Jaipur Protest : ಜಯಪುರ (ರಾಜಸ್ಥಾನ) ದಲ್ಲಿ ನಾಲ್ವರು ೪ ಹಿಂದೂಗಳ ಶವಗಳು ತಲುಪಿದ ನಂತರ ಸ್ಥಳೀಯ ಹಿಂದೂಗಳಿಂದ ರಸ್ತೆಗಿಳಿದು ಪ್ರತಿಭಟನೆ

  • ಜಮ್ಮು: ಹಿಂದೂ ಭಕ್ತರ ಮೇಲೆ ಭಯೋತ್ಪಾದಕ ದಾಳಿಯ ಪ್ರಕರಣ

  • ಪಾಕಿಸ್ತಾನದ ವಿರುದ್ಧ ಆಕ್ರೋಶ

ಜಯಪುರ (ರಾಜಸ್ಥಾನ) – ಜಮ್ಮುವಿನ ರಿಯಾಸಿಯಲ್ಲಿ ಹಿಂದೂ ಭಕ್ತರ ಬಸ್ಸಿನ ಮೇಲೆ ನಡೆದ ಜಿಹಾದಿ ಭಯೋತ್ಪಾದಕರ ದಾಳಿಯಲ್ಲಿ ೯ ಜನರು ಸಾವನ್ನಪ್ಪಿದ್ದರು. ಈ ದಾಳಿಯಲ್ಲಿ ಸಾವಿಗೀಡಾದವರಲ್ಲಿ ೪ ಜನರು ಜಯಪುರದವರಾಗಿದ್ದರು. ಅವರ ಶವಗಳು ಜಯಪುರದಲ್ಲಿನ ಚೌಮುನಾಗೆ ಜೂನ್ ೧೧ ರಂದು ತರಲಾಯಿತು. ಆ ಬಳಿಕ ಅಲ್ಲಿಯ ಸ್ಥಳೀಯ ಹಿಂದೂಗಳಿಂದ ಪಾಕಿಸ್ತಾನದ ವಿರುದ್ಧ ಘೋಷಣೆ ನೀಡುತ್ತಾ ಪ್ರತಿಭಟನೆ ನಡೆಸಲಾಯಿತು. ರಾಜೇಂದ್ರ ಸೈನಿ, ಮಮತಾ ಸೈನಿ, ಪೂಜಾ ಸೈನಿ ಮತ್ತು ಚಿಕ್ಕ ಹುಡುಗ ಕಿಟ್ಟು ಇವರು ಈ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.

೨ ಪೊಲೀಸ ಠಾಣೆಯ ಹೊರಗಡೆ ಪ್ರತಿಭಟನೆ

ಚೌಮುನಾ ನಗರದಲ್ಲಿ ಆಕ್ರೋಶಗೊಂಡ ಜನರು ರಸ್ತೆಗೆ ಇಳಿದರು. ಬೇಡಿಕೆ ಪೂರ್ಣ ಆಗುವವರೆಗೆ ಶವಗಳ ಅಂತ್ಯ ಸಂಸ್ಕಾರ ಮಾಡಲು ಸಂಬಂಧಿಕರು ಮತ್ತು ಪ್ರತಿಭಟನಾಕಾರರು ನಿರಾಕರಿಸಿದರು. ಜಯಪುರದಲ್ಲಿ ಮುರಳಿಪುರ ಮತ್ತು ಚೌಮಾನ ಪೊಲೀಸ ಠಾಣೆಯ ಹತ್ತಿರ ಎಲ್ಲಾ ಜನಾಂಗದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ಎರಡು ಸ್ಥಳಗಳಲ್ಲಿನ ಪರಿಸ್ಥಿತಿ ನೋಡುತ್ತಾ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪ್ರತಿಭಟನಾಕಾರರು ಮಾರುಕಟ್ಟೆಯನ್ನು ಕೂಡ ಬಂದ್ ಮಾಡಿದ್ದರು.

ಮೃತರ ಸಂಬಂಧಿಕರಿಂದ ೧ ಕೋಟಿ ರೂಪಾಯಿ ಪರಿಹಾರ ನೀಡಲು ಒತ್ತಾಯ

ಈ ಎರಡು ಪ್ರದೇಶದ ಜನರು ಮತ್ತು ಸ್ಥಳೀಯ ಜನಪ್ರತಿನಿಧಿಗಳ ಹೆಚ್ಚುತ್ತಿರುವ ಆಕ್ರೋಶ ನೋಡಿ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ತಲುಪಿ ಪ್ರತಿಭಟನಾಕಾರರಿಗೆ ತಿಳಿ ಹೇಳುವ ಪ್ರಯತ್ನ ಮಾಡಿದರು ; ಆದರೆ ಪ್ರತಿಭಟನಾಕಾರರು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಪ್ರತಿಭಟನಾಕಾರರು ಮೃತ ಕುಟುಂಬದ ಪ್ರತಿ ಸದಸ್ಯರಿಗೆ ೧ ಕೋಟೆ, ಅಂದರೆ ನಾಲ್ಕು ಕೋಟಿ ರೂಪಾಯಿ ಪರಿಹಾರ ಮತ್ತು ಅವರ ಅವಲಂಬಿತರಿಗೆ ಸರಕಾರಿ ನೌಕರಿ ನೀಡಲು ಒತ್ತಾಯಿಸಿದರು. ಬೇಡಿಕೆ ಪೂರ್ಣ ಆಗುವವರೆಗೆ ಮೃತರ ಅಂತ್ಯಸಂಸ್ಕಾರ ಮಾಡಲಾಗದು ಎಂದು ಪ್ರತಿಭಟನಾಕಾರರು ನಿಲುವು ತಾಳಿದ್ದಾರೆ.

ಸಂಪಾದಕೀಯ ನಿಲುವು

ಹಿಂದುಗಳು ಕಾನೂನು ರೀತಿಯಲ್ಲಿ ರಾಜಕಾರಣಿಗಳ ಮೇಲೆ ಒತ್ತಡ ಹೇರಿದರೆ ಜಿಹಾದಿ ಭಯೋತ್ಪಾದನೆ ಬೇರು ಸಹಿತ ನಾಶ ಮಾಡುವ ಪ್ರಯತ್ನವಾಗಬಹುದು ಎಂದು ಅಪೇಕ್ಷೆ !