Madhya Pradesh NCPCR : ಮದರಸಾಗಳಲ್ಲಿ ಕಲಿಯುವ ಹಿಂದೂ ಹುಡುಗರನ್ನು ಸಾಮಾನ್ಯ ಶಾಲೆಗೆ ಕಳುಹಿಸಿ !

  • ರಾಷ್ಟ್ರೀಯ ಬಾಲ ರಕ್ಷಣಾ ಪ್ರಾಧಿಕಾರ ಆಯೋಗದಿಂದ ಮಧ್ಯಪ್ರದೇಶ ಸರಕಾರಕ್ಕೆ ಕರೆ !

  • ೯ ಸಾವಿರಗಿಂತಲೂ ಹೆಚ್ಚು ಹಿಂದೂ ಹುಡುಗರಿಂದ ಮದರಸಾಗಳಲ್ಲಿ ಕಲಿಕೆ !

ಭೋಪಾಲ್ (ಮಧ್ಯಪ್ರದೇಶ) – ರಾಷ್ಟ್ರೀಯ ಬಾಲ ರಕ್ಷಣಾ ಪ್ರಾಧಿಕಾರದ ಮುಖ್ಯಸ್ಥ ಪ್ರಿಯಾಂಕ ಕಾನೂನಗೋ ಅವರು ಮಧ್ಯಪ್ರದೇಶ ಸರಕಾರಕ್ಕೆ ಮದರಸಾಗಳಲ್ಲಿ ಕಲಿಯುವ ಹಿಂದೂ ಹುಡುಗರನ್ನು ಸಾಮಾನ್ಯ ಶಾಲೆಗಳಿಗೆ ಕಳುಹಿಸಲು ಕರೆ ನೀಡಿದ್ದಾರೆ. ಅವರು ಇಲ್ಲಿ ಆಯೋಜಿಸಿದ್ದ ಒಂದು ಸಭೆಯಲ್ಲಿ ಮಾತನಾಡುತ್ತಿದ್ದರು. ಪ್ರಿಯಾಂಕ ಕಾನೂನಗೋ ಮಾತನಾಡಿ, ಮಧ್ಯಪ್ರದೇಶದಲ್ಲಿನ ೧ ಸಾವಿರದ ೭೫೫ ನೋಂದಣಿ ಆಗಿರುವ ಮದರಸಾಗಳಲ್ಲಿ ೯ ಸಾವಿರದ ೪೧೭ ಹಿಂದೂ ಹುಡುಗರು ಕಲಿಯುತ್ತಿದ್ದಾರೆ ಮತ್ತು ಈ ಸಂಸ್ಥೆಯಲ್ಲಿ ಶಿಕ್ಷಣ ಅಧಿಕಾರ ಕಾನೂನಿನ ಅಂತರ್ಗತ ಅವಶ್ಯಕತೆ ಇರುವ ಮೂಲಭೂತ ವಿಕಾಸದ ಕೊರತೆ ಕೂಡ ಇದೆ. ನೋಂದಣಿ ಇಲ್ಲದಿರುವ ಮದರಸಾಗಳಲ್ಲಿ ಕಲಿಯುವ ಮುಸಲ್ಮಾನ ಹುಡುಗರನ್ನು ಕೂಡ ಸಾಮಾನ್ಯ ಶಾಲೆಗಳಿಗೆ ಕಳುಹಿಸಬೇಕೆಂದು ನಾನು ಮಧ್ಯಪ್ರದೇಶ ಸರಕಾರಕ್ಕೆ ವಿನಂತಿಸುತ್ತೇನೆ. ಮದರಸಾಗಳಲ್ಲಿ ಕಲಿಯುವ ಹಿಂದೂ ಹುಡುಗರನ್ನು ಅಲ್ಲಿಂದ ಹೊರಗೆ ತೆಗೆಯಿರಿ ಎಂದು ಹೇಳಿದರು.

ಮದರಸಾ ಶಿಕ್ಷಕರ ಬಳಿ ಬಿ.ಎಡ್ ಪದವಿ ಕೂಡ ಇಲ್ಲ

ಈ ಸಭೆಯ ಸಮಯದಲ್ಲಿ ಕಾನೂನುಗೋ ಮಾತನಾಡಿ, ಯಾವ ಕಾನೂನಿನ ಅಡಿಯಲ್ಲಿ ಮಧ್ಯಪ್ರದೇಶ ಮದರಸಾ ಬೋರ್ಡ್ ಅಸ್ತಿತ್ವದಲ್ಲಿದೆಯೋ, ಆ ಕಾನೂನಿನಿಂದ ಮದರಸಾದ ಬಗ್ಗೆ ವ್ಯಾಖ್ಯಾನಿಸಲಾಗಿದೆ ಮತ್ತು ಅಲ್ಲಿ ಇಸ್ಲಾಮಿಕ್ ಧಾರ್ಮಿಕ ಶಿಕ್ಷಣ ನೀಡಬೇಕೆಂದು ಸ್ಪಷ್ಟವಾಗಿ ಹೇಳಲಾಗಿದೆ. ಶಿಕ್ಷಣ ಅಧಿಕಾರ ಕಾನೂನಿನ ಕಲಂ ೧ ಮದರಸಾಗಳನ್ನು ಈ ಕಾನೂನಿನಿಂದ ದೂರವಿಡುತ್ತದೆ. ಕಾನೂನುಗೋ ಅವರು ಮುಂದುವರೆಸಿ, ಆಯೋಗದ ಬಳಿ ಲಭ್ಯವಿರುವ ಮಾಹಿತಿಯ ಪ್ರಕಾರ ಈ ಮದರಸಾಗಳ ಶಿಕ್ಷಕರಿಗೆ ಬಿಎಡ್ ಪದವಿ ಕೂಡ ಇಲ್ಲ ಮತ್ತು ಶಿಕ್ಷಕ ಅರ್ಹತೆಯ ಪರೀಕ್ಷೆಗಳನ್ನು ಕೂಡ ಅವರು ನೀಡಿಲ್ಲ. ಈ ಮದರಸಾಗಳಲ್ಲಿ ಶಿಕ್ಷಣ ಅಧಿಕಾರ ಕಾನೂನಿನ ಪ್ರಕಾರ ಮೂಲಭೂತ ಸೌಲಭ್ಯಗಳೇ ಇಲ್ಲ.

ನೋಂದಣಿ ಇಲ್ಲದ ಮದರಸಾಗಳಲ್ಲಿನ ಮುಸಲ್ಮಾನ ಹುಡುಗರನ್ನು ಸಾಮಾನ್ಯ ಶಾಲೆಗೆ ಕಳುಹಿಸುವಂತೆ ಆಗ್ರಹ

ಪ್ರಿಯಾಂಕ ಕಾನೂನುಗೋ ಅವರು, ಮದರಸಾಗಳಲ್ಲಿನ ಸುರಕ್ಷಾ ವ್ಯವಸ್ಥೆ ಕೂಡ ಸರಿಯಿಲ್ಲ. ನಾನು ಮಧ್ಯಪ್ರದೇಶದ ಸರಕಾರಕ್ಕೆ ವಿನಂತಿಸುತ್ತೇನೆ ಏನೆಂದರೆ, ಇದರಲ್ಲಿ ತಕ್ಷಣವೇ ಸುಧಾರಣೆ ಮಾಡಬೇಕು. ಶಿಕ್ಷಣ ಅಧಿಕಾರ ಕಾನೂನಿನ ಅಂತರ್ಗತ ಶಾಲೆ ಸ್ಥಾಪನೆ ಮಾಡುವುದು ಸರಕಾರದ ಕಾರ್ಯವಾಗಿದ್ದು, ಮದರಸಾ ಬೋರ್ಡುಗಳಿಗೆ ನಿಧಿ ನೀಡುವುದೆಂದರೆ ಬಡ ಮಕ್ಕಳನ್ನು ಅವರ ಶಿಕ್ಷಣ ಅಧಿಕಾರದಿಂದ ವಂಚಿತಗೊಳಿಸುವುದಾಗಿದೆ. ನೋಂದಣಿ ಇಲ್ಲದಿರುವ ಮದರಸಾಗಳಲ್ಲಿ ಕಲಿಯುವ ಮುಸಲ್ಮಾನ ಹುಡುಗರನ್ನು ಕೂಡ ತಕ್ಷಣವೇ ಸಾಮಾನ್ಯ ಶಾಲೆಗಳಿಗೆ ಕಳುಹಿಸಬೇಕೆಂದು ಅವರು ಆಗ್ರಹಿಸಿದರು.

ಸಂಪಾದಕೀಯ ನಿಲುವು

  • ಹಿಂದೂ ಬಹುಸಂಖ್ಯಾತ ದೇಶದಲ್ಲಿ ಹಿಂದೂ ಪೋಷಕರು ತಮ್ಮ ಮಕ್ಕಳನ್ನು ಶಿಕ್ಷಣಕ್ಕಾಗಿ ಮದರಸಾಗಳಿಗೆ ಕಳಿಸುವುದು ಹಿಂದುಗಳಿಗೆ ನಾಚಿಗೇಡಿನ ವಿಷಯ !
  • ದೇಶದ ಇತರ ರಾಜ್ಯಗಳಲ್ಲಿ ಹೀಗೆ ನಡೆಯುವುದೇ ? ಅಲ್ಲಿನ ಸರಕಾರ ಹಾಗೂ ಹಿಂದೂ ಸಂಘಟನೆಗಳು ಇಂತಹ ಹುಡುಗರನ್ನು ಹುಡುಕಿ ಅವರನ್ನು ಸಾಮಾನ್ಯ ಶಾಲೆಗೆ ಕಳುಹಿಸುವ ಪ್ರಯತ್ನ ಮಾಡಬೇಕು !