Sunita Williams Travels to Space 3rd Time: ಭಾರತೀಯ ಮೂಲದ ಅಮೆರಿಕಾದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮೂರನೇ ಬಾರಿಗೆ ಬಾಹ್ಯಾಕಾಶ ಯಾತ್ರೆಯಲ್ಲಿ !

ಈ ಹಿಂದೆ 2006 ಮತ್ತು 2012ರಲ್ಲಿ ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು

ವಾಷಿಂಗ್ಟನ್ : ಭಾರತೀಯ ಮೂಲದ ಅಮೆರಿಕದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಇತಿಹಾಸ ಸೃಷ್ಟಿಸಿದ್ದಾರೆ. ಸುನೀತಾ ವಿಲಿಯಮ್ಸ್ ಇವರು ಓರ್ವ ಸಹೋದ್ಯೋಗಿಯೊಂದಿಗೆ ಮೂರನೇ ಬಾರಿಗೆ ಬಾಹ್ಯಾಕಾಶಕ್ಕೆ ಹಾರಿದ್ದಾರೆ. ಸುನಿತಾ ವಿಲಿಯಮ್ಸ್ ಅವರ ಬಾಹ್ಯಾಕಾಶ ಕಾರ್ಯಾಚರಣೆಯು ಜೂನ್ 5 ರಂದು ಫ್ಲೋರಿಡಾದ ಕೇಪ್ ಕ್ಯಾನವೆರಲ್ ‘ಸ್ಪೇಸ್ ಸ್ಟೇಶನ್’ನಿಂದ ಪ್ರಾರಂಭವಾಯಿತು. ಭಾರತೀಯ ಸಮಯಕ್ಕನುಸಾರ ರಾತ್ರಿ 8:22 ಕ್ಕೆ ಪ್ರಾರಂಭವಾಯಿತು. ಬೋಯಿಂಗ್ ಸ್ಟಾರ್‌ಲೈನರ್ ವಿಮಾನ ಜೂನ್ 6 ರಂದು ರಾತ್ರಿ 9:45 ಕ್ಕೆ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಲಿದೆ. ಈ ಅಭಿಯಾನದಲ್ಲಿ ವಿಲಿಯಮ್ಸ್ ನ ಸಹವರ್ತಿ ಬುಚ್ ವಿಲ್ಮೋರ್ ಜೊತೆಗಿದ್ದಾರೆ.

1. ಸುನೀತಾ ವಿಲಿಯಮ್ಸ್ ಅವರು ಇಂತಹ ಕಾರ್ಯಾಚರಣೆಗೆ ಹೋಗುವ ವಿಶ್ವದ ಮೊದಲ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

2. ಮೇ 1987 ರಲ್ಲಿ, ಸುನೀತಾ ವಿಲಿಯಮ್ಸ್ ಅಮೇರಿಕಾದ ನೇವಲ್ ಅಕಾಡೆಮಿಯಲ್ಲಿ ತನ್ನ ತರಬೇತಿಯನ್ನು ಪೂರ್ಣಗೊಳಿಸಿದಳು. ಇದರ ನಂತರ ಅವರು ಅಮೇರಿಕಾದ ನೌಕಾಪಡೆಗೆ ಸೇರಿದರು. ಅವರು 1998 ರಲ್ಲಿ ನಾಸಾದಿಂದ ಗಗನಯಾತ್ರಿಯಾಗಿ ಆಯ್ಕೆಯಾದರು. ಇದಕ್ಕೂ ಮುನ್ನ ಸುನಿತಾ ವಿಲಿಯಮ್ಸ್ 2006 ಮತ್ತು 2012ರಲ್ಲಿ ಬಾಹ್ಯಾಕಾಶ ಯಾತ್ರೆಯಲ್ಲಿ ಭಾಗವಹಿಸಿದ್ದರು.