್ಸೆನಾ ಅವರು  ಒಪ್ಪಿಗೆ ನೀಡಿದ್ದಾರೆ. ರಾಯ್ ಜೊತೆ ಕಾಶ್ಮೀರ ಕೇಂದ್ರೀಯ ವಿದ್ಯಾಪೀಠದ ಅಂತರಾಷ್ಟ್ರೀಯ ಕಾನೂನಿನ ಮಾಜಿ ಪ್ರಾಧ್ಯಾಪಕ ಡಾಕ್ಟರ್ ಶೇಕ್ ಶೌಕತ್ ಹುಸೇನ್ ಅವರ ವಿರುದ್ಧವೂ ಕೂಡ ದೂರು ದಾಖಲಾಗುವುದು.  ದೆಹಲಿಯ ಕೋಪರ್ನಿಕಸ್ ರೋಡ್ ನಲ್ಲಿನ ಎಲ್‌ಟಿಜಿ ಆಡಿಟೋರಿಯಂ ನಲ್ಲಿ ಅಕ್ಟೋಬರ್ 21 2010 ರಂದು ‘ಅಜಾದಿ ದ ಓನ್ಲಿ ವೆ’ (ಸ್ವಾತಂತ್ರ್ಯಕ್ಕಾಗಿ ಒಂದೇ ಮಾರ್ಗ) ಹೆಸರಿನ ಪರಿಷತ್ತು ಆಯೋಜಿಸಲಾಗಿತ್ತು ಆಗ ಅರುಂಧತಿ ರಾಯ್ ಮತ್ತು ಪ್ರಾಧ್ಯಾಪಕ ಶೌಕತ್ ಹುಸೇನ್ ಇವರು ಪ್ರಚೋದನಕಾರಿ ಭಾಷಣ ಮಾಡಿದ್ದರು. ಕಾಶ್ಮೀರದಲ್ಲಿ ಅಶಾಂತಿಯು ಮುಗಿಲು ಮುಟ್ಟಿದ್ದ ಸಮಯದಲ್ಲಿ ಈ ಪರಿಷತ್ತು ನಡೆದಿತ್ತು. ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು ಪ್ರತಿಭಟನೆ ನಡೆಸುತ್ತಿರುವಾಗ ಪೊಲೀಸರು ಅಶ್ರು ವಾಯು ಸಿಡಿಸಿದರು ಇದರಿಂದ ತುಫೆಲ್ ಅಹಮದ್ ಮಟ್ಟು ಎಂಬ 17 ವರ್ಷದ ಹುಡುಗನು ಸಾವನ್ನಪ್ಪಿದ್ದನು. ಇದರಿಂದ ಆಗ ಕಾಶ್ಮೀರ ಕಣಿವೆಯಲ್ಲಿ ತೀವ್ರ ಪ್ರತಿಭಟನೆ ನಡೆದಿತ್ತು.

ಸಾಮಾಜಿಕ ಕಾರ್ಯಕರ್ತ ಸುಶೀಲ್ ಪಂಡಿತ್  2010ರಲ್ಲಿ ದೂರು ದಾಖಲಿಸಿದ್ದರು!

ಸಮಾಜಿಕ ಕಾರ್ಯಕರ್ತ ಶ್ರೀ ಸುಶೀಲ್ ಪಂಡಿತ್ ಅವರು 27 ನವೆಂಬರ್ 2010ರಂದು ರಾಯ್ ಮತ್ತು ಹುಸೇನ್ ಅವರ ವಿರುದ್ಧ ದೂರು ದಾಖಲಿಸಿದ್ದರು, ಬಳಿಕ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನೀಡಿದ ಆದೇಶದ ನಂತರ, ದೆಹಲಿ ಪೊಲೀಸರು ರಾಯ್ ಮತ್ತು ಹುಸೇನ್ ವಿರುದ್ಧ ಎಫ್ಐಆರ್ ದಾಖಲಿಸಿದರು. ಈ ಪರಿಷತ್ತಿನಲ್ಲಿ ಅರುಂಧತಿ  ರಾಯ್ ಜೋಈತೆಗೆ ಇತರ ಅನೇಕರು ಪ್ರಚೋದನಕಾರಿ ಭಾಷಣ ಮಾಡಿ ಸಾರ್ವಜನಿಕ ಶಾಂತಿ ಹಾಗೂ ಭದ್ರತೆಗೆ ಅಪಾಯವನ್ನುಂಟು ಮಾಡಿದ್ದರು ಮತ್ತು ‘ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಿ’ ಎಂಬ ಪ್ರತ್ಯೇಕವಾದಿಗಳ ವಿಚಾರಸರಣಿಯ ಪ್ರಸಾರ ಮಾಡಲಾಯಿತು ಎಂದು ಶ್ರೀ ಸುಶೀಲ್ ಪಂಡಿತ್ ಅವರು ದೂರಿನಲ್ಲಿ ಹೇಳಿದ್ದರು. ಅಲ್ಲದೇ ಪರಿಷತ್ತಿನ ಆಡಿಯೋ ಅನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ಈ ಆಧಾರದಲ್ಲಿ ನ್ಯಾಯಾಲಯವು ದೆಹಲಿ ಪೋಲಿಸರಿಗೆ ಅರುಂಧತಿ ರಾಯ್ ಮತ್ತು ಶೌಕತ್ ಹುಸೇನ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಆದೇಶ ನೀಡಿತು.

ಸಂಪಾದಕೀಯ ನಿಲುವು

  • ಬರೀ ದೂರು ದಾಖಲಿಸಲು 14 ವರ್ಷ ತೆಗೆದುಕೊಳ್ಳುವ ಪೊಲೀಸರು ಆರೋಪಿಗಳಿಗೆ ಶಿಕ್ಷೆ ನೀಡಲು ಇನ್ನೆಷ್ಟು ವರ್ಷ ತೆಗೆದುಕೊಳ್ಳಬಹುದು ಇದರ ವಿಚಾರ ಮಾಡದಿರುವುದೇ ಲೇಸು.  ಇದಕ್ಕೆ ಕಾರಣರಾದ ಪೊಲೀಸರ ವಿರುದ್ಧ ಕೂಡ ಕ್ರಮ ಕೈಗೊಳ್ಳಬೇಕು! 
  • ಅಮಾಯಕ ಹಿಂದುತ್ವವಾದಿಗಳ ವಿರುದ್ಧ ಖುದ್ದಾಗಿ ಅಪರಾಧ ದಾಖಲಿಸಿಕೊಳ್ಳುವ ಪೊಲೀಸರು ದೇಶದ್ರೋಹಿ ಹೇಳಿಕೆ ನೀಡುವವರ ವಿರುದ್ಧ ಒಂದು ಸಣ್ಣ ದೂರನ್ನು ಕೂಡ  ದಾಖಲಿಸಿಕೊಳ್ಳುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ!