British Hindus Manifesto : ಹಿಂದುಗಳ ಧಾರ್ಮಿಕ ಸ್ಥಳಗಳಿಗೆ ರಕ್ಷಣೆ ಮತ್ತು ಶಾಲೆಗಳಲ್ಲಿ ಧರ್ಮಶಿಕ್ಷಣ ನೀಡಿ !

  • ಬ್ರಿಟನ್ ನಲ್ಲಿ ಸಾರ್ವರ್ತ್ರಿಕ ಚುನಾವಣೆ

  • ಬ್ರಿಟನ್‌ನಲ್ಲಿ ಹಿಂದೂಗಳಿಂದ ಬೇಡಿಕೆ ಪತ್ರ ಪ್ರಸಾರ !

ಲಂಡನ (ಬ್ರಿಟನ್) – ಬ್ರಿಟನ್‌ನಲ್ಲಿ ಬರುವ ಜುಲೈ ೩ ರಂದು ಸಾರ್ವತ್ರಿಕ ಚುನಾವಣೆ ನಡೆಯುವುದು. ಈ ಸಂದರ್ಭದಲ್ಲಿ ಅಲ್ಲಿಯ ಹಿಂದೂ ಸಂಘಟನೆಗಳು ಅವರ ಬೇಡಿಕೆ ಪತ್ರ ಪ್ರಕಟಿಸಿದೆ. ‘ದ ಹಿಂದೂ ಮ್ಯಾನಿಫೆಸ್ಟೋ ಯುಕೆ ೨೦೨೪’ ಎಂದು ಅದಕ್ಕೆ ಹೆಸರು ನೀಡಿದ್ದು ಅದರಲ್ಲಿ ಮುಖ್ಯವಾಗಿ ೭ ಬೇಡಿಕೆಗಳು ಮಾಡಲಾಗಿದೆ. ಅನೇಕ ಹಿಂದೂ ಸಂಘಟನೆಗಳು ಸೇರಿ ಈ ಬೇಡಿಕೆ ಪತ್ರ ತಯಾರಿಸಿದ್ದಾರೆ. ಇದರಲ್ಲಿ ಹಿಂದುಗಳ ಧಾರ್ಮಿಕ ಸ್ಥಳಗಳಿಗೆ ರಕ್ಷಣೆ ನೀಡುವುದು ಅದರ ಜೊತೆಗೆ ಶಾಲೆಗಳಲ್ಲಿ ಹಿಂದೂ ಧರ್ಮಶಿಕ್ಷಣ ನೀಡಲು ಪ್ರಾರಂಭ ಮಾಡುವಂತೆ ಹೇಳಿದೆ.

ಹಿಂದೂಗಳ ಇತರ ೫ ಬೇಡಿಕೆಗಳು

೧. ಹಿಂದೂ ವಿರೋಧಿ ಅಪರಾಧ ಮತ್ತು ದಾಳಿಗಳಿಗೆ ದ್ವೇಷಪೂರಿತ ಅಪರಾಧದ (‘ಹೆಟ್ ಕ್ರೈಂ’ನ) ಸ್ಥಾನ ನೀಡಬೇಕು !
೨. ಹಿಂದುಗಳಿಗೆ ಸಮಾನ ಪ್ರತಿನಿಧಿತ್ವ ಮತ್ತು ಅವಕಾಶ ನೀಡಬೇಕು.
೩. ನಿರಾಶ್ರಿತ, ಆರೋಗ್ಯದ ಕಾಳಜಿ ಮತ್ತು ಸಾಮಾಜಿಕ ಕಾಳಜಿ ವ್ಯವಸ್ಥಿತವಾಗಿ ನಿರ್ವಹಿಸಬೇಕು.
೪. ಧಾರ್ಮಿಕ ಮೌಲ್ಯಗಳಿಗೆ ಮಾನ್ಯತೆ ನೀಡಬೇಕು.
೫. ಧಾರ್ಮಿಕ ಮೌಲ್ಯಗಳಿಗೆ ಸಂರಕ್ಷಣೆ ನೀಡಬೇಕು.
ಈ ಬೇಡಿಕೆಗಳು ಅನೇಕ ಅಭ್ಯರ್ಥಿಗಳಿಂದ ಬೆಂಬಲ ನೀಡುವ ಆಶ್ವಾಸನೆ ದೊರೆತಿದೆ. ಹಿಂದೂ ಸಂಘಟನೆಗಳಿಂದ ಬೇಡಿಕೆ ಪತ್ರದಲ್ಲಿ, ಇದರಿಂದ ಬ್ರಿಟನ್‌ನಲ್ಲಿನ ಹಿಂದೂ ಜನಾಂಗದ ಒಗ್ಗಟ್ಟಿನ ಧ್ವನಿ ಬೆಳಕಿಗೆ ಬಂದಿದೆ ಎಂದು ಹೇಳಿದೆ.

ಬ್ರಿಟನ್ನಲ್ಲಿ ಹಿಂದೂ ನಾಲ್ಕನೇಯ ಎಲ್ಲಕ್ಕಿಂತ ದೊಡ್ಡ ಧರ್ಮ !

೨೦೨೧ ರ ಬ್ರಿಟನ್ನಿನ ಒಟ್ಟು ಜನಸಂಖ್ಯೆಯಲ್ಲಿ ಶೇಕಡ ೪೬.೨ ರಷ್ಟು ಕ್ರೈಸ್ತರು, ಶೇಕಡ ೬.೫ ರಷ್ಟು ಮುಸಲ್ಮಾನರು, ಶೇಕಡ ೧.೭ ರಷ್ಟು ಹಿಂದುಗಳು ಮತ್ತು ಶೇಕಡ ೦.೯ ಸಿಖ್ಖರು ಇದ್ದಾರೆ. ಶೇಕಡಾ ೩೭ ಜನರು ಯಾವುದೇ ಧರ್ಮಕ್ಕೆ ಸೇರಿಲ್ಲ. ಹಿಂದುಗಳು ಒಟ್ಟು ಜನಸಂಖ್ಯೆಯಲ್ಲಿ ೨೦ ಲಕ್ಷಕ್ಕಿಂತಲೂ ಹೆಚ್ಚಾಗಿದ್ದಾರೆ.

ಕಳೆದ ಕೆಲವು ಸಮಯದಲ್ಲಿ ಹಿಂದುಗಳ ೪ ದೇವಸ್ಥಾನಗಳ ಮೇಲೆ ದಾಳಿ !

ಈ ಬೇಡಿಕೆಯಲ್ಲಿ, ಬ್ರಿಟನ್ ನಲ್ಲಿ ಹಿಂದುಗಳ ದೇವಸ್ಥಾನದ ಮೇಲಿನ ದಾಳಿಗಳು ಹೆಚ್ಚಾಗಿವೆ. ಅದರ ರಕ್ಷಣೆ ಆವಶ್ಯಕವಾಗಿದೆ. ಸೆಪ್ಟೆಂಬರ್ ೨೦೨೨ ರಲ್ಲಿ ಲಿಸ್ಟರ ನಗರದಲ್ಲಿ ಮತಾಂಧ ಮುಸಲ್ಮಾನರು ಹಿಂದೂ ದೇವಸ್ಥಾನಗಳ ಮೇಲೆ ದಾಳಿ ನಡೆಸಿ ಅದನ್ನು ಧ್ವಂಸಗೊಳಿಸಿದ್ದಾರೆ. ದೇವಸ್ಥಾನದ ಧ್ವಜ ಕೂಡ ಸುಟ್ಟು ಹಾಕಿದ್ದಾರೆ. ಈ ವರ್ಷ ಬರ್ಮಿಂಗ ಹ್ಯಾಮ್ ನ ಸ್ಮೇಥವಿಕದಲ್ಲಿ ದೇವಸ್ಥಾನದ ಮೇಲೆ ದಾಳಿ ನಡೆಸಲಾಗಿದೆ. ಹಾಗೂ ಸ್ವಿಂಡೋನ್ ನಲ್ಲಿ ಕೂಡ ಧ್ವಂಸದ ಪ್ರಕರಣ ಬೆಳಕಿಗೆ ಬಂದಿದೆ. ಜನವರಿ ೨೦೨೪ ರಲ್ಲಿ ವೆಂಬಲೇ ಇಲ್ಲಿ ದೇವಸ್ಥಾನದಲ್ಲಿನ ಧ್ವಂಸಗೊಳಿಸಿ ಮೂರ್ತಿಗಳನ್ನು ಬಗ್ನಗೊಳಿಸಲಾಗಿದೆ.

ಮುಸಲ್ಮಾನರ ಧಾರ್ಮಿಕ ಸ್ಥಳಗಳ ರಕ್ಷಣೆಗಾಗಿ ೯೭೭ ಕೋಟಿ ರೂಪಾಯ ವ್ಯವಸ್ಥೆ !

ಹಿಂದುಗಳ ದೇವಸ್ಥಾನಗಳು ಅಸುರಕ್ಷಿತವಾಗಿರುವಾಗ ಬ್ರಿಟನ್ ನಲ್ಲಿ ಬರುವ ೪ ವರ್ಷಗಳಲ್ಲಿ ಮುಸಲ್ಮಾನರ ಧಾರ್ಮಿಕ ಸ್ಥಳಗಳ ರಕ್ಷಣೆಗಾಗಿ ೯೭೭ ಕೋಟಿ ರೂಪಾಯ ಆರ್ಥಿಕ ವ್ಯವಸ್ಥೆ ಮಾಡಲಾಗಿದೆ.

(ಬ್ರಿಟನ್ ನಲ್ಲಿ ಹಿಂದೂ ಪ್ರಧಾನಮಂತ್ರಿ ಇರುವುದು ಹಿಂದುಗಳಿಗೆ ಯಾವುದೇ ಲಾಭವಿಲ್ಲ, ಇದನ್ನು ಹಿಂದುಗಳು ತಿಳಿದುಕೊಳ್ಳಬೇಕು ! ಹಿಂದುಗಳು ಎಷ್ಟೇ ಉನ್ನತ ಸ್ಥಾನಕ್ಕೆ ತಲುಪಿದರು, ಅವರು ಹಿಂದೂ ಬಾಂಧವರು ಮತ್ತು ಹಿಂದೂ ಧರ್ಮದ ಕುರಿತು ಯಾವಾಗಲೂ ಧರ್ಮಘಾತಕ ಜಾತ್ಯತೀತರಾಗುತ್ತಾರೆ. ಇದು ಹಿಂದುಗಳಿಗೆ ಲಜ್ಜಾಸ್ಪದ ! – ಸಂಪಾದಕರು)

ಬ್ರಿಟಿಷ್ ಶಾಲೆಗಳಲ್ಲಿ ಹಿಂದುಗಳಿಗೆ ಧರ್ಮಶಿಕ್ಷಣ ನೀಡುವ ಮನವಿ ಈ ಹಿಂದೆ ತಳ್ಳಿ ಹಾಕಲಾಗಿತ್ತು !

ಬ್ರಿಟನ್ ನಲ್ಲಿ ‘ಕಮಿಷನ್ ಆನ್ ರಿಲಿಜಿಯನ್ಸ್ ಎಜುಕೇಶನ್’ ೨೦೧೩ ರಲ್ಲಿ ಶಾಲೆಗಳಲ್ಲಿ ಹಿಂದೂ ಧಾರ್ಮಿಕ ಶಿಕ್ಷಣ ನೀಡುವುದಕ್ಕಾಗಿ ಶಿಕ್ಷಕ ಮತ್ತು ಸಾಧನಗಳು ಇಲ್ಲದಿರುವ ಕಾರಣ ಹೇಳಿ ಮನವಿ ತಳ್ಳಿ ಹಾಕಲಾಗಿತ್ತು. ಬ್ರಿಟನ್‌ನಲ್ಲಿ ಶೇಕಡ ೯೩ರಷ್ಟು ಹಿಂದುಗಳ ಅಭಿಪ್ರಾಯದ ಪ್ರಕಾರ ಬ್ರಿಟಿಷ್ ಶಾಲೆಗಳಲ್ಲಿ ಅವರ ಮಕ್ಕಳಿಗೆ ಧರ್ಮದ ಕುರಿತು ಸಾಕಷ್ಟೂ ಶಿಕ್ಷಣ ದೊರೆಯುವುದಿಲ್ಲ.

ಬ್ರಿಟನ್ ನಲ್ಲಿ ಭಾರತೀಯ ಭಾಷೆ ಸಂಸ್ಕೃತ, ಹಿಂದಿ, ತಮಿಳು, ಗುಜರಾತಿ, ಪಂಜಾಬಿ, ಬಂಗಾಲಿ, ಕನ್ನಡ, ತೆಲುಗು ಮತ್ತು ಮರಾಠಿ ಇದರ ಶಿಕ್ಷಣ ಸಂಸ್ಥೆಗಳ ಕೊರತೆ ಇರುವುದರಿಂದ ಈ ಅಂಶಗಳನ್ನು ಮಂಡಿಸಲಾಗಿದೆ.

ಸಂಪಾದಕೀಯ ನಿಲುವು

  • ಭಾರತದಲ್ಲಿನ ಹಿಂದೂ ಸಂಘಟನೆಗಳು ಚುನಾವಣೆಯಲ್ಲಿ ಈ ರೀತಿಯ ಮನವಿಯನ್ನು ಎಂದು ನೀಡುವುದಿಲ್ಲ ಇಂತಹ ಮನವಿಯನ್ನು ಬ್ರಿಟನ್ ನಲ್ಲಿನ ಹಿಂದುಗಳು ನೀಡುವುದು, ಇದು ಶ್ಲಾಘನೀಯವಾಗಿದೆ.
  • ಭಾರತದಲ್ಲಿನ ಹಿಂದೂ ಸಂಘಟನೆಗಳು ಬ್ರಿಟನ್ನಲ್ಲಿನ ಹಿಂದೂ ಸಂಘಟನೆಗಳಿಂದ ಆದರ್ಶವನ್ನು ತೆಗೆದುಕೊಳ್ಳಬೇಕು ಮತ್ತು ಈ ಬೇಡಿಕೆ ಒಪ್ಪುವ ಪಕ್ಷಕ್ಕೆ ಮತ್ತು ಅಭ್ಯರ್ಥಿಗೆ ಮತ ನೀಡಬೇಕು, ಅಂದರೆ ಹಿಂದುಗಳ ಒತ್ತಡದ ಗುಂಪು ನಿರ್ಮಾಣವಾಗುವುದು !