ಅಗ್ನಿವೀರ ಯೋಜನೆಯ ಕುರಿತು ಮರುಚಿಂತನೆ ಮತ್ತು ಸಮಾನ ನಾಗರಿಕ ಕಾಯಿದೆಯ ಕುರಿತು ಚರ್ಚಿಸಿ !

ನಿತೀಶ ಕುಮಾರ ಅವರ ಜನತಾ ದಳ (ಸಂಯುಕ್ತ) ಪಕ್ಷದ ಬೇಡಿಕೆ

ನವ ದೆಹಲಿ – ಭಾಜಪ ನೇತೃತ್ವದ ಒಕ್ಕೂಟದ ಪ್ರಮುಖ ಘಟಕ ಪಕ್ಷವಾಗಿರುವ ನಿತೀಶ ಕುಮಾರ ಅವರ ಜನತಾ ದಳ (ಸಂಯುಕ್ತ) ಪಕ್ಷದಿಂದ ಸಮಾನ ನಾಗರಿಕ ಕಾಯಿದೆ, ಅಗ್ನಿವೀರ ಯೋಜನೆ, ಒಂದು ರಾಷ್ಟ್ರ ಒಂದು ಚುನಾವಣೆ ಈ ಮೋದಿಯವರ ಯೋಜನೆಗಳ ಬಗ್ಗೆ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಜನತಾದಳ (ಸಂಯುಕ್ತ) ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ವಕ್ತಾರ ಕೆ.ಸಿ. ತ್ಯಾಗಿ ಯವರು ಮಾತನಾಡಿ, ಈ ಅಂಶಗಳ ಮೇಲೆ ಎಲ್ಲಾ ರಾಜ್ಯಗಳೊಂದಿಗೆ ಮಾತನಾಡುವ ಮತ್ತು ಅವರ ಅಭಿಪ್ರಾಯಗಳನ್ನು ತಿಳಿದುಕೊಳ್ಳುವ ಅವಶ್ಯಕತೆಯಿದೆ, ಇದನ್ನು ನಾವು ಮೊದಲೂ ಹೇಳಿದ್ದೆವು.

ತ್ಯಾಗಿಯವರು ತಮ್ಮ ಮಾತು ಮುಂದುವರಿಸಿ, ನಮ್ಮ ‘ಒಂದು ದೇಶ ಒಂದು ಚುನಾವಣೆ’ ಈ ಅಂಶವನ್ನು ಬೆಂಬಲಿಸುತ್ತೇವೆ. ಅಗ್ನಿವೀರ ಯೋಜನೆಗೆ ಬಹಳ ವಿರೋಧ ವ್ಯಕ್ತವಾಗಿತ್ತು. ಚುನಾವಣೆಯಲ್ಲಿಯೂ ಅದರ ಪರಿಣಾಮ ಕಂಡು ಬಂದಿದೆ. ಈ ಬಗ್ಗೆ ಮತ್ತೊಮ್ಮೆ ಯೋಚಿಸುವ ಅಗತ್ಯವಿದೆ. ಸಮಾನ ನಾಗರಿಕ ಕಾಯಿದೆಯ ಕುರಿತು ನಿತೀಶ್ ಕುಮಾರ್ ಅವರು ಕಾನೂನು ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದು, ‘ಇದಕ್ಕೆ ನಮ್ಮ ವಿರೋಧವಿಲ್ಲ; ಆದರೆ ಇದರ ಮೇಲೆ ಸಮಗ್ರ ಚರ್ಚೆ ಅಗತ್ಯವಿದೆ’ ಎಂದಿದ್ದರು. ಅದೇ ನಿಲುವು ಇಂದಿಗೂ ಇದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಿ !

ತ್ಯಾಗಿ ತಮ್ಮ ಮಾತು ಮುಂದುವರಿಸಿ, ನಾವು ಬಹಳ ಕಾಲದಿಂದಲೂ ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸುತ್ತಿದ್ದೇವೆ. ಒಂದು ವೇಳೆ ಬಿಹಾರದಿಂದ ಜನರ ವಲಸೆ ಬರುವುದನ್ನು ತಡೆಯಬೇಕಾದರೆ ಈ ರೀತಿ ಮಾಡುವುದು ಆವಶ್ಯಕವಾಗಿದೆ ಎಂದು ಹೇಳಿದರು.