ನವ ದೆಹಲಿ – ಜೂನ್ 21 ರಂದು ದೇಶದಲ್ಲಿ ‘ಅಂತಾರಾಷ್ಟ್ರೀಯ ಯೋಗ ದಿನ’ವನ್ನು ಆಚರಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು 2014 ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ‘ಅಂತರರಾಷ್ಟ್ರೀಯ ಯೋಗ ದಿನ’ವನ್ನು ಪ್ರಾರಂಭಿಸಿದ್ದರು. ಈ ವರ್ಷ 10ನೇ ‘ಅಂತರರಾಷ್ಟ್ರೀಯ ಯೋಗ ದಿನ’ ಆಚರಿಸಲಾಗುವುದು. ಯೋಗದಿನವನ್ನು ಆಚರಿಸಲು ಪ್ರಾರಂಭಿಸಿದಾಗಿನಿಂದ, ದೇಶಾದ್ಯಂತ ಯೋಗ ಚಟುವಟಿಕೆಗಳ ಬಗ್ಗೆ ಜನ ಜಾಗೃತಿ ಆಗಿದೆ. ಅನೇಕರು ಯೋಗವನ್ನು ಪ್ರಾರಂಭಿಸುವ ಮೂಲಕ ತಮ್ಮ ಜೀವನದಲ್ಲಿ ಅಮೂಲಾಗ್ರ ಬದಲಾವಣೆಯನ್ನು ತಂದಿದ್ದಾರೆ. ಈ ಬಾರಿಯ ಯೋಗ ದಿನಾಚರಣೆಗೆ ಇನ್ನು 10 ದಿನಗಳು ಮಾತ್ರ ಬಾಕಿ ಉಳಿದಿದ್ದು, ‘ಯೋಗ’ವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಜನರಿಗೆ ಕರೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದ್ದು ಮಾತ್ರವಲ್ಲದೆ, ತಮ್ಮ ಯೋಗ ತರಬೇತುದಾರರ ಕೆಲವು ವಿಡಿಯೋಗಳನ್ನು ಡಿಜಿಟಲ್ ರೂಪದಲ್ಲಿ ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಮೋದಿಯವರ ಡಿಜಿಟಲ್ ತರಬೇತುದಾರರು ಯೋಗದ ವಿವಿಧ ಪ್ರಕಾರಗಳನ್ನು ಕಲಿಸುತ್ತಿರುವುದು ಕಂಡುಬರುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರು ‘ಎಕ್ಸ್’ ನಲ್ಲಿ ಪ್ರಸಾರ ಮಾಡಿದ ಒಂದು ಪೋಸ್ಟ್‌ನಲ್ಲಿ, ಈ ವರ್ಷ ಜಗತ್ತು 10 ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಿದೆ ಎಂದು ಹೇಳಿದ್ದಾರೆ. ಈ ಉಪಕ್ರಮದ ಮೂಲಕ ಏಕತೆ ಮತ್ತು ಸಾಮರಸ್ಯವನ್ನು ಸಾಧಿಸಲಾಗುವುದು. ಯೋಗವು ಸಾಂಸ್ಕೃತಿಕ ಮತ್ತು ಭೌಗೋಳಿಕ ಗಡಿಗಳನ್ನು ಮೀರಿದೆ ಮತ್ತು ಸಮಗ್ರ ಯೋಗಕ್ಷೇಮಕ್ಕಾಗಿ ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಸರ್ವಾಂಗೀಣ ಕಲ್ಯಾಣಕ್ಕಾಗಿ ಒಂದುಗೂಡಿಸಿದೆ ಎಂದಿದ್ದಾರೆ.