ದಕ್ಷಿಣ ಕೋರಿಯಾದ ಸೈನ್ಯದಿಂದ ಗುಂಡಿನ ದಾಳಿಯ ಬಳಿಕ ಹಿಂತಿರುಗಿದರು !
ಪ್ಯೋಗಯಾಂಗ್ (ಉತ್ತರ ಕೋರಿಯಾ) – ಉತ್ತರ ಕೋರಿಯಾದ ಸೈನಿಕರು ಗಡಿ ದಾಟಿ ದಕ್ಷಿಣ ಕೋರಿಯಾದ ಗಡಿಯಲ್ಲಿ ಪ್ರವೇಶ ಮಾಡಿದ ನಂತರ ದಕ್ಷಿಣ ಕೋರಿಯಾದ ಸೈನಿಕರಿಂದ ಗುಂಡಿನ ದಾಳಿ ನಡೆಸಿ ಅವರನ್ನು ಹಿಂತಿರುಗಿ ಹೋಗುವ ಎಚ್ಚರಿಕೆ ನೀಡಿದರು. ಈ ಘಟನೆ ಜೂನ್ ೯ ರಂದು ಮಧ್ಯಾಹ್ನ ನಡೆದಿದ್ದು ಅದರ ಸಮೀಕ್ಷೆ ಈಗ ಬೆಳಕಿಗೆ ಬಂದಿದೆ. ಗುಂಡಿನ ದಾಳಿಯ ನಂತರ ಉತ್ತರ ಕೋರಿಯಾದ ಸೈನಿಕರು ತಮ್ಮ ದೇಶಕ್ಕೆ ಹಿಂತಿರುಗಿದರು. ಇಲ್ಲಿಯವರೆಗೆ ಈ ಪ್ರಕರಣದ ಕುರಿತು ಉತ್ತರ ಕೋರಿಯಾದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
೧. ದಕ್ಷಿಣ ಕೋರಿಯಾದ ಸೈನ್ಯಾಧಿಕಾರಿ ಪ್ರಕಾರ, ಉತ್ತರ ಕೋರಿಯಾದ ಸೈನಿಕರ ಬಳಿ ಕಟ್ಟಡ ಕಾಮಗಾರಿಯ ಸಾಮಗ್ರಿಗಳಿದ್ದವು. ಕೆಲವರ ಬಳಿ ಶಸ್ತ್ರಾಸ್ತ್ರಗಳು ಕೂಡ ಇದ್ದವು. ಅವರು ದಕ್ಷಿಣ ಕೋರಿಯಾದ ಗಡಿಯ ೫೦ ಮೀಟರ್ ಅಷ್ಟು ಒಳಗೆ ಬಂದಿದ್ದರು.
೨ . ಅಂಕಿ ಅಂಶಗಳ ಪ್ರಕಾರ ಗಡಿಯಲ್ಲಿ ಮತ್ತು ಸುತ್ತಲಿನ ಪ್ರದೇಶದಲ್ಲಿ ೨೦ ಲಕ್ಷ ಕಂದಕಗಳನ್ನು ನಿರ್ಮಿಸಲಾಗಿವೆ. ಇದಲ್ಲದೆ ಮುಳ್ಳಿನ ತಂತಿಯ ಬೇಲಿ, ರಡಾರಗಳು ಮತ್ತು ಯುದ್ಧ ಸೈನಿಕರು ಕೂಡ ಗಡಿಯ ಎರಡು ಬದಿಯಲ್ಲಿ ಸಜ್ಜಾಗಿರುತ್ತಾರೆ. ೧೯೫೦ ರಿಂದ ೧೯೫೩ ವರೆಗೆ ಈ ಎರಡು ದೇಶಗಳ ನಡುವಿನ ಯುದ್ಧ ಅಂತ್ಯಗೊಳಿಸುವುದಕ್ಕಾಗಿ ಒಪ್ಪಂದದ ಅಂತರ್ಗತ ಈ ಗಡಿ ನಿರ್ಮಿಸಲಾಗಿತ್ತು.
೩. ಕಳೆದ ಕೆಲವು ದಿನಗಳಿಂದ ಉತ್ತರ ಕೋರಿಯಾ ನಿರಂತರವಾಗಿ ದಕ್ಷಿಣ ಕೋರಿಯಾಗೆ ದೊಡ್ಡ ಬಲೂನ್ ನಲ್ಲಿ ಕಸ ತುಂಬಿಸಿ ಕಳುಹಿಸುತ್ತಿದೆ. ಅದರಿಂದ ದಕ್ಷಿಣ ಕೋರಿಯಾದ ಅನೇಕ ರಸ್ತೆಗಳಲ್ಲಿ ಕಸ ಸಂಗ್ರಹವಾಗಿದೆ.