ಶ್ರೀನಗರ – ಕಲಂ 370 ರದ್ದಾದ ನಂತರ, ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿಯ ವಾತಾವರಣವಿದೆ. ಕ್ರಮೇಣ ಸ್ಥಳಾಂತರಗೊಂಡ ಕಾಶ್ಮೀರಿ ಹಿಂದೂಗಳ ಪುನರ್ವಸತಿ ಪ್ರಾರಂಭವಾಯಿತು. ಕಾಶ್ಮೀರಿ ಹಿಂದೂಗಳಾದ ಸಂಜಯ್ ವಾಲಿ ಮತ್ತು ಅವರ ಕುಟುಂಬವು ಹಲವು ವರ್ಷಗಳ ಬಳಿಕ ಅನಂತನಾಗ ಮರಳಿ ಇಲ್ಲಿನ ವೆರಿನಾಗ್‌ನಲ್ಲಿ ಅವರು ತಮ್ಮ ಜಮೀನಿನಲ್ಲಿ ಮನೆಯನ್ನು ನಿರ್ಮಿಸಲು ಪ್ರಾರಂಭಿಸಿದ್ದರು; ಸಂಜಯ ವಾಲಿ ಮತ್ತು ಅವನ ಕುಟುಂಬದವರಲ್ಲಿ ಕೆಲವು ವರ್ಷಗಳವರೆಗಿನ ಹೆದರಿಕೆಯಿರಲಿಲ್ಲ; ಆದರೆ ಲೋಕಸಭೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಕೇವಲ 24 ಗಂಟೆಗಳಲ್ಲಿಯೇ ಸಂಜಯ ವಾಲಿ ಮತ್ತು ಅವರ ಕುಟುಂಬದವರ ಮೇಲೆ ಹಲ್ಲೆ ನಡೆಸಲಾಗಿತ್ತು. ಅವರನ್ನು ಅಲ್ಲಿಂದ ಹೊರಟುಹೋಗುವಂತೆ ಬೆದರಿಕೆ ಸಿಕ್ಕಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಧ್ಯಮದಿಂದ ಪ್ರಸಾರವಾಗಿದ್ದು, ಅನೇಕ ಜನರು ಈ ಪ್ರಕರಣದ ವಿಷಯದಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. (ಇದು ಪೊಲೀಸ್ ಮತ್ತು ಆಡಳಿತಕ್ಕೆ ನಾಚಿಕೆಗೇಡು ! – ಸಂಪಾದಕರು)
ಸಂಜಯ ವಾಲಿಯವರು ಮಾತನಾಡಿ, ಚುನಾವಣೆ ಮುಗಿದ ನಂತರ ಕೆಲವರು ಅವರ ಮನೆಯೆದುರಿಗೆ ಬಂದು ಅವಾಚ್ಯ ಪದಗಳಿಂದ ನಿಂದಿಸಿದರು. ಕುಟುಂಬದ ಮಹಿಳೆಯರ ಮೇಲೆ ಹಲ್ಲೆ ನಡೆಸಿ ಥಳಿಸಿದ್ದಾರೆ. ಅವರು ಕಟ್ಟಿದ ಮನೆಯನ್ನು ಕೆಡವಿದರು. ಅಲ್ಲಿನ ನಿರ್ಮಾಣ ಸಾಮಗ್ರಿಗಳನ್ನು ಎಸೆದರು. ‘ಈ ಘಟನೆಯ ನಂತರ ಮತ್ತೆ 1990ರ ರೀತಿಯ ಅಪಘಾತವನ್ನು ಎದುರಿಸಬೇಕಾಗಬಹುದು ಎಂಬ ಭಯ ಕಾಡುತ್ತಿದೆ’ ಎಂದು ಸಂಜಯ್ ವಾಲಿ ಹೇಳಿದ್ದಾರೆ.
1990ರಲ್ಲಿ ಏನಾಗಿತ್ತು?
1990ರಲ್ಲಿ ಕಾಶ್ಮೀರದಲ್ಲಿ ಜಿಹಾದಿ ಭಯೋತ್ಪಾದಕರು ಕಾಶ್ಮೀರಿ ಹಿಂದೂಗಳ ಶಿರಚ್ಛೇದ ಮಾಡಿದರು. ಹಿಂದೂಗಳ ಹತ್ಯಾಕಾಂಡ ನಡೆಯಿತು. ಅನೇಕ ಹಿಂದೂ ಮಹಿಳೆಯರ ಮೇಲೆ ಬಲಾತ್ಕಾರ ನಡೆದಿದೆ. ಅನೇಕ ದೇವಾಲಯಗಳನ್ನು ಕೆಡವಿದರು. ಕೊನೆಗೆ ಜೀವವನ್ನು ಉಳಿಸಿಕೊಳ್ಳಲು ಹಿಂದೂಗಳು ಎಲ್ಲವನ್ನೂ ಬಿಟ್ಟು ಕಾಶ್ಮೀರದಿಂದ ಪಲಾಯನ ಮಾಡಿದ್ದರು.
ಸಂಪಾದಕೀಯ ನಿಲುವುಕಾಶ್ಮೀರದಲ್ಲಿ ಇಂದಿಗೂ ಜಿಹಾದಿ ಭಯೋತ್ಪಾದನೆ ಅಸ್ತಿತ್ವದಲ್ಲಿ ಇದೆಯೆಂದು ಇದರಿಂದ ಸಾಬೀತಾಗುತ್ತದೆ. ಸರಕಾರ ಜಿಹಾದಿ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ಯಾವಾಗ ನಿರ್ಮೂಲನೆ ಮಾಡುತ್ತದೆ ? |