ಪಂಢರಪುರದಲ್ಲಿ 79 ದಿನಗಳ ನಂತರ, ವಾರಕಾರಿಯವರಿಗೆ ಶ್ರೀ ವಿಠ್ಠಲನ ಪಾದಸ್ಪರ್ಶ ದರ್ಶನ ಆರಂಭ

ವಾರಕರಿಯರಲ್ಲಿ ಉತ್ಸಾಹಭರಿತ ವಾತಾವರಣ !

ಪಾದಸ್ಪರ್ಶ ದರ್ಶನದ ನಂತರ ನಯನ ಮನೋಹರ ಶ್ರೀ ವಿಠ್ಠಲನ ಮೂರ್ತಿ ಮತ್ತು ವಾರಕರಿಯವರ ಭಾವ ಜಾಗೃತಗೊಳಿಸುವ ಶ್ರೀ ರುಕ್ಮಿಣಿದೇವಿಯ ಪ್ರತಿಮೆ

ಪಂಢರಪುರ – ಕಳೆದ 79 ದಿನಗಳಿಂದ ವಾರಕರಿಗಳು ಪಾಂಡುರಂಗನ ಚರಣಗಳನ್ನು ನೋಡಲು ಹಾತೊರೆಯುತ್ತಿದ್ದರು. ಅಂತಿಮವಾಗಿ ಜೂನ್ 2 ರಂದು, ಅಂದರೆ ವೈಶಾಖ ಕೃಷ್ಣ ಏಕಾದಶಿಯ ದಿನ ಬೆಳಗಾಯಿತು. ಬೆಳಗಿನ ಜಾವ 4 ಗಂಟೆಗೆ ‘ಶ್ರೀ ವಿಠ್ಠಲ-ರುಕ್ಮಿಣಿ ದೇವಸ್ಥಾನಗಳ ಸಮಿತಿ’ಯ ಸಹ ಅಧ್ಯಕ್ಷ ಹ.ಭ.ಪ. ಗಹಿನಿನಾಥ ಮಹಾರಾಜ ಔಸೇಕರ ಅವರ ಸನ್ನಿಧಿಯಲ್ಲಿ ಶ್ರೀ ವಿಠ್ಠಲನ ಪೂಜೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸೊಲ್ಲಾಪುರ ಜಿಲ್ಲಾ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಉಪಸ್ಥಿತರಿದ್ದರು. ಪಾದಸ್ಪರ್ಶ ದರ್ಶನವು ಎಲ್ಲಾ ಭಕ್ತಾದಿಗಳಿಗೆ ಬೆಳಿಗ್ಗೆ 7 ರಿಂದ ತೆರೆದಿರುತ್ತದೆ.