Congress on LS Polls : ನರೇಂದ್ರ ಮೋದಿ ನೈತಿಕ ಹೊಣೆ ಸ್ವೀಕರಿಸಿ ರಾಜೀನಾಮೆ ನೀಡಬೇಕು ! – ಜೈರಾಮ್ ರಮೇಶ್, ಕಾಂಗ್ರೆಸ್

ನವ ದೆಹಲಿ – ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ದೇಶದಲ್ಲಿ ರಾಜಕೀಯ ವಿದ್ಯಮಾನಗಳು ವೇಗ ಪಡೆದಿವೆ. ನರೇಂದ್ರ ಮೋದಿ ಅವರು ನೈತಿಕ ಹೊಣೆ ಹೊತ್ತು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅವರು ‘ಎಕ್ಸ್’ ನಲ್ಲಿ ಒಂದು ಪೋಸ್ಟ್ ಅನ್ನು ಪ್ರಸಾರ ಮಾಡಿದ್ದಾರೆ. ಈ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು 400 ದಾಟುವ ಘೋಷಣೆಗಳನ್ನು ನೀಡಿತ್ತು; ಆದರೆ ಪ್ರಸ್ತುತ ಫಲಿತಾಂಶಗಳ ಪ್ರಕಾರ ಭಾರತೀಯ ಜನತಾ ಪಕ್ಷದ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ 290 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ ನೇತೃತ್ವದ ‘ಇಂಡಿ’ ಮೈತ್ರಿಕೂಟ 235 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ ಎಂದಿದ್ದಾರೆ.