Kerala MP Suresh Gopi : ಕೇರಳದ ಏಕೈಕ ಬಿಜೆಪಿ ಸಂಸದರಾಗಿ ಆಯ್ಕೆಯಾಗಿ, ನಿನ್ನೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಂತ್ರಿ ಈಗ ತಮ್ಮ ಸ್ಥಾನವನ್ನು ಬಿಡುವ ಸಿದ್ಧತೆಯಲ್ಲಿ!

ನವ ದೆಹಲಿ – ಜೂನ್ 9 ರಂದು ಕೇಂದ್ರ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ಸುರೇಶ್ ಗೋಪಿ ಅವರು ತಮ್ಮ ಸಚಿವ ಸ್ಥಾನವನ್ನು ತೊರೆಯುವುದಾಗಿ ಹೇಳಿದ್ದಾರೆ. ಸುರೇಶ್ ಗೋಪಿ ಕೇರಳದಿಂದ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. ಅವರು ಕೇರಳದ ಮೊದಲ ಮತ್ತು ಏಕೈಕ ಬಿಜೆಪಿ ಸಂಸದರಾಗಿದ್ದಾರೆ. ಗೋಪಿ ಅವರು ಕೇಂದ್ರ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಸುರೇಶ್ ಅವರು ನವದೆಹಲಿಯಲ್ಲಿ ಮಲಯಾಳಂ ಪತ್ರಿಕೆಯೊಂದಿಗೆ ಮಾತನಾಡುವಾಗ, ‘ನಾನು ಕೆಲವು ಚಿತ್ರಗಳನ್ನು ಒಪ್ಪಿಕೊಂಡಿದ್ದು ಅದರಲ್ಲಿ ಕೆಲಸ ಮಾಡಲು ಬಯಸುತ್ತೇನೆ. ನಾನು ತ್ರಿಶೂರ್ ಕ್ಷೇತ್ರದ ಸಂಸದನಾಗಿ ಕೆಲಸ ಮಾಡುತ್ತಲಿರುತ್ತೇನೆ. ನಾನು ಕೇವಲ ಸಂಸದನೆಂದು ಕೆಲಸ ಮಾಡಲು ಇಚ್ಛಿಸುತ್ತೇನೆ. ನನ್ನ ಮತಕ್ಷೇತ್ರ ತ್ರಿಶೂರ್ ನ ಸಂಸದನೆಂದು ಕೆಲಸ ಮಾಡುತ್ತಿರುತ್ತೇನೆ. ನಾನು ಅವರಲ್ಲಿ (ಪಕ್ಷದ ಪ್ರಮುಖರಲ್ಲಿ)ಏನನ್ನೂ ಕೇಳಿರಲಿಲ್ಲ. ನನಗೆ ಯಾವುದೇ ಹುದ್ದೆಯ ಆವಶ್ಯಕತೆಯಿಲ್ಲವೆಂದು ಹೇಳಿದ್ದೆನು. ನನಗೆ ಈ ಹುದ್ದೆಯ ಆವಶ್ಯಕತೆಯಿಲ್ಲ. ನಾನು ಆದಷ್ಟು ಬೇಗನೆ ಪದವಿ ಮುಕ್ತನಾಗುತ್ತೇನೆಂದು ಅನಿಸುತ್ತದೆ. ಆದರೆ ನಾನು ತ್ರಿಶೂರದ ಜನರಿಗೆ ಯಾವುದೇ ಹಾನಿಯಾಗಲು ಬಿಡುವುದಿಲ್ಲ. ನಾನು ಅವರಿಗಾಗಿ ಮತ್ತು ಮತಕ್ಷೇತ್ರಕ್ಕಾಗಿ ಕೆಲಸ ಮಾಡುತ್ತಲೇ ಇರುತ್ತೇನೆ. ನನ್ನ ಮತದಾರರಿಗೆ ಇದರ ಕಲ್ಪನೆಯಿದೆ. ನಾನು ಪ್ರಾಮಾಣಿಕವಾಗಿ ನನ್ನ ಕ್ಷೇತ್ರಕ್ಕಾಗಿ ಕೆಲಸ ಮಾಡುತ್ತೇನೆ ಮತ್ತು ಅವರಿಗೂ ಇದರ ಕಲ್ಪನೆಯಿದೆ; ಅದಕ್ಕಾಗಿಯೇ ಅವರು ತಮ್ಮ ಅಮೂಲ್ಯವಾದ ಮತವನ್ನು ನನಗೆ ನೀಡಿದ್ದಾರೆ; ಆದರೆ ನನಗೆ ಸಚಿವ ಸ್ಥಾನವನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ; ಏಕೆಂದರೆ ನನಗೆ ಯಾವುದೇ ಪರಿಸ್ಥಿತಿಯಲ್ಲಿ ನನ್ನ ಚಲನಚಿತ್ರಗಳನ್ನು ಪೂರ್ಣಗೊಳಿಸಬೇಕಾಗಿದೆ” ಎಂದು ಹೇಳಿದರು.