ವಾಷಿಂಗ್ಟನ್ (ಅಮೇರಿಕಾ) – ಖಲಿಸ್ತಾನಿ ಭಯೋತ್ಪಾದಕ ಗುರಪತವಂತ ಸಿಂಗ ಪನ್ನೂ ಇವನು ಭಾಜಪದಿಂದ ಹೊಸದಾಗಿ ಆಯ್ಕೆಯಾದ ಸಂಸದೆ ಮತ್ತು ನಟಿ ಕಂಗನಾ ರಣೌತ ಅವರಿಗೆ ಕೆನ್ನೆಗೆ ಬಾರಿಸಿದ ಕುಲವಿಂದರ ಕೌರ ಎಂಬ ಮಹಿಳಾ ಸಿಬ್ಬಂದಿಗೆ 10 ಸಾವಿರ ಅಮೇರಿಕನ್ ಡಾಲರ್ (8 ಲಕ್ಷ 34 ಸಾವಿರ ರೂಪಾಯಿ) ಬಹುಮಾನ ಘೋಷಿಸಿದ್ದಾನೆ. ಕುಲವಿಂದರ ಕೌರ ಕೇಂದ್ರೀಯ ಕೈಗಾರಿಕಾ ಭದ್ರತಾ ಸಿಪಾಯಿಯಾಗಿದ್ದು, ಅವರು ಚಂಡಿಗಢ ವಿಮಾನ ನಿಲ್ದಾಣದಲ್ಲಿ ಸಂಸದೆ ಕಂಗನಾ ಅವರಿಗೆ ಕೆನ್ನೆಗೆ ಬಾರಿಸಿದ್ದರು.
ಮತ್ತೊಂದೆಡೆ, ಕಂಗನಾ ರಾಣೌತ ಅವರ ಕೆನ್ನೆಗೆ ಬಾರಿಸಿದ್ದಕ್ಕೆ ಕುಲವಿಂದರ ಕೌರ ಅವರಿಗೆ 1 ಲಕ್ಷ ರೂಪಾಯಿಗಳ ಬಹುಮಾನ ನೀಡುವುದಾಗಿ ಪಂಜಾಬಿನ ಮೊಹಾಲಿಯ ಉದ್ಯಮಿ ಶಿವರಾಜ ಸಿಂಗ ಬೈಂಸ ಘೋಷಿಸಿದ್ದಾರೆ. (ಇಂತಹವರ ವಿರುದ್ಧ ಕೇಸು ದಾಖಲಿಸಿ ಜೈಲಿಗೆ ಕಳುಹಿಸಬೇಕು! ಆದರೆ ಪಂಜಾಬ್‌ನ ಆಪ್ ಆದ್ಮಿ ಪಕ್ಷದ ಸರಕಾರ ಅಂತ ಕೆಲಸ ಮಾಡುವುದಿಲ್ಲ ಎನ್ನುವುದೂ ಕೂಡ ಅಷ್ಟೇ ಸತ್ಯವಾಗಿದೆ – ಸಂಪಾದಕರು)
Khalistani Terrorist Pannun announces reward of Rs 8 lakhs to CISF Sikh Woman constable Kulvinder Kaur, who slapped Kangana Ranaut
Ranaut was beaten for calling the farmer agitators ‘Khalistani’!
👉 It is dangerous for the country to have such recruits, who are themselves… pic.twitter.com/hymrk0DWbC
— Sanatan Prabhat (@SanatanPrabhat) June 7, 2024
ರೈತರನ್ನು ‘ಖಲಿಸ್ತಾನಿ’ ಗಳು ಎಂದು ಹೇಳಿದ್ದರಿಂದ ಕೆನ್ನೆಗೆ ಬಾರಿಸಿದೆ !
ದೆಹಲಿಯ ಹೊರವಲಯದ ಗಡಿಯಲ್ಲಿ ರೈತರು ನಡೆಸಿದ್ದ ಪ್ರತಿಭಟನೆ ಬಗ್ಗೆ ಕಂಗನಾ ರಣೌತ ಅವರು ‘ಪ್ರತಿಭಟನೆಯಲ್ಲಿ ಭಾಗವಹಿಸಿದ ಮಹಿಳೆಯರು 100 ರೂ. ಪಡೆದು ಕುಳಿತಿದ್ದರು’ ಎಂದು ಹೇಳಿದ್ದರು. ರೈತರನ್ನು ‘ಖಲಿಸ್ತಾನಿಗಳು’ ಎಂದು ಅವರು ಸಂಬೋಧಿಸಿದ್ದರು. ಈ ಕಾರಣಕ್ಕಾಗಿಯೇ ನಾನು ಕಂಗನಾಳ ಕೆನ್ನೆಗೆ ಬಾರಿಸಿದೆ ಎಂದು ಕುಲವಿಂದರ ಕೌರ ಕೆನ್ನೆಗೆ ಬಾರಿಸಿದ ಬಳಿಕ ಹೇಳಿದ್ದಳು.
ಸಂಪಾದಕೀಯ ನಿಲುವುಭದ್ರತಾ ವ್ಯವಸ್ಥೆಯಲ್ಲಿಯೇ ಭದ್ರತೆಗೆ ಅಪಾಯಕಾರಿಯಾಗಿರುವಂತವರ ನೇಮಕ ಮಾಡಿದ್ದು ದೇಶಕ್ಕೆ ಅಪಾಯಕಾರಿಯಾಗಿದೆ. ಇಂದಿರಾ ಗಾಂಧಿಯವರ ಸಂದರ್ಭದಲ್ಲಿ ಇಂತಹ ಒಂದು ಅನುಭವವಾಗಿರುವುದರಿಂದ ಈ ವಿಷಯದಲ್ಲಿ ಹೆಚ್ಚು ಜಾಗರೂಕತೆ ಹೊಂದುವ ಆವಶ್ಯಕತೆಯಿದೆ. |