The Power of Modi became PM again : ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ!

  • ನೆಹರೂ ನಂತರ ಸತತ 3 ಅವಧಿಗೆ ಪ್ರಧಾನಿ ಹುದ್ದೆ ಅಲಂಕರಿಸಿದ ಮೊದಲ ಪ್ರಧಾನಿ ಮೋದಿ

  • ಮೋದಿ ಸಹಿತ 72 ಸಂಸದರು ಸಚಿವರಾಗಿ ಪ್ರಮಾಣ ವಚನ ಸ್ವೀಕರ

  • 7 ದೇಶಗಳ ಮುಖ್ಯಸ್ಥರು ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ್ದರು

  • 8 ಸಾವಿರ ಗಣ್ಯರ ಉಪಸ್ಥಿತಿ

ನವ ದೆಹಲಿ – ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ನಾಯಕ ನರೇಂದ್ರ ಮೋದಿ ಅವರು ಜೂನ್ 9 ರಂದು ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರೊಂದಿಗೆ 72 ಸಂಸದರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಧ್ಯಕ್ಷೆ ದ್ರೌಪದಿ ಮುರ್ಮು ಎಲ್ಲರಿಗೂ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ 7 ದೇಶಗಳ ರಾಷ್ಟ್ರಪ್ರಮುಖರು, ವಿವಿಧ ದೇಶಗಳ ರಾಯಭಾರಿಗಳು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರು, ಪಕ್ಷದ ಮುಖಂಡರು, ಶಾಸಕರು, ಗಣ್ಯ ನಾಗರಿಕರು ಸೇರಿದಂತೆ 8 ಸಾವಿರ ಗಣ್ಯರು ಉಪಸ್ಥಿತರಿದ್ದರು. ಸತತ 3 ನೇ ಬಾರಿ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ ನರೇಂದ್ರ ಮೋದಿ ಇವರು ನೆಹರೂ ನಂತರ ಮೊದಲ ಪ್ರಧಾನಿಯಾದರು.

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂಸದರು!

ರಾಜನಾಥ್ ಸಿಂಗ್, ಅಮಿತ್ ಶಾ, ಕರ್ನಾಟಕದಿಂದ ಎಚ್.ಡಿ. ಕುಮಾರಸ್ವಾಮಿ ಮತ್ತು ಶೋಭಾ ಕರಂದ್ಲಾಜೆ, ಮನೋಹರ್ ಲಾಲ್ ಖಟ್ಟರ್, ಜೆ.ಪಿ. ನಡ್ಡಾ, ಶಿವರಾಜ್ ಸಿಂಗ್ ಚೌಹಾಣ್, ಸರ್ಬಾನಂದ್ ಸೋನೋವಾಲ್, ಜ್ಯೋತಿರಾದಿತ್ಯ ಸಿಂಧಿಯಾ, ಧರ್ಮೇಂದ್ರ ಪ್ರಧಾನ್, ಡಾ. ಎಸ್. ಜೈಶಂಕರ್, ಕಿರಣ್ ರಿಜಿಜು, ಅನುಪ್ರಿಯಾ ಪಟೇಲ್, ರಾಮನಾಥ್ ಠಾಕೂರ್, ರವನೀತ್ ಸಿಂಗ್ ಬಿಟ್ಟು, ಜಿತಿನ್ ಪ್ರಸಾದ್, ಸುರೇಶ್ ಗೋಪಿ, ಪಂಕಜ್ ಚೌಧರಿ, ರಾಜಕುಮಾರ್ ಚೌಧರಿ, ಸಂಜಯ್ ಸೇಠ್, ಹರ್ದೀಪ್ ಸಿಂಗ್ ಪುರಿ, ಪ್ರಲ್ಹಾದ್ ಜೋಶಿ, ಗಿರಿರಾಜ್ ಸಿಂಗ್, ಜಯಂತ್ ಚೌಧರಿ, ನಿತ್ಯಾನಂದ ರೈ, ಬಿಎಲ್ ವರ್ಮಾ, ಅನ್ನಪೂರ್ಣ ದೇವಿ, ಅರ್ಜುನ್ ರಾಮ್ ಮೇಘವಾಲ್, ರಾವ್ ಇಂದ್ರಜಿತ್ ಸಿಂಗ್, ಅಜಯ್ ತಮಟಾ, ಜಿತನ್ ರಾಮ್ ಮಾಂಝಿ, ಚಿರಾಗ್ ಪಾಸ್ವಾನ್, ನಿರ್ಮಲಾ ಸೀತಾರಾಮನ್, ಜಿ. ಕಿಶನ್ ರೆಡ್ಡಿ, ಬಂಡಿ ಸಂಜಯ್ ಮುಂತಾದವರು.

ನೆರೆದಿದ್ದ ರಾಷ್ಟ್ರಮುಖಂಡರು !

ಕಾರ್ಯಕ್ರಮದಲ್ಲಿ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು, ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನಾಥ್, ಸೆಶೆಲ್ಸ್ ಉಪಾಧ್ಯಕ್ಷ ಅಹ್ಮದ್ ಅಫೀಫ್ (ಈ ಮೂರು ದ್ವೀಪಗಳ ರಾಷ್ಟ್ರ ಹಿಂದೂ ಮಹಾಸಾಗರದಲ್ಲಿವೆ), ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ, ನೇಪಾಳ ಪ್ರಧಾನಿ ಪುಷ್ಪಕಮಲ್ ದಹಾಲ್ ‘ಪ್ರಚಂಡ’, ಭೂತಾನ್ ಪ್ರಧಾನಿ ದಾಶೋ ತ್ಶೆರಿಂಗ್ ತೊಬಾಗೆ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಉಪಸ್ಥಿತರಿದ್ದರು.