Women Lands In Jail: ಗಂಡನ ಭ್ರಷ್ಟಾಚಾರ ಹಣದ ಬಳಕೆ; ಹೆಂಡತಿಗೆ 1 ವರ್ಷ ಜೈಲು ಶಿಕ್ಷೆ

ಮದ್ರಾಸ ಉಚ್ಚನ್ಯಾಯಾಲಯದ ಮಧುರೈ ವಿಭಾಗೀಯ ಪೀಠದ ನಿರ್ಣಯ !

ಮಧುರೈ (ತಮಿಳುನಾಡು) – ಮದ್ರಾಸ್ ಹೈಕೋರ್ಟ್‌ನ ಮಧುರೈ ವಿಭಾಗೀಯ ಪೀಠವು ಪತಿಯ ಭ್ರಷ್ಟಾಚಾರದ ಹಣವನ್ನು ಉಪಭೋಗಿಸಿರುವ ಪತ್ನಿಗೆ 1 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈ ಮಹಿಳೆಯ ಪತಿ ಸರ್ಕಾರಿ ಸಿಬ್ಬಂದಿಯಾಗಿದ್ದ. ಆತ ತೀರಿಕೊಂಡಿದ್ದರಿಂದ ನ್ಯಾಯಾಲಯವು ಆತನ ಪತ್ನಿಯನ್ನು ಭ್ರಷ್ಟಾಚಾರದ ಅಪರಾಧಿ ಎಂದು ಪರಿಗಣಿಸಿ ಅವಳಿಗೆ ಶಿಕ್ಷೆಯನ್ನು ವಿಧಿಸಿತು. ಈ ಮಹಿಳೆಯ ಹೆಸರು ದೇವನಾಯಕಿ ಆಗಿದೆ.

ಈ ಪ್ರಕರಣದಲ್ಲಿ ನ್ಯಾಯಾಲಯವು, ತನ್ನ ಪತಿ ಲಂಚವನ್ನು ತೆಗೆದುಕೊಳ್ಳದಂತೆ ತಡೆಯುವುದು ಸರಕಾರಿ ನೌಕರನ ಪತ್ನಿಯ ಕರ್ತವ್ಯ ಎಂದು ಹೇಳಿದೆ. ಲಂಚಗುಳಿತನದಿಂದ ದೂರವಿರುವುದೇ ಜೀವನದ ಮೂಲ ತತ್ವಜ್ಞಾನವಾಗಿದೆ. ಒಂದು ವೇಳೆ ಯಾರಾದರೂ ಲಂಚ ತೆಗೆದುಕೊಂಡರೆ ಅದು ಅವನ ಮತ್ತು ಕುಟುಂಬವನ್ನು ನಾಶಮಾಡುತ್ತದೆ ಒಂದು ವೇಳೆ ಅವನು ಅಕ್ರಮವಾಗಿ ಗಳಿಸಿದ ಹಣವನ್ನು ಅವರು ಉಪಭೋಗಿಸಿದರೆ, ಅವರಿಗೆ ಅದನ್ನು ಅನುಭವಿಸಬೇಕಾಗುತ್ತದೆ. ಈ ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಭ್ರಷ್ಟಾಚಾರದ ಪ್ರಾರಂಭ ಮನೆಯಿಂದಲೇ ಆಗುತ್ತದೆ ಮತ್ತು ಮನೆಯ ಯಜಮಾನಿ ಭ್ರಷ್ಟಾಚಾರದಲ್ಲಿ ಪಾಲುದಾರಳಾಗಿದ್ದರೆ, ಭ್ರಷ್ಟಾಚಾರಕ್ಕೆ ಅಂತ್ಯವಿಲ್ಲ. ಯಜಮಾನಿಯು ಅಕ್ರಮವಾಗಿ ಸಂಪಾದಿಸಿದ ಹಣದಿಂದ ಲಾಭವಾಗಿದೆ ಮತ್ತು ಈಗ ಅವಳು ಶಿಕ್ಷೆಯನ್ನು ಅನುಭವಸಬೇಕಾಗುತ್ತದೆ ಎಂದು ಹೇಳಿದೆ.

ಸಂಪಾದಕೀಯ ನಿಲುವು

ಈ ನಿರ್ಣಯದಿಂದ ಈಗ ಪ್ರತಿಯೊಬ್ಬ ಭ್ರಷ್ಟಾಚಾರಿಯ ಪತ್ನಿಗೆ ಶಿಕ್ಷೆಯನ್ನು ವಿಧಿಸುವ ಆವಶ್ಯಕತೆಯಿದೆ. ಕಾರಣ ಪತಿ ಭ್ರಷ್ಟಾಚಾರಿಯಾಗಿರುವುದು ಹೆಚ್ಚಿನ ಪತ್ನಿಯರಿಗೆ ತಿಳಿದಿರುತ್ತದೆ ಮತ್ತು ಆ ಪತಿ ಭ್ರಷ್ಟಾಚಾರದಿಂದ ಗಳಿಸಿರುವ ಹಣದಲ್ಲಿ ಪಾಲುದಾರ ಆಗಿರುತ್ತಾಳೆ !