Pakistan Temple Vandalised : ಪಾಕಿಸ್ತಾನದಲ್ಲಿನ ಶ್ರೀರಾಮ ಮಂದಿರದ ವಿಧ್ವಂಸ !

ದೇವಸ್ಥಾನದಲ್ಲಿನ ಮೂರ್ತಿ ಕಳವು

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ಘಟನೆಗಳು ನಿರಂತರ ಹೆಚ್ಚುತ್ತಿವೆ. ದೇಶದ ವಿವಿಧ ಪ್ರದೇಶದಲ್ಲಿನ ಹಿಂದುಗಳ ದೇವಸ್ಥಾನಗಳನ್ನು ನಾಶ ಮಾಡಿರುವ ಘಟನೆಗಳು ಬೆಳಕಿಗೆ ಬರುತ್ತಿವೆ. ಇಂತಹದೇ ಒಂದು ಘಟನೆ ಈಗ ಸಿಂಧ ಪ್ರಾಂತ್ಯದಲ್ಲಿ ನಡೆದಿದೆ. ಅಲ್ಲಿನ ಶ್ರೀ ರಾಮ ಮಂದಿರದಲ್ಲಿನ ಮೂರ್ತಿಯನ್ನು ತೆರೆವುಗೊಳಿಸಲಾಗಿದೆ. ಸಿಂಧ ಪ್ರಾಂತದಲ್ಲಿನ ತಾಂಡೋ ಆದಮ ನಗರದಲ್ಲಿನ ಕಚ್ಚಿ ಕಾಲೋನಿಯಲ್ಲಿ ಈ ಶ್ರೀ ರಾಮ ಮಂದಿರವಿದ್ದು ಜೂನ್ ೭ ರ ರಾತ್ರಿ ಕೆಲವು ದುಷ್ಕರ್ಮಿಗಳು ದೇವಸ್ಥಾನಕ್ಕೆ ಹಾಕಿದ್ದ ಬೀಗವನ್ನು ಒಡೆದು ಒಳಗೆ ನುಗ್ಗಿದರು ಮತ್ತು ಒಳಗಿದ್ದ ಮೂರ್ತಿಗಳು ಮತ್ತು ಶ್ರೀಮದ್ ಭಗವದ್ಗೀತೆ ಗ್ರಂಥವನ್ನು ಕಳವು ಮಾಡಿದರು. ಲೂಟಿ ಮಾಡುವುದರ ಜೊತೆಗೆ ದೇವಸ್ಥಾನ ಧ್ವಂಸ ಕೂಡ ಮಾಡಿದ್ದಾರೆ.

ದೇವಸ್ಥಾನದ ಜೀರ್ಣೋದ್ಧಾರ ಮಾಡಲು ಬಿಡುವುದಿಲ್ಲ !

ಪಾಕಿಸ್ತಾನದಲ್ಲಿನ ವಾಯ್ಸ್ ಆಫ್ ಮೈನಾರಿಟಿ ಹೆಸರಿನ ಎಕ್ಸ್ ಖಾತೆಯಿಂದ ಈ ದೇವಸ್ಥಾನದಲ್ಲಿನ ಮೂರ್ತಿ ತೆರವುಗೊಳಿಸಿರುವುದು ಮತ್ತು ಅದನ್ನು ಧ್ವಂಸ ಮಾಡಿರುವ ಘಟನೆಯ ಮಾಹಿತಿ ನೀಡಲಾಗಿದೆ. ಇದರ ಜೊತೆಗೆ ಒಂದು ವಿಡಿಯೋ ಕೂಡ ಪ್ರಸಾರ ಮಾಡಲಾಗಿದ್ದು ಅದರಲ್ಲಿ ದೇವಸ್ಥಾನದ ಅತ್ಯಂತ ಶೋಚನೀಯ ಸ್ಥಿತಿ ತೋರಿಸಲಾಗಿದೆ. ಸ್ಥಳೀಯ ಹಿಂದೂಗಳು ಅನೇಕ ಬಾರಿ ಈ ದೇವಸ್ಥಾನದ ಜೀರ್ಣೋದ್ಧಾರ ಮಾಡುವ ಪ್ರಯತ್ನ ಮಾಡಿದ್ದರೂ ಮೇಲಿಂದ ಮೇಲೆ ಅಡೆತಡೆಗಳು ನಿರ್ಮಾಣ ಮಾಡಲಾಗುತ್ತಿದೆ.

ಪಾಕಿಸ್ತಾನದಲ್ಲಿನ ಹಿಂದುಗಳ ದೇವಸ್ಥಾನಗಳು ನೆಲೆಸಮ ಮಾಡಿರುವ ಅನೇಕ ಘಟನೆಗಳು ನಡೆದಿವೆ. ಈ ವರ್ಷ ಮಾರ್ಚ್ ನಲ್ಲಿ ಖೈಬರ್ ಪಖ್ಟುನಖ್ವಾ ಪ್ರದೇಶದಲ್ಲಿನ ಪಾಕಿಸ್ತಾನ-ಅಪಘಾನಿಸ್ತಾನ ಗಡಿಯ ಹತ್ತಿರ ಇರುವ ಒಂದು ಐತಿಹಾಸಿಕ ದೇವಸ್ಥಾನವನ್ನು ನೆಲೆಸಮ ಮಾಡಲಾಗಿದೆ. ದೇವಸ್ಥಾನ ಕೆಡವಿದ ನಂತರ ಆ ಸ್ಥಳದಲ್ಲಿ ವ್ಯಾಪಾರಿ ಮಾಲ್ ಕಟ್ಟಿದ್ದಾರೆ. ಈ ಪ್ರದೇಶದಲ್ಲಿನ ಮೂಲ ನಿವಾಸಿಗಳು ೧೯೪೭ ರಲ್ಲಿ ಭಾರತದಿಂದ ಸ್ಥಳಾಂತರವಾದ ನಂತರ ಈ ದೇವಸ್ಥಾನವನ್ನು ಮುಚ್ಚಲಾಗಿತ್ತು . ೧೯೯೨ ಅಯೋಧ್ಯೆಯಲ್ಲಿನ ಬಾಬರಿ ಮಸೀದಿ ನೆಲೆಸಮವಾದ ನಂತರ ಈ ದೇವಸ್ಥಾನದ ಮೇಲೆ ಮುಸಲ್ಮಾನರು ದಾಳಿ ನಡೆಸಿ ನಾಶಗೊಳಿಸಿದ್ದರು.

ಇಸ್ಲಾಮಬಾದದ ಶ್ರೀರಾಮ ಮಂದಿರದಲ್ಲಿ ಪೂಜೆ ನಡೆಸಲು ಅನುಮತಿ ಇಲ್ಲ

ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದದಲ್ಲಿ ಒಂದು ಐತಿಹಾಸಿಕ ಶ್ರೀರಾಮನ ಮಂದಿರವಿದೆ. ಈ ದೇವಸ್ಥಾನವು ೧೬ನೇ ಶತಮಾನದ್ದಾಗಿದ್ದು ಭಗವಾನ್ ಶ್ರೀ ರಾಮ ತಮ್ಮ ೧೪ ವರ್ಷದ ವನವಾಸದ ಕೆಲ ಸಮಯವನ್ನು ಪತ್ನಿ ಸೀತೆ ಮತ್ತು ಸಹೋದರ ಲಕ್ಷ್ಮಣರ ಜೊತೆ ಇಲ್ಲಿ ವಾಸವಾಗಿದ್ದರು ಎಂಬುದು ಹಿಂದುಗಳ ಶ್ರದ್ಧೆಯಾಗಿದೆ. ದೇವಸ್ಥಾನದ ಸಮೀಪ ಒಂದು ಸರೋವರವಿದ್ದು ಅದನ್ನು ‘ರಾಮಕುಂಡ’ ಎನ್ನುತ್ತಾರೆ. ಭಗವಾನ್ ಶ್ರೀ ರಾಮನು ಇಲ್ಲಿ ನೀರು ಕುಡಿದಿದ್ದರು ಎಂಬ ನಂಬಿಕೆಯಿದೆ. ಈ ಸರೋವರದಿಂದಾಗಿ ಈ ಮಂದಿರವನ್ನು ‘ರಾಮಕುಂಡ ಮಂದಿರ’ ಎಂದು ಕರೆಯುತ್ತಾರೆ; ಆದರೆ ಈ ದೇವಸ್ಥಾನದಲ್ಲಿ ಹಿಂದುಗಳಿಗೆ ಪೂಜೆ ಮಾಡಲು ಅನುಮತಿ ಇಲ್ಲ. ಇಲ್ಲಿಯ ಮೂರ್ತಿಗಳನ್ನು ಕೂಡ ತೆರೆವುಗೊಳಿಸಲಾಗಿದೆ.

ಸಂಪಾದಕೀಯ ನಿಲುವು

ಭಾರತವಾಗಲಿ ಪಾಕಿಸ್ತಾನವಾಗಲಿ ಹಿಂದುಗಳ ರಕ್ಷಣೆಗೆ ಯಾರು ಇಲ್ಲದಂತಾಗಿದೆ ! ಈ ಪರಿಸ್ಥಿತಿ ಬದಲಾಯಿಸುವುದಕ್ಕೆ ಭಾರತದಲ್ಲಿನ ಹಿಂದುಗಳು ಸಂಘಟಿತರಾಗಿ ಹಿಂದೂ ರಾಷ್ಟ್ರ ಸ್ಥಾಪನೆ ಮಾಡುವ ಆವಶ್ಯಕತೆ ಇದೆ !