ಜೂನ್ ೧೪ ರಿಂದ ಚಳುವಳಿ ಆರಂಭ !
ಮುಂಬಯಿ – ಹಿಂದೂಗಳ ತೀರ್ಥಕ್ಷೇತ್ರಗಳು ಮತ್ತು ಧಾರ್ಮಿಕ ಸ್ಥಳಗಳಲ್ಲಿ ಕಲಬೆರಿಕೆ ತುಪ್ಪ, ಹಸುವಿನ ಕೊಬ್ಬು ಸಹಿತ ಇತರ ತ್ಯಾಜ್ಯ ಪದಾರ್ಥಗಳನ್ನು ಬಳಸಿ ಮಾಡಿರುವ ಪ್ರಸಾದ ನೀಡಬಾರದು, ಪ್ರಸಾದದ ಪಾವಿತ್ರ್ಯ ಉಳಿಯಬೇಕು ಇದಕ್ಕಾಗಿ ಹಿಂದುತ್ವನಿಷ್ಠ ಸಂಘಟನೆಗಳಿಂದ ‘ಓಂ ಪ್ರಮಾಣ ಪತ್ರ’ ನೀಡುವ ಮಹತ್ವದ ನಿರ್ಣಯ ತೆಗೆದುಕೊಂಡಿದೆ. ಸ್ವಾತಂತ್ರ್ಯವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕದ ಕಾರ್ಯಾಧ್ಯಕ್ಷ ಶ್ರೀ. ರಣಜಿತ ಸಾವರ್ಕರ್, ಅಖಿಲ ಭಾರತೀಯ ಸಂತ ಸಮಿತಿ ಧರ್ಮ ಸಮಾಜದ ಮಹಾರಾಷ್ಟ್ರ ಪ್ರದೇಶದ ಆಚಾರ್ಯ ಪೀಠಾಧೀಶ್ವರ ಡಾ. ಅನಿಕೇತಶಾಸ್ತ್ರೀಯ ಮಹಾರಾಜ್ ಇವರ ಮುಂದಾಳತ್ವದಲ್ಲಿ ಈ ಚಳುವಳಿ ಆರಂಭವಾಗುವುದು. ವಿವಿಧ ಹಿಂದುತ್ವನಿಷ್ಠ ಸಂಘಟನೆಗಳಿಂದ ಇದಕ್ಕೆ ಬೆಂಬಲ ನೀಡಲಾಗಿದೆ.
Vendors distributing “Prasad” in Temple’s vicinity, to be given “Om Certification” from 14th June.
➡️To curb Prasad distribution made from substandard ghee, cow fat and other prohibited food items, @RanjitSavarkar of ‘Swatantra Veer Sawarkar Rashtriya Smarak’ and @swamianiketji… pic.twitter.com/JySck5ClL8
— Sanatan Prabhat (@SanatanPrabhat) June 12, 2024
೧. ಜೂನ್ ೧೪ ರಿಂದ ಈ ಚಳುವಳಿಗೆ ಆರಂಭವಾಗುವುದು. ‘ಓಂ ಪ್ರತಿಷ್ಠಾನ’ದ ವತಿಯಿಂದ ಈ ಪ್ರಮಾಣ ಪತ್ರ ನೀಡಲಾಗುವುದು, ಈ ಸಂಸ್ಥೆಯಲ್ಲಿ ವಿವಿಧ ಹಿಂದುತ್ವನಿಷ್ಠ ಸಂಘಟನೆಯ ಪ್ರತಿನಿಧಿಗಳು ಸಹಭಾಗಿ ಆಗುವವರು .
೨. ಸಂಪೂರ್ಣ ಮಹಾರಾಷ್ಟ್ರಧ ಶ್ರದ್ಧಾಸ್ಥಾನ ಇರುವ ಪಂಡರಪುರದಲ್ಲಿನ ಶ್ರೀ ವಿಠಲ-ರುಕ್ಮಿಣಿ ಮಂದಿರದಲ್ಲಿ ಕೆಲವು ತಿಂಗಳ ಹಿಂದೆ ಕಳಪೆ ಎಣ್ಣೆಯ ಬಳಸಿ ತಯಾರಿಸಿರುವ ಲಡ್ಡು ಪ್ರಸಾದವೆಂದು ನೀಡಿರುವ ಘಟನೆ ಕಳೆದ ವರ್ಷ ಬೆಳಕಿಗೆ ಬಂದಿದೆ. ಈ ಘಟನೆ ಗಮನಕ್ಕೆ ಬಂದ ನಂತರ ಶ್ರೀ ವಿಠಲ-ರುಕ್ಮಿಣಿ ಮಂದಿರ ಸಮಿತಿಯಿಂದ ಪ್ರಸಾದ ತಯಾರಿಸುವ ಗುತ್ತಿಗೆದಾರನ ಗುತ್ತಿಗೆಯನ್ನು ರದ್ದುಪಡಿಸಲಾಯಿತು. ಓಂ ಪ್ರಮಾಣಪತ್ರದಿಂದ ಇಂತಹ ಘಟನೆಗಳು ತಪ್ಪಿಸಬಹುದು.
೩. ಪ್ರಸಾದದಲ್ಲಿ ಕಲಬೆರಕೆ ಮತ್ತು ಧಾರ್ಮಿಕ ದೃಷ್ಟಿಯಿಂದ ಬಳಸಬಾರದಂತಹ ಸಾಮಗ್ರಿಗಳನ್ನು ಬಳಸಿಲ್ಲ, ಇದನ್ನು ಖಾತ್ರಿಪಡಿಸಿಕೊಂಡೆ ‘ಓಂ ಪ್ರಮಾಣ ಪತ್ರ’ ನೀಡಲಾಗುವುದು. ಯಾವ ಅಂಗಡಿದಾರನ ಬಳಿ ‘ಓಂ ಪ್ರಮಾಣ ಪತ್ರ’ ಇದೆ ಅವರಿಂದಲೇ ಭಕ್ತರು ಪ್ರಸಾದ ಪಡೆಯಬೇಕು, ಇದರ ಬಗ್ಗೆ ಹಿಂದುತ್ವನಿಷ್ಠ ಸಂಘಟನೆಗಳಿಂದ ಜಾಗೃತಿ ಮೂಡಿಸಲಾಗುವುದು.
ತ್ರ್ಯಂಬೇಶ್ವರದಿಂದ ‘ಓಂಪ್ರಮಾಣ ಪತ್ರ ‘ವಿತರಣೆಗೆ ಆರಂಭ
೧೨ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ನಾಶಿಕನ ತೀರ್ಥಕ್ಷೇತ್ರ ಶ್ರೀ ತ್ರ್ಯಂಬೇಶ್ವರ ದೇವಸ್ಥಾನದಿಂದ ಈ ಪ್ರಮಾಣ ಪತ್ರ ನೀಡಲು ಆರಂಭವಾಗುವುದು. ದೇಶವಿದೇಶದಿಂದ ಬರುವ ಸಾವಿರಾರು ಭಕ್ತರ ಸಂಖ್ಯೆ ಗಮನಿಸಿ ಶ್ರೀ ತ್ರ್ಯಂಬೇಶ್ವರದಿಂದ ‘ಓಂ ಪ್ರಮಾಣ’ ಪತ್ರ ನೀಡುವ ನಿರ್ಣಯವನ್ನು ಹಿಂದುತ್ವನಿಷ್ಠ ಸಂಘಟನೆಯಿಂದ ತೆಗೆದುಕೊಳ್ಳಲಾಗಿದೆ.