|
(ಈದ್ಗಾ ಎಂದರೆ ನಮಾಜ್ ಮಾಡುವ ಸ್ಥಳ)
ಮಧುಬನಿ (ಬಿಹಾರ) – ಮಧುಬನಿ ಜಿಲ್ಲೆಯ ಬಸೊಪಟ್ಟಿಯ ಕೌಹಾ ಗ್ರಾಮದಲ್ಲಿ ವಟ ಸಾವಿತ್ರಿ ಪೂಜೆಯ ವ್ರತವನ್ನು ಮಾಡಿದ ಬಳಿಕ ಪೂಜೆ ಮಾಡುತ್ತಿದ್ದ ಹಿಂದೂ ಮಹಿಳೆಯರು ಮತ್ತು ಪುರುಷರ ಮೇಲೆ ಮತಾಂಧ ಮುಸಲ್ಮಾನರ ಗುಂಪು ದಾಳಿ ನಡೆಸಿದ್ದರಿಂದ 12 ಜನರು ಗಾಯಗೊಂಡರು; ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದಾಗ ಅವರ ಮೇಲೆ ಹಲ್ಲೆ ನಡೆಸಲಾಯಿತು. ಕೆಲವು ಪೊಲೀಸರು ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯ ನಂತರ ಪೊಲೀಸರು ಇಲ್ಲಿ ಧ್ವಜ ಸಂಚಲನವನ್ನು ನಡೆಸಿದರು.
ಇಲ್ಲಿನ ಈದ್ಗಾಹದಿಂದ ಸುಮಾರು 50 ಅಡಿ ದೂರದಲ್ಲಿ ಒಂದು ಹಳೆಯ ಅರಳಿ ಮರವಿದ್ದು, ಇಲ್ಲಿ ಪುರಾತನ ಕಾಲದಿಂದಲೂ ಹಿಂದೂಗಳು ಪೂಜಿಸುತ್ತಾ ಬಂದಿದ್ದಾರೆ. ಇದನ್ನು ಮುಸ್ಲಿಮರು ಹಲವು ವರ್ಷಗಳಿಂದ ವಿರೋಧಿಸುತ್ತಲೇ ಬಂದಿದ್ದಾರೆ. ಈ ಬಾರಿಯೂ ಹಿಂದೂಗಳು ಪೂಜೆ ಮಾಡಲು ಆರಂಭಿಸಿದಾಗ ಮುಸ್ಲಿಮರು ಪ್ರತಿಭಟಿಸಿದರು ಮತ್ತು ನಂತರ ದಾಳಿ ಮಾಡಿದರು. ಆಡಳಿತದ ಅಭಿಪ್ರಾಯದಂತೆ, ಯಾವ ಭೂಮಿಯ ಮೇಲೆ ಈ ಅರಳಿಮರ ಇದೆಯೋ ಆ ಜಾಗದ ಕಾಗದಪತ್ರಗಳು ಯಾರ ಬಳಿಯೂ ಇಲ್ಲವೆಂದು ಹೇಳುತ್ತಿದ್ದಾರೆ.
ಸಂಪಾದಕೀಯ ನಿಲುವುಬಿಹಾರದಲ್ಲಿ ಬಿಜೆಪಿ ಮೈತ್ರೀ ಕೂಟದ ಸರಕಾರವಿರುವಾಗ ಇಂತಹ ಘಟನೆ ನಡೆಯಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ ! |