Temple converted to Mosque : ಪಾಕಿಸ್ತಾನ : ಮಸೀದಿಯಾಗಿ ಪರಿವರ್ತನೆಯಾದ ಪುರಾತನ ಹಿಂದೂ ದೇವಾಲಯ !

ಇಸ್ಲಾಮಾಬಾದ್ – ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಗೋಧಾದಲ್ಲಿ ಹಿಂದೂ ದೇವಾಲಯವನ್ನು ಮಸೀದಿಯಾಗಿ ಪರಿವರ್ತಿಸಲಾಗಿದೆ. ಮಾಖನರಾಮ್ ಜಟ್ ಪಾಲ್ ಎಂಬ ಪಾಕಿಸ್ತಾನಿ ಬ್ಲಾಗರ್ (ವಿವಿಧ ವಿಷಯಗಳನ್ನು ಸಾರ್ವಜನಿಕರಿಗೆ ವಿಡಿಯೋ ಮೂಲಕ ತಿಳಿಸುವ ವ್ಯಕ್ತಿ) ಈ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನವನ್ನು ಮಸೀದಿಯಾಗಿ ಪರಿವರ್ತಿಸಿರುವ ಸತ್ಯ ಸಂಗತಿಯನ್ನು’ ವಿಡಿಯೋ’ ಮೂಲಕ ಬೆಳಕಿಗೆ ತಂದಿದ್ದಾರೆ. ಮಸೀದಿಯಾಗಿ ಪರಿವರ್ತನೆಗೊಂಡಿರುವ ಈ ದೇವಾಲಯದ ಗೋಡೆಗಳ ಮೇಲೆ ಈಗಲೂ ಹಿಂದೂ ಧರ್ಮದ ಮಂತ್ರಗಳು ಇರುವುದು ಸ್ಪಷ್ಟವಾಗಿ ಕಾಣಿಸುತ್ತಿವೆ. ಈ ಮೊದಲು ಈ ದೇವಾಲಯಕ್ಕೆ ‘ಸನಾತನ ಧರ್ಮ ಮಂದಿರ’ ಎಂದು ಹೆಸರಿಡಲಾಗಿತ್ತು ಎಂದು ಮಾಖನರಾಮ್ ಹೇಳಿದ್ದಾರೆ.