Chinese Spacecraft Is Coming Back: ಚಂದ್ರನ ಮೇಲೆ ಇಳಿದ ಚೀನಾದ ಬಾಹ್ಯಾಕಾಶ ನೌಕೆ ಮರಳಿ ಬರುತ್ತಿದೆ !

ಚಂದ್ರನಿಂದ 2 ಕೆಜಿ ಮಣ್ಣು ತರಲಿದೆ

ಬೀಜಿಂಗ್ (ಚೀನಾ) – ಚಂದ್ರನ ದಟ್ಟ ಕತ್ತಲಿನ ಭಾಗದಲ್ಲಿ ಯಶಸ್ವಿಯಾಗಿ ಬಂದಿಳಿದ ಚೀನಾದ ‘ಚಾಂಗಯೀ-3’ ಬಾಹ್ಯಾಕಾಶ ನೌಕೆ ಇದೀಗ ಮರಳಲಿದೆ. ಯೋಜನೆಯ ಪ್ರಕಾರ, ಜೂನ್ 25 ರಂದು ಮಂಗೋಲಿಯಾದ ಮರುಭೂಮಿಯಲ್ಲಿ ಇಳಿಯಲಿದೆ. ಚಂದ್ರನ ಮೇಲೆ ಇಳಿದ ನಂತರ, ಈ ಬಾಹ್ಯಾಕಾಶ ನೌಕೆಯು ಅಂದಾಜು 2 ಕೆಜಿ ಚಂದ್ರನ ಮಣ್ಣನ್ನು ಸಂಗ್ರಹಿಸಿ ಅದನ್ನು ಜೊತೆಗೆ ತರುತ್ತಿದೆ. ಈ ಮಣ್ಣನ್ನು ಸಂಗ್ರಹಿಸುವುದಕ್ಕಾಗಿ ಈ ಯಾನದಲ್ಲಿ ಅಗೆಯುವ ಕೆಲಸ ಮಾಡುವುದಕ್ಕಾಗಿ ಮತ್ತು ನಂತರ ಈ ರಾಶಿಯನ್ನು ಮೇಲೆತ್ತಲು ಯಾಂತ್ರಿಕ ಕೈಗಳನ್ನು ಅಳವಡಿಸಲಾಗಿತ್ತು.

(ಸೌಜನ್ಯ : DW News)

ಚಂದ್ರನಿಂದ ತಂದ ಮಣ್ಣನ್ನು ವಿಶ್ಲೇಷಿಸಿ ಈ ಮೂಲಕ, ವಿಜ್ಞಾನಿಗಳಿಗೆ ಚಂದ್ರ, ಭೂಮಿ ಮತ್ತು ಸೌರವ್ಯೂಹದ ರಚನೆ ಮತ್ತು ವಿಕಾಸ, ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಸಿಗಬಹುದು ಎಂದಿದ್ದಾರೆ.