Nomenclature War : ಭಾರತವು ಟಿಬೇಟಿನ 30 ಪ್ರದೇಶಗಳ ಹೆಸರುಗಳನ್ನು ಬದಲಾಯಿಸಿ ಹೊಸ ನಕಾಶೆಯನ್ನು ಪ್ರಸಾರ ಮಾಡಲಿದೆ

ಅರುಣಾಚಲ ಪ್ರದೇಶದ ಕೆಲವು ಪ್ರದೇಶಗಳ ಹೆಸರು ಬದಲಾವಣೆ; ಚೀನಾಕ್ಕೆ ಭಾರತದ ಪ್ರತ್ಯುತ್ತರ

ನವದೆಹಲಿ – ಭಾರತ ಟಿಬೆಟ್‌ನ 30 ಕ್ಕೂ ಹೆಚ್ಚು ಭಾಗಗಳ ಹೆಸರುಗಳನ್ನು ಬದಲಾಯಿಸಲಿದೆ. ಭಾರತೀಯ ಸೇನೆಯು ಆದಷ್ಟು ಬೇಗನೆ ಟಿಬೇಟಿನ ಈ 30 ಭಾಗಗಳ ಹೆಸರುಗಳ ಪಟ್ಟಿಯೊಂದಿಗೆ ಪ್ರತ್ಯಕ್ಷ ನಿಯಂತ್ರಣ ರೇಖೆಯ ನಕ್ಷೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಚೀನಾ ಏಪ್ರಿಲ್‌ನಲ್ಲಿ ಅರುಣಾಚಲ ಪ್ರದೇಶದ 30 ಭಾಗಗಳ ಹೆಸರುಗಳನ್ನು ಬದಲಾಯಿಸಿತ್ತು. ಈ ಮೊದಲು ಚೀನಾ 2021 ರಲ್ಲಿ 15 ಮತ್ತು 2017 ರಲ್ಲಿ 6 ಭಾಗಗಳ ಹೆಸರುಗಳನ್ನು ಬದಲಾಯಿಸಿತ್ತು. ಚೀನಾ ಸರಕಾರ ಈ ಭಾಗಗಳ ಮೇಲೆ ತನ್ನ ಅಧಿಕಾರವೆಂದು ಹೇಳುತ್ತಿದೆ. ಚೀನಾದ ಈ ಕೃತಿಗೆ ತಕ್ಕ ಪ್ರತ್ಯುತ್ತರ ನೀಡಲು ಭಾರತ ಸರಕಾರ ಈ ಕ್ರಮ ಕೈಗೊಂಡಿದೆ.

ಹೊಸ ಹೆಸರುಗಳು ಭಾರತೀಯ ಭಾಷೆಯ ಹಳೆಯ ಹೆಸರುಗಳನ್ನು ಆಧರಿಸಿವೆ !

ಟಿಬೆಟ್‌ನ ಕ್ಷೇತ್ರಗಳ ಹೆಸರುಗಳನ್ನು ಬದಲಾಯಿಸಲು ಸಂಶೋಧನೆ ನಡೆಸಲಾಗಿತ್ತು. ತದನಂತರ ಭಾರತೀಯ ಭಾಷೆಯ ಹಳೆಯ ಹೆಸರುಗಳ ಆಧಾರದಲ್ಲಿ ಈ ಸ್ಥಳಗಳಿಗೆ ಹೊಸ ಹೆಸರುಗಳನ್ನು ನೀಡಲಾಗಿದೆ. ಭಾರತೀಯ ಸೈನ್ಯದ ಮಾಹಿತಿ ಯುದ್ಧ ಇಲಾಖೆಯ ಬಳಿ ಈ ಸ್ಥಳಗಳ ಹೆಸರುಗಳನ್ನು ಬದಲಾಯಿಸುವ ಜವಾಬ್ದಾರಿ ನೀಡಲಾಗಿದೆ.

ಚೀನಾ ಅರುಣಾಚಲ ಪ್ರದೇಶವನ್ನು ಯಾವತ್ತೂ ‘ಭಾರತೀಯ ರಾಜ್ಯ’ ಎಂದು ಮಾನ್ಯತೆ ನೀಡುವುದಿಲ್ಲ. ಅರುಣಾಚಲ ಪ್ರದೇಶವನ್ನು ‘ದಕ್ಷಿಣ ಟಿಬೆಟ್‌ನ ಭಾಗ’ ಎಂದು ಬಣ್ಣಿಸಿದೆ. ಭಾರತವು ಟಿಬೇಟಿನ ಪ್ರದೇಶವನ್ನು ವಶಕ್ಕೆ ಪಡೆದು ಅದನ್ನು ‘ಅರುಣಾಚಲ ಪ್ರದೇಶ’ವನ್ನಾಗಿ ಮಾಡಿದೆಯೆಂದು ಚೀನಾ ಆರೋಪಿಸಿದೆ.