ಇಸ್ರೇಲ್ ನಾಗರಿಕರು ಭಾರತದಲ್ಲಿರುವ ಸುಂದರ ಕಡಲ ತೀರಕ್ಕೆ ಭೇಟಿ ನೀಡಬೇಕು !

ಭಾರತದಲ್ಲಿರುವ ಇಸ್ರೇಲ ರಾಯಭಾರ ಕಚೇರಿಯು ಮಾಲ್ಡೀವಗೆ ಪ್ರತ್ಯುತ್ತರ ನೀಡುತ್ತಾ ಕರೆ !

ಟೆಲ್ ಅವಿವ್ (ಇಸ್ರೇಲ್) – ಮಾಲ್ಡೀವ್ ಇಸ್ರೇಲ್‌ನ ನಾಗರಿಕರನ್ನು ಮಾಲ್ಡೀವ್ಸ್‌ನಲ್ಲಿ ಪ್ರವೇಶಿಸುವುದನ್ನು ನಿಷೇಧಿಸಲು ನಿರ್ಧರಿಸಿದ ನಂತರ ಇಸ್ರೇಲ್‌ನಲ್ಲಿ ಸಾಕಷ್ಟು ಆಕ್ರೋಶವೆದ್ದಿತ್ತು. ಭಾರತದಲ್ಲಿನ ಇಸ್ರೇಲ್ ರಾಯಭಾರ ಕಚೇರಿಯು `ಎಕ್ಸ್’ನಲ್ಲಿ ಭಾರತದಲ್ಲಿರುವ ಲಕ್ಷದ್ವೀಪ, ಗೋವಾ, ಅಂಡಮಾನ್-ನಿಕೋಬಾರ್ ದ್ವೀಪ ಮತ್ತು ಕೇರಳದ ಸುಂದರವಾದ ಛಾಯಾಚಿತ್ರಗಳನ್ನು ಪ್ರಸಾರ ಮಾಡುವ ಮೂಲಕ ಇಸ್ರೇಲ್ ನಾಗರಿಕರಿಗೆ ಭಾರತದಲ್ಲಿ ಪ್ರವಾಸ ಕೈಗೊಳ್ಳುವಂತೆ ಕರೆ ನೀಡಿದೆ.

ಈ ಪೋಸ್ಟನಲ್ಲಿ ಮಾಲ್ಡೀವ್ಸ್ ಈಗ ಇಸ್ರೇಲ್ ನಾಗರಿಕರ ಮೇಲೆ ನಿಷೇಧ ಹೇರಿರುವುದರಿಂದ, ಇಲ್ಲಿ ನಾವು ಕೆಲವು ಸುಂದರ ಮತ್ತು ಆಶ್ಚರ್ಯಕರ ಭಾರತೀಯ ಬೀಚ್‌ಗಳ ಛಾಯಾಚಿತ್ರಗಳನ್ನು ಪ್ರಸಾರ ಮಾಡುತ್ತಿದ್ದೇವೆ ಎಂದು ಹೇಳಿದೆ. ಈ ಸ್ಥಳಗಳಲ್ಲಿ ಇಸ್ರೇಲಿ ಪ್ರವಾಸಿಗರನ್ನು ಮನಃಪೂರ್ವಕವಾಗಿ ಸ್ವಾಗತಿಸಲಾಗುತ್ತದೆ ಮತ್ತು ಅತ್ಯಂತ ಗೌರವದಿಂದ ನಡೆದುಕೊಳ್ಳಲಾಗುತ್ತದೆ ಎಂದು ಹೇಳಿದೆ.